ಸಿ ಸುವರ್ಣ ಕೆ ಟಿ ಶಿವಪ್ರಸಾದ್
ನೆನಪುಗಳು ಮರುಕಳಿಸುತ್ತಿವೆ
ಹೃದಯದಲ್ಲಿ ಹೆಪ್ಪುಗಟ್ಟಿದ್ದ
ನೋವು ಹುದುಗಿಸಿಟ್ಟಿದ್ದು
ಚರ್ಮದ ಮೇಲಿನ ಕೆಂಪುಗಾಯದಂತೆ
ಗಾಯಕ್ಕೆ ಹಾಕದ ಔಷಧಿಯಿಲ್ಲ
ಒಂದೊಂದು ಗಾಯವು ನೋವಿಂದ
ಚೀರುತಿದೆ ಬಾಧೆ ತಡೆಯಲಾಗದೆ
ನಂಬಿದವರು ನಡುದಾರಿಯಲಿ
ಕೈಬಿಟ್ಟರು ಮನಸ್ಸಿಗೆ ಆದ
ಆಘಾತದಿಂದ ಹೊರಬರದೆ
ಒದ್ದಾಟ ಕಳೆದು ಹೋಗಿರುವ
ಆ ದಿನಗಳು ಮಾಸಿಲ್ಲ ನೆನಪುಗಳು
ಇನ್ನೂ ಹೊಕ್ಕಾಗಿವೆ

ಹೆಪ್ಪುಗಟ್ಟಿದ ಭಾವಗಳು
ಮುಪ್ಪುಹಿಡಿದ ನೆನಪುಗಳ
ಮುತ್ತಿಗೆ ನೆನಪೇ ಇನ್ನೂ
ನನ್ನೊಳಗೆ ಸದಾ ನನ್ನ
ಜೊತೆಗೆ…….
ನೆನಪುಗಳೇ ಹೀಗೆ
ಅವಮಾನ ಅಪಮಾನ
ಸಹಿಸಿ ಮರೆಯಲೆತ್ನಿಸಿದರೂ
ಕಾಡುವವು ಬೆಂಬಿಡದೆ
ನೋವು ನುಂಗಿದ ನೆನಪು
ಸದಾ ಕಾಡುತ್ತಿದೆ
0 ಪ್ರತಿಕ್ರಿಯೆಗಳು