ಪ್ರತಿಯೊಬ್ಬರಿಗೂ ಪುಸ್ತಕ ಉಡುಗೊರೆ ಮೂಲಕ
ಸಪ್ನ ಬುಕ್ ಹೌಸ್ ರಾಜ್ಯೋತ್ಸವ ಆಚರಣೆ
ಪ್ರತಿಯೊಬ್ಬರಿಗೂ ಉಚಿತವಾಗಿ ಕನ್ನಡ ಪುಸ್ತಕವನ್ನು ಕೊಡುಗೆಯಾಗಿ ನೀಡುವ ಮೂಲಕ ಸಪ್ನ ಬುಕ್ ಹೌಸ್ ವಿಶಿಷ್ಟವಾಗಿ ರಾಜ್ಯೋತ್ಸವವನ್ನು ಆಚರಿಸಲಿದೆ.
ನವೆಂಬರ್ 1 ರಂದು ಸಪ್ನ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಕನ್ನಡ ಬರಹಗಾರರ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಮಳಿಗೆಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಒಂದು ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು ಎಂದು ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ ಅವರು ತಿಳಿಸಿದ್ದಾರೆ.
ಪುಸ್ತಕ ಜಾತ್ರೆಯನ್ನು ನಾಡೋಜ ಕಮಲ ಹಂಪನಾ ಅವರು ಉದ್ಘಾಟಿಸಲಿದ್ದು, ಚಿತ್ರ ನಟಿ ಸಪ್ತಮಿ ಗೌಡ ದೀಪ ಬೆಳಗಲಿದ್ದಾರೆ. ಪದ್ಮಶ್ರೀ ಡಾ ದೊಡ್ಡರಂಗೇಗೌಡ ಅವರು ಉಚಿತ ಪುಸ್ತಕಗಳ ವಿತರಣೆಯನ್ನು ಉದ್ಘಾಟಿಸುತ್ತಾರೆ.
ಎಂ ಎಸ್ ನರಸಿಂಹಮೂರ್ತಿ ಹಾಗೂ ಡುಂಡಿರಾಜ್ ಅವರಿಂದ ಹಾಡು ಹರಟೆಯನ್ನು ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಕೃತ್ತಿಕಾ ಶ್ರೀನಿವಾಸ್ ಅವರು ಕನ್ನಡ ಗೀತೆಗಳನ್ನು ಹಾಡಲಿದ್ದಾರೆ.
ಡಾ ಹಂಪನಾ, ಡಾ ಎಚ್ ಎಸ್ ವೆಂಕಟೇಶಮೂರ್ತಿ, ಮಲ್ಲೇಪುರಂ ವೆಂಕಟೇಶ್, ಎಸ್ ಜಿ ಸಿದ್ದರಾಮಯ್ಯ, ಬಿ ಆರ್ ಲಕ್ಷ್ಮಣರಾವ್, ರಾ ನಂ ಚಂದ್ರಶೇಖರ್, ಡಿ ವಿ ಗುರುಪ್ರಸಾದ್, ಜೋಗಿ, ಎಸ್ ಕೆ ಉಮೇಶ, ಹಿ ಚಿ ಬೋರಲಿಂಗಯ್ಯ, ವಸುಂಧರಾ ಭೂಪತಿ, ಎಚ್ ಎಲ್ ಪುಷ್ಪ ಸೇರಿದಂತೆ ಹಲವು ಪ್ರಮುಖ ಲೇಖಕರು ಬರಹಗಾರರ ಸಮ್ಮಿಲನದಲ್ಲಿ ಭಾಗವಹಿಸುತ್ತಾರೆ
56 ವರ್ಷ ತುಂಬಿರುವ ಸಪ್ನ ಬುಕ್ ಹೌಸ್ ನಾಡು ನುಡಿಯನ್ನು ಸಂಭ್ರಮಿಸಲು ಈ ಪುಸ್ತಕ ಜಾತ್ರೆಯನ್ನು ಹಮ್ಮಿಕೊಂಡಿದ್ದು ಕನ್ನಡ ಪುಸ್ತಕಗಳ ಮೇಲೆ ಭಾರೀ ರಿಯಾಯಿತಿ, ಒಂದು ಕೊಂಡರೆ ಇನ್ನೊಂದು ಪುಸ್ತಕವನ್ನು ಉಚಿತವಾಗಿ ನೀಡುವ ಹಾಗೂ ಕಾಂಬೋ ಆಫರ್ ನೀಡುವ ಮೂಲಕ ಕನ್ನಡ ದಿನವನ್ನು ಆಚರಿಸಲಿದೆ ಎಂದು ಬುಕ್ ಹೌಸ್ ನ ಆರ್ ದೊಡ್ಡೆಗೌಡ ಅವರು ತಿಳಿಸಿದ್ದಾರೆ
0 ಪ್ರತಿಕ್ರಿಯೆಗಳು