ಸುಮಾ ಆನಂದರಾವ್‌ ಸರಣಿ 3 – ಸ್ವಿಟ್ಜರ್ಲ್ಯಾಂಡ್ ರೈನೆ ಜಲಪಾತ

ಸುಮಾ ಆನಂದರಾವ್‌

3

Germany ಯ Stuttgart ನಿಂದ ಬೆಳಿಗ್ಗೆ Switzerland ನ Rhine fall ನೆಡೆಗೆ ಪಯಣ. ಕಾರಿನಲ್ಲಿ ಸುಮಾರು ಎರಡು ಗಂಟೆಯ ಹಾದಿ. ಸುತ್ತಲೂ ಕಣ್ಣು ಹಾಯಿಸುವವರೆಗೂ ಹಸಿರೋ ಹಸಿರು. ಅಚ್ಚುಕಟ್ಟಾದ ವಿಶಾಲವಾದ ರಸ್ತೆಗಳು, ಎಲ್ಲ ವಾಹನಗಳು ನಿಗದಿಗೊಳಿಸಿದ ವೇಗದಲ್ಲಿ ಯಾವುದೇ ಆತಂಕವಿಲ್ಲದೆ ಓಡುವ ರೀತಿ, ರಸ್ತೆಯ ಪಕ್ಕದಲ್ಲಿ ಖಾಲಿ ಜಾಗವೇ ಕಾಣದಂತೆ ಹಸಿರ ಕಂಬಳಿ ಹಾಸಿದಂತೆ ಕಾಣುವ ಹುಲ್ಲ ಹಾಸಿಗೆ. ಅನತಿ ದೂರದಲ್ಲಿ ಎಲೆ ಕೋಸಿನ ಹೊಲಗಳು, ಕೆಲವೆಡೆ ಗೋಧಿಯ ತೆನೆ ಹೊತ್ತ ಒಂದೇ ಎತ್ತರದ ಗಿಡಗಳು. ಹಸಿರು, ತಿಳಿಹಸಿರು, ಹಳದಿ ಮಿಶ್ರಿತ ಹಸಿರು ಹೀಗೆ ಕಣ್ಣಿಗೆ ಹಬ್ಬದಂತಿರುತ್ತದೆ. 

ದೂರದಲ್ಲಿ ದಟ್ಟ ಕಪ್ಪು ಮಿಶ್ರಿತ ಹಸಿರು ಕಾಣುವ ಕ್ರಿಸ್ಮಸ್ ಗಿಡಗಳೇ ತುಂಬಿದ ಒತ್ತಾದ Black forest ಎಂದು ಕರೆಯಲ್ಪಡುವ ಕಾಡು, ಮೇಲೆ ಶುಭ್ರವಾದ ಆಕಾಶ, ಆಗೊಮ್ಮೆ ಈಗೊಮ್ಮೆ ಇಣುಕುವ ದಿನಕರ, ಭೂ ರಮೆಗೆ ಹಸಿರು ಬಣ್ಣದಲ್ಲಿ ಎಷ್ಟು ಬಗೆ ಇವೆಯೋ ಅಷ್ಟು ಉಡುಗೆ ತೊಡುವ ಆಸೆಯೇನೋ! ಹೀಗೆ ಪ್ರಕೃತಿಯು ನಳನಳಿಸುತ ಸಂಭ್ರಮಿಸುವದ ನೋಡಲು ಸಂತಸವಾಗುತ್ತದೆ.

ಅಲ್ಲಲ್ಲಿ ಸಿಗುವ ಹಳ್ಳಿಗಳು, ಒಂದೇ ತೆರನಾಗಿ, ಒಂದೇ ಆಕಾರ ಎತ್ತರದಿಕಾಣುವ ಮನೆಗಳು ಏಕತಾನತೆಯನ್ನು ಮೆರೆಯುತ್ತವೆ. ಪುಟ್ಟ ಪುಟ್ಟ ರಸ್ತೆಗಳು ಸಹ ಸ್ವಚ್ಛವಾಗಿ ಶುಭ್ರವಾಗಿ ಕಾಣುತ್ತಿವೆ. ಮಳೆ ನೀರು ಬಿದ್ದ ತಕ್ಷಣ ಕ್ಷಣ ಮಾತ್ರದಿ ಹರಿದು ಹೋಗಿ ಊರಿಗೆ ಊರೇ ಮಿಂದು ಸಜ್ಜಾದಂತಿರುತ್ತದೆ. ಹೋದಬಾರಿ ಬಂದಾಗ ಚಳಿಗಾಲ ಹಿಮದ ಹೊದಿಕೆ ಹೊದ್ದ ಪ್ರಕೃತಿ ಈಗ ಹಸಿರ ಸಿರಿ.

 ಹೀಗೆ ಒಂದು ಗಂಟೆ ಪಯಣಿಸಿದ ನಂತರ ಅಲ್ಲಿ Gas station ಸಿಗುತ್ತದೆ. ಪಕ್ಕದಲ್ಲಿ ದೊಡ್ಡ ಬೇಕರಿ, ಹೊರಗಡೆ ಸುತ್ತಲೂ ಹಸಿರ ಹಬ್ಬವನ್ನು ಕಣ್ಣು ತುಂಬಿಕೊಳ್ಳುತ್ತ ತಿನಿಸ ಸವಿಯಲು ಮರದಿಂದ ಮಾಡಿದ Table chair ಗಳು, ಮಕ್ಕಳಿಗೆ ಜಾರುಬಂಡೆ ಉಯ್ಯಾಲೆ ಅದೊಂದು ಅದ್ಭುತ. ಮನಸೋ ಇಚ್ಛೆ ರಸದೂಟ ಸವಿದ ನಂತರವೇ ಮುಂದಿನ ಪಯಣ. ಅರ್ಧ ಮುಕ್ಕಾಲು ಗಂಟೆಗೆ Schaffhausen ಎಂಬ ಸ್ಥಳವನ್ನು ತಲುಪುತ್ತೇವೆ. ಇದು ಸ್ವಿಟ್ಜರ್ಲ್ಯಾಂಡ್ ಗೆ ಸೇರಿದೆ. ಅಲ್ಲಿಂದ ಏಳು ಕಿಲೋಮೀಟರು ಸಾಗಿದರೆ Rhine falls ತಲುಪುತ್ತೇವೆ.

ಈ Rhine ನದಿಯು ಯೂರೋಪಿನ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಜರ್ಮನಿ ಸ್ವಿಟ್ಜರ್ಲ್ಯಾಂಡ್ ನ ಬಹುತೇಕ ಭಾಗಗಳಲ್ಲಿ ಹರಿಯುತ್ತದೆ. ಈ ಜಲಪಾತವುಸಹ ಸ್ವಿಟ್ಜರ್ಲ್ಯಾಂಡ್ ಗೆ ಸೇರಿದೆ. 150 ಮೀಟರ್ ಅಗಲ 23ಮೀಟರ್ ಯೆತ್ತೆರ ಹೊಂದಿದೆ. ಇಲ್ಲಿನ ವಿಶೇಷವೆಂದರೆ ನದಿಯು ಕಲ್ಲಿನ ಗುಡ್ಡಗಳ ಬಳಸಿ ಹಲವು ಕವಲುಗಳಾಗಿ ರಭಸವಾಗಿ ಭೋರ್ಗರೆಯುತ್ತಾ ಧುಮುಕುತ್ತದೆ. ಜಲಪಾತದ ಅಂದವನ್ನು ಸವಿಯಲು ದೋಣಿವಿಹಾರವಿದೆ.

ಈ ದೋಣಿಗಳು ಜಲಪಾತ ದಅಭಿಮುಖವಾಗಿ ಸಾಗಿ ಕಲ್ಲು ಗುಡ್ಡ ತಲುಪುವುದು ನಿಜಕ್ಕೂ ಸಾಹಸವೇ ಸರಿ. ಅಲ್ಲಿಂದ ಇಳಿದು ಮೆಟ್ಟಿಲುಗಳನ್ನು ಹತ್ತಿ ನೀರ ಸಿಂಚನದ ಮಧ್ಯೆನಿಂತು ಮೇಲಿನಿಂದ ನೋಡುವ ನೋಟ ಅತ್ಯದ್ಭುತ. ಎಲ್ಲೆಲ್ಲೂ ನೀರೇ ನೀರು. ಪ್ರಕೃತಿಯ ವೈಭವದೆದಿರು ಹೊಗಳಿಕೆಯ ಹೋಲಿಕೆಯ ಪದಗಳಿಗೆ ಜಾಗವಿಲ್ಲ. ಅಲ್ಲದೆ ಸುತ್ತಲೂ ನಡೆದು ನೋಡಲು ವ್ಯವಸ್ಥೆ ಇದೆ. ಒಂದೊಂದು ಕೋನದಿಂದ ಒಂದೊಂದು ಬಗೆಯ ದೃಶ್ಯ ರೋಮಾಂಚನಗೊಳಿಸುತ್ತದೆ. ಪುರಾತನವಾದ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಸಹ ಕಾಣಬಹುದು.

‍ಲೇಖಕರು Admin

September 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: