ಇಂಗ್ಲಿಷ್ ಮೂಲ: ಜಾರ್ಜ್ ಹರ್ಬರ್ಟ್
ತಾನೇ ಸೃಷ್ಟಿಸಿದ ಮಾನವನ ಕಂಡು ಹೆಮ್ಮೆ ದೇವಗೆ
ತನ್ನಲಿದ್ದ ಅಮೂಲ್ಯ ದೇಣಿಗೆಯ ಕಲಶವನ್ನೇ
ಅವನಿಗಾಗಿ ಹಿಡಿದು ನಿಂತು
ತನ್ನಲ್ಲೇ ಹಾಕಿದ ಲೆಕ್ಕ ಆತ
“ನನ್ನಲಿರುವುದನೆಲ್ಲಾ ಧಾರೆ ಎರೆದು ಬಿಡುವೆ
ನನ್ನವನೇ ಆದ ಅವಗೆ
ವ್ಯರ್ಥವಾಗಿ ಬಿದ್ದುದನೆಲ್ಲ ಒಟ್ಟುಗೂಡಿಸಿ ಬಿಡುವೆ
ಆತನಲ್ಲಿ”
ಅಂತೆಯೇ ಮೊದಲ ವರವಾಗಿ ನೀಡಿದ ಬಲ
ಸಾಮರ್ಥ್ಯ
ಅದರ ಹಿಂದೆಯೇ ಹರಿದು ಬಂತು ಸೌಂದರ್ಯ
ಕುಶಲತೆ, ಘನತೆ, ಸುಖ – ಸಮೃದ್ದಿಯ ಜೊತೆಗೆ
ಕಲಶ ಪೂರಾ ಬರಿದಾಗ ಬಂದಾಗ ಗಳಿಗೆ ತಡೆದ
ದೇವ
ಅರಿವಿಗೆ ಬಂದು ತನ್ನ ಖಜಾನೆಯಲಿ ಉಳಿದಿರುವುದು ಬರಿ ತೃಪ್ತ ಶಾಂತಿ ಮಾತ್ರ ಎಂದು
ತನ್ನಲ್ಲೇ ಹೇಳಿಕೊಂಡ ಆತ “ನಾನು ಈ
ಅನರ್ಘ್ಯರತ್ನವನ್ನೂ ನನ್ನ ಸೃಷ್ಟಿಯ ವಶ ಮಾಡಿ ಸುರಿದು ಬಿಟ್ರೆ
ಸಂತೃಪ್ತ ಜೀವ ನಾ ನೀಡಿದ ಕಾಣಿಕೆಗಳೇ ಸರ್ವಸ್ವವಾಗಿ ಭೌತಿಕತೆಯಲಿ ಮುಳುಗಿ
ದಾತನಾದ ನನ್ನನ್ನೇ ಮರೆವನವನು ನಾ ಬಲ್ಲೆ
ಅಲ್ಲಿಗೆ ನಾನೂ, ಜೊತೆಗೆ ಅವನೂ ಸೋತ ಹಾಗೆ”
“ಇರಲಿ ಎಲ್ಲ ಆತಗೆ, ಸಕಲ ಸುಖ ಸಮೃದ್ಧಿ ಅದರ ಜೊತೆಗೆ ಇರಲಿ ನಿರಂತರ ಅಸಂತೃಪ್ತಿ,
ಚಡಪಡಿಕೆ
ಅರ್ಥವಿಲ್ಲದ ಧಡಪಡಿಕೆಯಿಂದ ವಿಮುಖವಾಗುವ ವಿವೇಕ ಇರದಿದ್ದರೂ
ದಣಿದ ಆತನ ಆ ಹತಾಶೆಯೇ ಸರಿದಾರಿ ತೋರಿ
ಎಳೆದು ತಂದೀತು ಕೊನೆಗೆ ನನ್ನೆಡೆಗೆ”
ತುಂಬಾ ಚೆನ್ನಾಗಿದೆ
ತುಂಬ ಧನ್ಯವಾದಗಳು!