ಸವಿತಾ ನಾಗಭೂಷಣ
—————
ಅದು ಅವರೆಲ್ಲರ ಕೊನೆಯ
ಊಟವಾಗಿತ್ತು?
ಶಕ್ತಿವಂತರ ಯುಕ್ತಿವಂತರ
ಉಕ್ತಿವಂತರ ಕೊನೆಯ ಊಟವಾಗಿತ್ತು…
ಜಗತ್ತಿನ ಎಲ್ಲಾ ಶಸ್ತ್ರಾಗಾರಗಳು
ಪೂರಾ ಬರಿದಾಗಿದ್ದವು
ಕಟ್ಟಕಡೆಯ ಅಸ್ತ್ರವನ್ನೂ ಹೂಡಿಯಾಗಿತ್ತು…

ಮುಂದೆ?
ಒಂದು ಯುದ್ಧ ವಿಮಾನವೂ
ಹಾರಲಿಲ್ಲ
ಒಂದು ಟ್ಯಾಂಕರೂ ಓಡಲಿಲ್ಲ
ಒಂದು ಸಮರ ನೌಕೆಯೂ
ಚಲಿಸಲಿಲ್ಲ
ಒಬ್ಬ ಯೋಧ ಕೂಡ ಕಾಣಲಿಲ್ಲ
ಎಲ್ಲ ಯುದ್ಧ ಯಂತ್ರ, ತಂತ್ರ
ಮಂತ್ರಗಳು ದಿಕ್ಕೆಟ್ಟು ಕೂತಿದ್ದವು
ಅದವರ ಕೊನೆಯ ತುತ್ತು
ಶಾಂತವಾಯಿತು ಜಗತ್ತು
ಮುಂದೆ?
ಮಕ್ಕಳು ಬಿತ್ತಿ ಬೆಳೆದರು
ತಾಯಂದಿರು ಅಡಿಗೆ ಮಾಡಿದರು
—————
0 ಪ್ರತಿಕ್ರಿಯೆಗಳು