ಒಣ ಮರಳು ಕಾಡಿನಲಿ
ಹೂ ಅರಳಲಿಲ್ಲ
ಚುಕ್ಕಿ, ಚಂದಿರ ಹಾಲು ಚೆಲ್ಲಲಿಲ್ಲ
ತೂಗಿ ಕುಣಿಕುತ್ತಿದ್ದ
ಕುಡುಗೋಲು ಸುತ್ತಿಗೆಯು
ಉಳ್ಳವರ ಕುತ್ತಿಗೆಯ ಕತ್ತರಿಸಲಿಲ್ಲ
ಸತ್ತ ಹೆಣಗಳ ಸಾಲು/ಮೆರವಣಿಗೆ ಬಂದಾಗ
ಪುಟ್ಟ ಕಂದಮ್ಮಗಳ ಚೀರಾಟಗಳ ನಡುವೆ
ನಿನ್ನ ಕಣ್ಣಿನ ಮಾತು ತಿಳಿಯಲಿಲ್ಲ…– ಡಾ.ಸಿದ್ದಲಿಂಗಯ್ಯ
ಸಾರ್ ಸ್ಕೂಲಲ್ಲಿದ್ದಾಗ ಓದಿದ್ ಪದ್ಯ ಸಾರ್..
ಆಗೆಲ್ಲಾ ಹಸಿವಲ್ಲೇ ದಿನ ಕಳೆದ್ರು, ಹಾಕೋಕೆ ಒಳ್ಳೆ ಬಟ್ಟೆ ಇಲ್ದೇ ಹರಿದ ಬಟ್ಟೆ ಹಾಕಿದ್ರೂ…ಬ್ಯಾಗಲ್ಲಿ ನಿಮ್ ಪುಸ್ತಕ ಇಟ್ಕೊಂಡು ಓಡಾಡೋದು, ಜಾತಿವಾದಿಗಳ ಮುಂದೆ ಗಟ್ಟಿ ಧ್ವನಿಯಲ್ಲಿ ನಿಮ್ ಪದ್ಯ ಓದೋದೆ ನನ್ ಪಾಲಿನ ಸ್ವಾಭಿಮಾನ ಆಗಿತ್ತು ಸಾರ್…
ಇವತ್ತಿಗೂ ನಿಮ್ಮೆಷ್ಟೋ ಪದ್ಯ ನಾಲಿಗೆ ತುದಿಲಿವೆ..ತಂತಾನೇ ಎದೆಯಲ್ಲಿ ಹಾಡಾಗ್ತವೇ..ಯಾರ್ ಏನೇ ಅಂದ್ರು ಇವತ್ತಿಗೂ ದಲಿತಕವಿ ಸಿದ್ದಲಿಂಗಯ್ಯ ಅಂದ್ರೆ ನಮ್ಮೋರು ಅನ್ನೋದು ಬಿಟ್ಟೊಗ್ತಿಲ್ಲ…
ಬೇಡಾ ಸರ್ ಆ ನರರಾಕ್ಷಸರ ಸಹವಾಸ ಅದ್ರಿಂದ ನೀವು ಅದೇನ್ ಪಡ್ಕೊಂಡಿದ್ದೀರೋ ಗೊತ್ತಿಲ್ಲ ಸರ್ ನನ್ನ ಜನಗಳು ಅಂಥಾ ಕರುಳಿನ ಭಾಷೇಲಿ ಹಾಡ್ ಕಟ್ಟಿದ್ರೆಲ್ಲಾ ಅದೇ ಮುಗ್ಧ ಜನರ ನಂಬಿಕೆ ಕಳೆದ್ಕೊಂಡಿದ್ದೀರಾ…
ಯಾಕೋ ಬೆನ್ನಿಗೆ ಇರಿದ್ಬಿಟ್ರಿ ಅನ್ನಿಸ್ತಿದೆ..ಬಂದ್ಬುಡಿ ಸಾರ್ ಅವ್ರ ಸವಾಸ ಬೇಡಾ ನಿಮ್ಗೆ..
ಆ ನರಭಕ್ಷಕರ ಮಧ್ಯೆ ನಿಮ್ಮನ್ನ ನೋಡೋಕೆ ನಿಜಕ್ಕು ಹಿಂಸೆ ಆಗ್ತಿದೆ..
-ಮಂಜುಳಾ ಹುಲಿಕುಂಟೆ
ಅಂದ ಹಾಗೆ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ಬಸವೇಶ್ವರ ಪ್ರತಿಮೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೂವಿನ ಹಾರ ಹಾಕುವಾಗ ಅದು ಕೆಳಕ್ಕೆ ಬಿದ್ದು ಹೋಯಿತಲ್ಲಾ? ಯಾವುದಾದ್ರೂ ಕನ್ನಡ ಸುದ್ದಿ ವಾಹಿನಿ ಬಿಜೆಪಿಗೆ ಅಪಶಕುನ ಅಂತ ಜ್ಯೋತಿಷಿಯನ್ನು ಕೂರಿಸಿಕೊಂಡು ಚರ್ಚೆ ಏರ್ಪಡಿಸಿದ್ರಾ?
ಅಥವಾ ಅಪಶಕುನ ಚರ್ಚೆಯೆಲ್ಲ ಸಿದ್ದರಾಮಯ್ಯಗೆ ಮಾತ್ರ ಸೀಮಿತಗೊಳಿಸಿ ತಾರತಮ್ಯ ಮಾಡಿದ್ದಾರಾ?
ಸಂಜೆವರೆಗೆ ಯಾವುದೇ ಚಾನಲ್ ನೋಡದ್ದರಿಂದ ಈ ಅನುಮಾನ ಬಂದಿದೆ. ಯಾರಾದ್ರೂ ನೋಡಿದ್ರೆ ತಿಳಿಸಿ.
-ಟಿ ಕೆ ತ್ಯಾಗರಾಜ್
ಅವರು ಈ ಫೋಟೋ ನೋಡಿದ್ದಿದ್ದರೆ!
‘ಮಹಾಭಾರತ ಕಾಲದಲ್ಲೇ ಭಾರತದಲ್ಲಿ ಇಂಟರ್‌ನೆಟ್, ಸ್ಯಾಟಲೈಟ್ ಟೆಕ್ನಾಲಜಿ ಇತ್ತು’ ಎಂದಿದ್ದಾರೆ ತ್ರಿಪುರಾ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ವಿಪ್ಲವ್ ದೇವ್.
ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೀಗೆ ಕಾಮನ್ ಸೆನ್ಸ್ ಇಲ್ಲದೆ ಹೇಗೆ ಮಾತನಾಡುತ್ತಾರೋ!? ಒಂದೊಮ್ಮೆ ಅವರು ‘ಮಾಯಾಬಜಾರ್’ (1957) ತೆಲುಗು ಸಿನಿಮಾದ ಈ ಸ್ಟಿಲ್ ನೋಡಿದ್ದಿದ್ದರೆ ಏನೆಲ್ಲಾ ಕತೆ ಕಟ್ಟಬಹುದು ಎನ್ನುವ ಕುತೂಹಲ ನನಗೆ
-ಶಶಿಧರ್ ಚಿತ್ರದುರ್ಗ
0 Comments