ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
**
ಯುದ್ಧ ಮುಂಚೂಣಿಯಲ್ಲಿ ಟೆಡ್ಡಿ ಬೇರ್
(ಇರ್ಪಿನ್, ಉಕ್ರೇನ್)
ಬದುಕುಳಿದ ಟೆಡ್ಡಿ ಬೇರ್
ಅಧ್ಯಕ್ಷತೆ ವಹಿಸಿತ್ತು
ನಾಗರಿಕತೆಯ
ಸಹಾನುಭೂತಿಯ
ಮಾನವೀಯತೆಯ ಅವಶೇಷಗಳ ಮೇಲೆ ಕೂತು
ವಿನೋದ ಮತ್ತು ಆಟದ ಭಗ್ನಾವಶೇಷ
ಕೂತಿತ್ತು ಟೆಡ್ಡಿ
ಬೆಕ್ಕಿನ ಅಸ್ಥಿಪಂಜರದ ಮೇಲೆ
ಅವಳ ಮೂಳೆಗಳು
ಮುದುರಿದ ಶವದ ವಿನ್ಯಾಸದಲ್ಲಿ
ಚುಕ್ಕಾಚೂರಾದ
ಮಂಚಗಳು ಮೆತ್ತೆಗಳು
ಕ್ಷಿಪಣಿಗಳು ಮನೆಗಳನ್ನು ಛಿದ್ರಗೊಳಿಸುತ್ತಿವೆ
ಚೀರಿಕೆ ಗೋಡೆಗಳನ್ನು ಕತ್ತರಿಸುತ್ತಿವೆ
ನಳಿಕೆಗಳಂತೆ ಗಂಟಲು
ಶೂಟ್ ಮಾಡುತ್ತಿವೆ ಚೂರುಗಳನ್ನು
ಒಂದೇ ಬದುಕುಳಿದ ಟೆಡ್ಡಿ ಬೇರ್
ಸುತ್ತ ಹಿಡಿವ ಕೈಗಳಿಲ್ಲ
ಅಂಟಿಕೊಂಡಿದೆ ಚರ್ಮ
ಹತ್ಯಾಕಾಂಡದತ್ತ ದೃಷ್ಟಿ ನೆಟ್ಟು
ಬಿಳಿ ಗುಂಡು ಬಟನ್ ಗಳು ಗಿರಕಿ ಹೊಡೆಯುತ್ತಿವೆ
ಕಾಣದ ಕಣ್ಣುಗಳಲ್ಲಿ
ಆಘಾತದಿಂದ ನಿಮಿರಿ ನಿಂತಿದೆ ಟೆಡ್ಡಿಯ ಕೂದಲು
ಮಣಿಯದ ಬಿರುಗೂದಲು ಚುಚ್ಚುತ್ತವೆ
ಲಕ್ಷಲಕ್ಷ ಹೃದಯಗಳನ್ನು
ಉಪ್ಪುಪ್ಪಾದ ನೊರೆ ಕಡಲಾಗಿಸಿ
ಟೆಡ್ಡಿ ಬೇರ್ ಗಳ ಸುನಾಮಿ ಸಾಗಿದೆ
ಕವಾಯತಿನಲ್ಲಿ ಯುದ್ಧಭೂಮಿಗೆ
ಹುಡುಕುತ್ತಾ ಅಂಬೆಗಾಲು ಕಂದಮ್ಮಗಳನ್ನು
***
ಉಕ್ರೇನ್ ಹನಿಗವನಗಳು
-1-
ಇದು ಎರಡನೇ ಮಹಾಯುದ್ಧದ
ರಿವೈಂಡ್
ಮರುಕಳಿಸಿದೆ ಬಾಂಬ್ ಧಾಳಿ
ಇದು ಎಪ್ಪತ್ತು ವರ್ಷಗಳ ನಂತರ ಜನರನ್ನು ಕೊಲ್ಲುತ್ತದೆ
-2-
ಮಾರಣಾಂತಿಕ ದುಃಸ್ವಪ್ನಗಳನ್ನು ಗರ್ಭದಲ್ಲಿಟ್ಟುಕೊಂಡು
ಮುಳುಗಿತು ಕ್ಷಿಪಣಿ ಹೊತ್ತ ಗಸ್ತು ನೌಕೆ ಮೊಸ್ಕ್ವಾ
ಬಾಂಬುಗಳನ್ನು ನುಂಗಿತು ಕಪ್ಪು ಸಮುದ್ರ
ಉಳಿಸಿ ಸಾವಿರ ಸಾವುಗಳನ್ನು
-3-
ಗೋಡೆಗಳ ಮೇಲೆ ಗುಂಡಿನ ಗುರುತುಗಳು
ಯುದ್ಧದ ಅವಶೇಷಗಳು
ಹಿಂದೆ ಮನೆಯಲ್ಲಿ ಉಳಿದ ಜನರ
ವಾಸಿಯಾಗದ ಗಾಯಗಳು
-4-
ಬಾಂಬುಗಳಿಂದ ಹುಟ್ಟಿದ ದೆವ್ವಗಳ
ಸಾವನ್ನು ಸುಲಿಯಲಾಗಿದೆ
ಅವರ ಮಾರಣಾಂತಿಕ ಉಡುಪು ಇಲ್ಲದೇ
ಅವರು ಬದುಕುತ್ತಾರೆ ಮತ್ತು ಕಾಡುತ್ತಾರೆ
ಬದುಕುಳಿದವರನ್ನು
-5-
ಅವು ಚಂದ್ರನ ಕುಳಿಗಳಲ್ಲ
ಇವು ಭೂಮಿಯಲ್ಲಿ ಗುರುತು ಮಾಡುತ್ತವೆ
ಮಾನವ ನಿರ್ಮಿತ ಯುದ್ಧ ತಂತ್ರಜ್ಞಾನ
ಇದು ಶತಮಾನದ ಪ್ರಗತಿ ನಡೆ
ವಿನಾಶ ಮತ್ತು ದೊಡ್ಡ ಬೇಟೆಯತ್ತ
***
ಸುಕೃತ ಪೌಲ್ ಕುಮಾರ್, ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಕವಿ, ಅನುವಾದಕಿ, ವಿಮರ್ಶಕಿ ಮತ್ತು ಕಲಾವಿದೆ.
0 ಪ್ರತಿಕ್ರಿಯೆಗಳು