ವಸುಧೇಂದ್ರರ ಹೊಸ ಕಾದಂಬರಿ ‘ತೇಜೋ ತುಂಗಭದ್ರಾ’ ವಿನೂತನ ರೀತಿಯಲ್ಲಿ ಓದುಗರ ಕೈ ಸೇರುತ್ತಿದೆ.
ಕಳೆದ ಹಲವು ದಿನಗಳಿಂದ ವಸುಧೇಂದ್ರ ಬೆಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ಓದುಗರನ್ನು ನೇರವಾಗಿ ಭೇಟಿ ಮಾಡುತ್ತಿದ್ದಾರೆ.
ಪುಸ್ತಕ ಕೊಂಡವರಿಗೆ ಹಸ್ತಾಕ್ಷರ ನೀಡುತ್ತಿದ್ದಾರೆ.
ಇಂದು ಸಪ್ನಾ ಪುಸ್ತಕ ಮಳಿಗೆಯಲ್ಲಿ ಗಣ್ಯ ಸಾಹಿತಿಗಳ ನಡುವೆ ವಸುಧೇಂದ್ರ ತಮ್ಮ ಕಾದಂಬರಿಯ ಲೋಕವನ್ನು ಬಿಚ್ಚಿಟ್ಟರು.
ಈ ಕಾದಂಬರಿ ಬರೆಯುವಾಗ ಮಾಡಿದ ತಯಾರಿ ಅದರಲ್ಲಿನ ಕುತೂಹಲಕರ ಸಂಗತಿಗಳನ್ನು ವಿವರಿಸಿದರು.
ಸಪ್ನಾದ ಮಾಲೀಕರಾದ ನಿತಿನ್ ಶಾ, ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇಗೌಡ, ಸಾಹಿತಿಗಳಾದ ಸಿದ್ದಲಿಂಗಯ್ಯ, ಜೋಗಿ, ಕೆ ಇ ರಾಧಾಕೃಷ್ಣ, ಡಾ ವಿ ಎ ಲಕ್ಷ್ಮಣ್, ಸಾರ್ವಜನಿಕ ಸಂಪರ್ಕ ಕ್ಷೇತ್ರದ ಜಯಪ್ರಕಾಶ್ ರಾವ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Thanks Mohan