ಸಿದ್ದು ಯಾಪಲಪರವಿ
ಬೆಳಗಿನ ನಡಿಗೆಯ ಆಹ್ಲಾದಕರ
ಸಮಯದ ಮಂಜಲಿ ಮನಕೆ
ಅದೆಂತಹದೋ ಮುದ
ಎಷ್ಟು ಚಂದ ಈ ಛಳಿ ಛಳಿ ಮೈ
ಮನಗಳ ಮುದುಡಿ ಸಂಗಾತಿಯ
ಸಂಗತಿಗಳ ಮೆಲ್ಲುತ ಮೆಲುಕು
ಹಾಕಿ ಮಲಗಲು ಏಕಾಂತದಿ
ಮಲಗಿದಷ್ಟು ಗಾಢ ನಿದ್ದೆ
ನಡೆದರೆ ಚಿಮ್ಮುವ ಜೀವಚೈತನ್ಯದ
ಹಗಲುಗನಸುಗಳ ನಾಗಾಲೋಟ
ಸಂಕ್ರಮಣದ ಮುಂಜಾವಲಿ ಹೊರ
ಸೂಸುವ ಸೂರ್ಯನ ಕಸರತ್ತಿಗೆ
ಮಂಜಿನ ತಡೆ ಗೋಡೆ

ಮಲಗದ ಚಂದ್ರನಿಗೆ ಸೂರ್ಯನ ಚಿಂತೆ
ಏಳುವ ಸೂರ್ಯನಿಗೆ ಚಂದ್ರನ ಸೆಳೆತ
ಸೂರ್ಯ ಚಂದ್ರರ ಸೌಂದರ್ಯ
ಸವಿಯುವ ಮನಕೆ ತನುವಿನ ಭ್ರಾಂತು
ದೇಹದೊಳು ಅಡಗಿದ ಮನಕೆ
ದೇಹದಾತುರ ನೀಗಿಸುವ ‘ಏಕ ಗವಾಕ್ಷಿ’
ನೀ ತನುವಿನಾತುರಕೆ ಭಾವ ಕೋಶಕೆ
ಜೀವ ಧಾತು ನೀ ಚಳಿ
ಬಿಸಿಲು ಮಳೆ ಬಿರುಗಾಳಿ
ಕೈ ಕಾಲು ಮೈಮನ ಸೋತಾಗ
ಹಿತ ನೀಡುವ ತಂಗಾಳಿ.
ಪ್ರೊ.ಸಿದ್ಧು ಯಾಪಲಪರ್ವಿ ಯವರ ಕವಿತೆ ಸೊಗಸಾಗಿದೆ.