ಸುಮಾ ಕಂಚೀಪಾಲ ಕಥೆ – ಗೋಡೆಗೆ ಅಂಟಿದ ಮುಖ

ಸುಮಾ ಕಂಚೀಪಾಲ

ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ ಮನೆತುಂಬಾ ಬಟ್ಟೆ ಮತ್ಯಾರೂ ಇಲ್ಲ ಇವನೊಬ್ಬನೆ. ಯಾಕೆ ಗೊತ್ತಾ? ಇವನು ಊರು ಬಿಟ್ಟು ಪಟ್ಟಣಕ್ಕೆ ಬಂದುಳಿದು ಹಲವು ವರ್ಷಗಳೇ ಕಳೆದಿವೆ. ಇವನು ಹೊಲಿಗೆ ಮಾಡುವ ಒಬ್ಬ ಸಾಮಾನ್ಯ ವ್ಯಕ್ತಿ. ಅಗತ್ಯಕ್ಕಿಂತ ಹೆಚ್ಚಿನದನ್ನು ಎಂದಿಗೂ ಬಯಸದ ಸದ್ಗುಣಿ. ಅವನ ಬಾಳ ಸಂಗಾತಿ ಹೊಲಿಗೆ ಯಂತ್ರವೇ ಆಗಿಹೋಗಿದೆ. ಆದರೆ ನಮ್ಮ ನಾಣಿಗೀಗ ಮದುವೆ ವಯಸ್ಸು ಬಂದಿದೆ.

‘ನಿಮ್ಮಲ್ಲಿ ಯಾರಾದರೂ ಒಳ್ಳೆಯ ಹೆಣ್ಣಿದ್ದರೆ ತಿಳಿಸಿ’ ಎಂದು ಹೇಳುವುದಕ್ಕು ಅವನ ಜನರು ಅಲ್ಲಿಲ್ಲಾ. ಇವನೇ ಹಾಗೆ ಹೇಳಿಕೊಳ್ಳೊಕೆ ಆಗೋದಿಲ್ಲಾ. ವರ್ಷಕೊಮ್ಮೆ ಬಂದು ತನ್ನ ತಾಯಿಗೆ ಸೀರೆಕೊಟ್ಟು, ಸ್ವಲ್ಪ ಮಟ್ಟಿನ ಹಣ ಕೊಟ್ಟು ಹೋಗುವುದು ಅವನ ರೂಡಿ ದೂರದಿಂದ ಬಂದರು ಮನೆಯಿಂದ ಅಣ್ಣ ಹೊರಹಾಕಿದ್ದ ಎನ್ನುವ ಕಾರಣಕ್ಕಾಗಿ ಈತ ಊರಿಗೆ ಬಂದರೂ, ಮನೆಗೇ.. ಬಂದರು ಅಂಗಳದಲ್ಲಿಯೇ ಕುಳಿತು ಒಂದು ಗುಟುಕು ನೀರನ್ನೂ ಕುಡಿಯದೆ ಹೊರಗಿನಿಂದ ಹೊರಗೇ ತಾಯಿಯನ್ನು ಮಾತನಾಡಿಸಿ ಹೋಗುತ್ತಿದ್ದ. ಇದು ಹೀಗೆ ನಡೆಯಲು ಪ್ರಾರಂಭವಾಗಿ ಏಳೆಂಟು ವರ್ಷಗಳೇ ಕಳೆದು ಹೋಗಿದೆ.

ಅತ್ತಿಗೆಗೆ ಮೈದುನನ್ನು ಕಂಡು ಕನಿಕರ ಗಂಡನಿಗೆ ಕಾಣದ ಹಾಗೆ ಹಲಸಿನ ಹಪ್ಪಳ, ಸಂಡಿಗೆ, ಚಕ್ಕುಲಿ ಇಂತವನ್ನು ಡಬ್ಬಿಯಲ್ಲಿ ತುಂಬಿ ಗಂಡನ ಕಣ್ಣಿಗೆ ಕಾಣದಂತೆ ಅವನ ಗಾಡಿಗೆ ಮುಟ್ಟಿಸುತ್ತಿದ್ದಳು. ತಾಯಿಯಂತೂ ಇಂತ ಪರಿಸ್ಥಿತಿ ನೋಡಲಾರದೇ ಪ್ರತೀ ಬಾರಿಯೂ ಅಳುವುದೆ ಅವಳ ಕೆಲಸ. ಇತ್ತೀಚಿಗೆ ನಾಣಿ ವರ್ಷಕ್ಕೊಮ್ಮೆ ಬರುವವನು ವಾರ ವಾರ ಪೋನಿಸಿ ಮೂರು ತಿಂಗಳಿಗೊಮ್ಮೆ ಮನೆಕಡೆ ಬರಲು ಆರಂಭಿಸಿದ್ದ. ಪಾಪ ಅವನ ಮನಸ್ಸಿನಲ್ಲಿ ಏನು ತಳಮಳವಿತ್ತೊ ತಿಳಿಯದು ಸುಮ್ಮನೆ ಕಣ್ಣಂಚು ತೇವವಾಗುತ್ತಿತ್ತು. ತಾಯಿಯನ್ನು ಕರೆದುಕೊಂಡೇ ಹೋಗಬೇಕೆಂದು ನಿರ್ಧರಿಸಿ ಬಂದವನು ಅವನಾಗಿದ್ದ.

ಆದರೆ ಇತ್ತೀಚಿಗೆ ಅವನು ಬಹಳಸಲ ಮನೆಕಡೆ ಬಂದುದರಿಂದ ಅಣ್ಣ ಸ್ವಲ್ಪ ಗರಂ ಆಗಿದ್ದ. ಇವನು ಆಸ್ತಿಯಲ್ಲಿ ಪಾಲು ಕೇಳಲೆಂದೆ ಬರುತ್ತಿದ್ದಾನೆ ಎಂಬ ಸಣ್ಣ ಸಂಶಯವೂ ಅವನಲ್ಲಿತ್ತು. ಮನೆಬಿಟ್ಟು ಹೋದವನು ಪದೆ ಪದೆ ಮನೆಕಡೆ ಬರೊದ್ಯಾಕೆ ಅಂತ ದಬಾಯಿಸಿ ಕಳಿಸಿದ್ದ ಆದರೂ ಧೈರ್ಯ ಮಾಡಿ ಅಣ್ಣನೊಡನೆ ಗಟ್ಟಿಯಾದ ಒಂದೆರಡು ಮಾತನಾಡಿ ತಾಯಿಯನ್ನು ಕರೆದುಕೊಂಡು ಪಟ್ಟಣಕ್ಕೆ ಬಂದ.

ಹೊಲಿಗೆಯನ್ನು ಸ್ವಲ್ಪದಿನದ ಮಟ್ಟಿಗೆ ನಿಲ್ಲಿಸಿ ಕಲಿತು ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ. ಅದೇ ಸಂತೋಷದಲ್ಲಿ ಅವನ ತಾಯಿ ಇವನೀಗ ತನ್ನ ದುಡಿಮೆಯಿಂದ ಮನೆತೂಗಿಸಿಕೊಂಡು ಹೋಗಬಲ್ಲ ಇವನಿಗೆ ಮದುವೆ ಮಾಡಬೇಕು ಎಂಬ ಬಯಕೆಹೊಂದಿದಳು. ಆದರೆ ಅಣ್ಣ ಇವನ ಮದುವೆ ಮಾಡಿಸುವುದಿಲ್ಲ ಎಂಬುದು ತಿಳಿದಿತ್ತು. ನೀನೆ ಯಾರನ್ನಾದರೂ ಪ್ರೀತಿಸಿ ಮದುವೆಯಾಗು ಎಂದು ಹೇಳಿ ಮನೆಗೆ ವಾಪಸ್ ಬಂದಿದ್ದಳು .ಇದಾದ ಆರೆ ತಿಂಗಳಲ್ಲಿ ಒಂದು ಕೆಟ್ಟಘಟನೆ ನಡೆದೇ ಹೋಯಿತು.

ಒಮ್ಮೆ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದ ನೀರು ಬೇಕಾ? ಏನಾಯಿತು ಎಂದು ವಿಚಾರಿಸುವುದಕ್ಕು ಹತ್ತಿರ ಯಾರೂ ಇರಲಿಲ್ಲ. ತಾನು ಪ್ರಜ್ನೆ ತಪ್ಪಿ ಬಿದ್ದಿದ್ದೇನೆ ಎಂಬ ಅರಿವು ಅವನಿಗಿಲ್ಲ. ಒಲೆಯಮೇಲೆ ಕಾಯಿಸಲಿಟ್ಟ ಸಾಂಬಾರು ಅಲ್ಲೆ ಕತ್ತಿಹೋಗಿತ್ತು. ಪ್ರಜ್ನೆಬಂತು ಆದರೆ ತನಗೇನಾಗಿತ್ತು ಪ್ರಜ್ನೆತಪ್ಪಿ ಎಷ್ಟು ಸಮಯವಾಗಿತ್ತು ಎಂದು ಅವನಿಗೆ ಹೊಳೆಯಲಿಲ್ಲ. ಆ ಬಾರಿ ಅವನು ಅದನ್ನು ನಿರ್ಲಕ್ಷ್ಯ ಮಾಡಿದ. ಇನ್ನೊಮ್ಮೆ ಹೀಗೆ ಆಯಿತು ಆ ಸಾರಿ ಬಿದ್ದಾಗ ನೆತ್ತರಹೆಪ್ಪುಗಟ್ಟಿ ಮುಖದಮೇಲೆ ಕರಿಕಲೆಯಾಗಿತ್ತು ಎಲ್ಲರೂ ಏನಾಯಿತು ಎಂದುಕೇಳುವವರೆ.

ಹಾಗೆ ಸ್ವಲ್ಪ‌ ಕಾಲು ಜಾರಿ ಬಿದ್ದೆ ಎಂಬ ಉತ್ತರವನ್ನೆ ಎಲ್ಲರಿಗೂ ನೀಡುತ್ತಿದ್ದ. ಒಮ್ಮೆ ಸ್ಟೇಷನ್ ಅಲ್ಲೆ ಹೀಗೆ ಬಿದ್ದಾಗ ಆಸ್ಪತ್ರೆಗೆ ಸೇರಿಸಿದ್ದರು ಆಗ ತಿಳಿದುಬಂದು ಮೆದುಳಿನಲ್ಲಿ ನರಗಳಲ್ಲಿ ರಕ್ತಹೆಪ್ಪುಗಟ್ಟುತ್ತಿದೆ ಎಂದು. ಹೆಚ್ಚೆಂದರೆ ಒಂದು ತಿಂಗಳು ಬದುಕಬಹುದು ಎಂಬ ಕಠು ಸತ್ಯವನ್ನು ತಿಳಿಸಲಿಕ್ಕು ಕುಟುಂಬದ ಮತ್ಯಾರು ಜೊತೆಗಿಲ್ಲ. ಈತ ಆ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟ ಆದರೆ ತುಂಬಾ ಕಾಯಿಲೆ ಹೆಚ್ಚಾಗಿ ಊಟಮಾಡಲು ಆಗದೇ ಇರುವಾಗ ಆಚೀಚೆ ಮನೆಯವರೇ ಒತ್ತಾಯ ಮಾಡಿ ಮನೆಗೆ ತಾವಾಗಿ ಪೋನಿಸಿ ವಿಷಯ ತಿಳಿಸಿದರು.

ಅಣ್ಣ ಕೊನೆಗಳಿಗೆಯಲ್ಲಿ ಅಲ್ಲಿಗೆ ಬಂದು ನಿನ್ನ ಜೊತೆ ನಾವಿದ್ದೇವೆ ಏನೂ ಹೆದರಬೇಡ ಎನ್ನುವಾಗ. ಇವನ ಕಣ್ಣಾಲಿಗಳು ತೇವ ಗೊಂಡವು ಅಣ್ಣನನ್ನು ತಬ್ಬಿಕೊಂಡು ಅತ್ತು ಬಿಟ್ಟ. ಹೇಗಾದರು ನನ್ನನು ಉಳಿಸಿಕೊಳ್ಳಿ ನನಗೆ ಬದುಕುವ ಹಂಬಲವಿದೆ ಎನ್ನುತಿರುವಾಗಲೇ ಮತ್ತೆ ಪ್ರಜ್ನೆ ತಪ್ಪಿತ್ತು ಮತ್ತೆ ಅವನು ಕಣ್ಣು ಪಡೆಯುವುದರಲ್ಲಿ  ಅವನ ಸ್ವಂತ ಊರಿನಲ್ಲಿ ತನ್ನ ಹಳೆಯ ಕೋಣೆಯಲ್ಲಿ ಮಲಗಿದ್ದ ಪಕ್ಕದಲ್ಲಿ ಅಣ್ಣ ಅತ್ತಿಗೆ ತಾಯಿ ಇದ್ದರು ಇದನ್ನು ಅವನಿಂದ ನಂಬಲಾಗಲಿಲ್ಲ. ಅಷ್ಟೊಂದು ಸಂತೋಷವಾಗಿ ಮಾತೆ ಹೊರಡಲಿಲ್ಲ. ಸಾಯುವುದಕ್ಕು ಮೊದಲು. ನಾನು ಬದುಕಿದ್ದು ಇದೇ ಘಳಿಗೆಗಾಗಿ ಈಗ ನಾನು ಸತ್ತರೂ ಚಿಂತೆಯಿಲ್ಲ ಎಂಬ ಮಾತನ್ನು ಆಡಿದ್ದ. ಈಗ ಆ ಗೋಡೆಗೆ ಪೋಟೋ ತೂಗಿಹಾಕಿ ಎರಡು ವರ್ಷ ಆಯಿತು. !

‍ಲೇಖಕರು Admin

September 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: