**
ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಲೇಖನ ಸ್ಪರ್ಧೆ’ ಏರ್ಪಡಿಸಿದೆ. ಆಯ್ಕೆಯಾದ ಐದು ಲೇಖನಗಳಿಗೆ ತಲಾ ರೂ.5,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಲೇಖನದ ವಿಷಯ: ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂದು ಹೇಳುವಲ್ಲಿನ ವೈಚಾರಿಕ ಮತ್ತು ಜಾಗತಿಕ ತಳಹದಿಯೇನು..?
ಲೇಖನ 1,600 ರಿಂದ 2,000 ಪದಗಳ ಮಿತಿಯಲ್ಲಿರಬೇಕು. ಲೇಖನದ ಜೊತೆಗೆ ಹುಟ್ಟಿದ ದಿನಾಂಕದ ಯಾವುದಾದರೂ ದಾಖಲೆಯ ಪ್ರತಿ, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರ ಕಳುಹಿಸಬೇಕು. ನುಡಿ/ಯುನಿಕೋಡ್ ಲಿಪಿಯಲ್ಲಿರುವ ಲೇಖನವನ್ನು ವರ್ಡ್ ಕಡತದಲ್ಲಿ 15 ಸೆಪ್ಟೆಂಬರ್ 2024ರೊಳಗೆ ಕಳುಹಿಸಬೇಕು.
ಕಳಿಸಬೇಕಾದ ಇಮೇಲ್ ವಿಳಾಸ:
[email protected]
0 ಪ್ರತಿಕ್ರಿಯೆಗಳು