‘ಸಿರಿಯಜ್ಜಿ’ ಸಂಭ್ರಮ…

ಮಲ್ಲಿಕಾರ್ಜುನ ಕಲಮರಹಳ್ಳಿ

ಕಳ್ಳೆ ಸಾಲಿನ ಕಾಡುಗೊಲ್ಲರ ಹಾಡು ಕೋಗಿಲೆ ನಾಡೋಜ ಸಿರಿಯಜ್ಜಿ ಸ್ಮರಣೆಯಲ್ಲಿ ಪ್ರತಿಷ್ಠಾನವನ್ನು ರೂಪಿಸಿದ್ದು ಅದರ ಉದ್ಘಾಟನೆಯನ್ನು ಚಳ್ಳಕೆರೆ ತಾ. ಬೆಳೆಗೆರೆ ಗ್ರಾಮದಲ್ಲಿ ನೆರೆವೇರಿಸಲಾಯಿತು. ಇದರೊಂದಿಗೆ ಡಾ. ಕೃಷ್ಣಮೂರ್ತಿ ಹನೂರು, ಹಾಗೂ ಸಿರಿಯಜ್ಜಿ ಸಹವರ್ತಿ ಶ್ರೀಮತಿ ಸಿರಿಯಮ್ಮ ಅವರಿಗೆ ‘ಸಿರಿಬೆಳಗು’ ಪ್ರಶಸ್ತಿ ನೀಡಿರುವುದರೊಂದಿಗೆ ಸಿರಿಯಜ್ಜಿ ಬಗ್ಗೆ ಪಿಎಚ್.ಡಿ ಅಧ್ಯಯನ ಮಾಡಿರುವ ಡಾ.ಎಂ.ಮಂಜಣ್ಣ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ದೇಸಿ ಕವಿ ಎಸ್. ಜಿ. ಸಿದ್ಧರಾಮಯ್ಯ, ಪ್ರಸಿದ್ಧ ಹಿರಿಯ ಕವಯತ್ರಿ ಡಾ. ಎಚ್.ಎಲ್. ಪುಷ್ಪ, ಖ್ಯಾತ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್, ಶಾಸಕರಾದ ಶ್ರೀ ಟಿ. ರಘುಮೂರ್ತಿ, ಮುಖಂಡರಾದ ಸಿ. ಬಾಬು, ಟಿ. ರವಿಕುಮಾರ್ ಸಾಕ್ಷೀಕರಿಸಿದರು. ಅಲಂಕೃತ ಎತ್ತಿನ ಗಾಡಿಗಳು, ಕೋಲಾಟ, ಭಜನೆ, ಸೋಬಾನೆಪದ, ನಿಸರ್ಗ ಗೋವಿಂದರಾಜ್ ಅವರ ಬುಡಕಟ್ಟು ಛಾಯಾಚಿತ್ರಗಳು, ಮೈಸೂರಿನ ಕಲಾವಿದ ಸಿ.ಚಿಕ್ಕಣ್ಣ ಅವರ ಬುಡಕಟ್ಟು ಕಲಾಚಿತ್ರಗಳು, ಮೋಹನ್ ಕುಮಾರ್ ಅವರ ಗಣೆಪದಗಳು, ಯಲಗಟ್ಟೆ ಗೊಲ್ಲರಹಟ್ಟಿಯ (ಸಿರಿಯಜ್ಜಿಯ ಊರು) ಹೆಣ್ಣುಮಕ್ಕಳ ಸೋಬಾನೆ ಪದಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಮೆರಗು ನೀಡಿದವು.

ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಮೈಸೂರು, ಸಂಡೂರು, ಕೂಡ್ಲಿಗಿ, ಹಾವೇರಿ ಮುಂತಾದ ದೂರದ ಪ್ರದೇಶಗಳಿಂದ ಸಿರಿಯಜ್ಜಿ ಅಭಿಮಾನಿಗಳು ಪಾಲ್ಗೊಂಡಿದ್ದರಿಂದ ಸಿರಿಬೆಳಗು ಮತ್ತಷ್ಟು ಪ್ರಕಾಶಿಸಿತು.

‍ಲೇಖಕರು Admin

October 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: