ಸಂಪು ಕಾಲಂ : ಮಗುವಿಗೆ ಡಿಸಾರ್ಡರ್ರೂ ಅಮ್ಮನ ಡಿಪ್ರೆಶನ್ನೂ!


 
ನಗು ನಗುತ್ತಾ ಎಲ್ಲರೊಟ್ಟಿಗೆ ಮಾತನಾಡಿಕೊಂಡು ಇರುವ ನಮ್ಮ ಆಫೀಸಿನ ಒಬ್ಬ ಸಹೋದ್ಯೋಗಿ ಅಂದು ಯಾಕೋ ಖಿನ್ನನಾಗಿದ್ದ. ಏನೋ ವೈಯಕ್ತಿಕ ವಿಷಯವಿರಬೇಕು ಎಂದು ಸುಮ್ಮನಾದೆ. ಮರುದಿನ ಕಂಡ ಆತನ ಮುಖ ಮತ್ತದೇ ಕಪ್ಪಿಟ್ಟ ಛಾಯೆ. ಕೆಲಸದಲ್ಲಿ ಎಷ್ಟೇ ತೊಂದರೆಯಿದ್ದರೂ ತನ್ನ ಹರಕು ಮುರುಕು ಬಾರದ ಭಾಷೆಯನ್ನೇ ಮಾತನಾಡಿ ಎಲ್ಲರನ್ನೂ ನಗಿಸಿ ಇಡೀ ವಾತಾವರಣವನ್ನೇ ಲೈಟ್ ಆಗುವಂತೆ ಮಾಡುತ್ತಿದ್ದ ಈತನಿಗೆ ಅದಾವ ಬಗ್ ಬಡಿದಿತ್ತೋ ಕಾಣೆ! ಹೀಗೆ ಸಾಕಷ್ಟು ದಿನ ನಡೆದಿತ್ತು. ಕಾಳಜಿಗಿಂತ ಹೆಚ್ಚಿನ ಕುತೂಹಲದಲ್ಲಿ ಹಿಂಜರಿಯುತ್ತಲೇ ಅವನ ಅನ್ಯ ಮನಸ್ಕತೆಗೆ ಕಾರಣ ಕೇಳಿಯೇ ಬಿಟ್ಟೆ.
ತುಂಬಾ ವಿಷಣ್ಣನಾಗಿದ್ದ. ಅವನ ಆ ಸ್ಟೇಟ್ ಆಫ್ ಮೈಂಡ್ ಬಗ್ಗೆ ವಿಚಾರಿಸಿದ ಕೂಡಲೇ, ಅವನ ಮುಖ ಮತ್ತಷ್ಟು ಪೇಲವವಾಯಿತು. ಅವನ ಕಣ್ಣುಗಳು ಒಂದು ಕ್ಷಣ ತೇವದಿಂದ ಹೊಳೆದು, ರೆಪ್ಪೆ ಅಲುಗಿ ಬೇರೊಂದು ಕಡೆ ಹೊರಳಿತು. ಬಹುಶಃ ಯಾರಾದರೂ ಕೇಳಲೀ ಅಂತಲೇ ಕಾದಿದ್ದಿರಬಹುದು ಅನಿಸಿತು. ಮನುಷ್ಯನ ಮನಸ್ಸು ಎಷ್ಟು ಸೂಕ್ಷ್ಮ ಗೊಜಲುಗಳಿಂದ ಕೂಡಿದೆ ನೋಡಿ. ನಮ್ಮ ರೊಟೀನ್ ತಪ್ಪಿ ನಾವು ನಡೆದದ್ದೇ ಆದರೆ ನಮ್ಮನ್ನು ಜನ ಗಮನಿಸಿ ಬಿಡುತ್ತಾರೆ ಎಂಬ ಕಳವಳ ಒಂದು ಕಡೆ ಇದ್ದರೆ, ಗಮನಿಸಲಿ ಎಂಬ ಆಶಯ ಮತ್ತೊಂದು ಕಡೆ ಇರುತ್ತದೆ. ತನ್ನ ಸ್ಥಿತಿಗೆ ಯಾರೂ ಅನುಕಂಪ ತೋರಬಾರದು ಎಂಬ ಅಹಂ ಒಂದು ಕಡೆ ಇದ್ದರೆ, ಯಾರಾದರೂ ಸಹಾನುಭೂತಿ ತೋರಲಿ ಎಂಬ ಸೆಲ್ಫ್ ಪಿಟಿ ಇದ್ದೇ ಇರುತ್ತದೆ.
ಮತ್ಯಾರಿಗೂ ತಾನು ಕಣ್ಣಹನಿಸಿದ್ದು ಕಾಣದಂತೆ ಐದಾರು ಸಲ ಪಟಪಟನೆ ರೆಪ್ಪೆ ಬಡಿದು, ದೂರದಲ್ಲಿ ಮ್ಯಾನೇಜರ್ ಬರುತ್ತಿರುವುದ ಕಂಡು ಕಂಪ್ಯೂಟರ್ ನತ್ತ ಮುಖ ಮಾಡಿದ. ಆತ ಹೊರಟುಹೋದ ಮೇಲೆ, “ಏನೆಂದು ಹೇಳಲಿ ಮನೆಯಲ್ಲಿ ಇತ್ತೀಚಿಗೆ ನೆಮ್ಮದಿಯೇ ಇಲ್ಲ” ಎನ್ನುತ್ತಾ ನನ್ನತ್ತ ನೋಡಿದ. ಏನಾಯಿತೆಂದು ಕಣ್ಣಲ್ಲೇ ಕೇಳುತ್ತಾ ಅವನತ್ತ ಗಮನಕೊಟ್ಟೆ. ‘attention’ ಪದವನ್ನು ತೋರಿಸಿ, “ಇದನ್ನು ಓದು” ಎಂದ.
ಮೈಯೆಲ್ಲಾ ಕುತೂಹಲವಾಗಿ ಅವನ ಉತ್ತರಕ್ಕೆ ಕಾಯುತ್ತಿದ್ದ ನನಗೆ ತಕ್ಷಣ ಇರಿಸು ಮುರಿಸಾಯಿತು. ನಾನೇನೋ ಕೇಳಿದರೆ, ಇವನ್ಯಾಕೆ ಯಾವುದೊ ಒಂದು ಪದವನ್ನು ಓದಲು ಹೇಳುತ್ತಿದ್ದಾನೆ? ಎಂದು ಅವನತ್ತ ನೇರ ನೋಡಿ ‘ಅಟೆನ್ಶನ್’ ಎಂದೆ. ಅದಕ್ಕವನು ತಕ್ಷಣ, “ನನ್ನ ಹತ್ತು ವರ್ಷದ ಮಗ ಇದನ್ನು “ಎಟಿ…ಅಟ್, ಟಿಯಿಎನ್….ಟೆನ್, ಟಿಐಓಎನ್…..ಟಿಒನ್” ಎಂದು ಓದುತ್ತಾನೆ” ಎಂದು ಆಕಾಶವೇ ಬೀಳುವಂತೆ ಮೋರೆ ಮಾಡಿದ. ಅವನ ಮುಖದ ರಿಯಾಕ್ಷನ್ ನೋಡಿ ನನಗೆ ಗಾಭರಿಯಾಯಿತು. ಹತ್ತು ವರ್ಷದ ಸಣ್ಣ ಮಗು, ಸರಿಯಾಗಿ ಓದುತ್ತಿಲ್ಲ ಎಂದು ಜೀವನವೇ ಮುಳುಗಿ ಹೋಗುವಷ್ಟು ಆತಂಕವೇ!
“ಹೊಡೆದು, ಬೈದು, ಟ್ಯೂಶನ್ ಗೆ ಹಾಕಿ, ಏನು ಮಾಡಿದರೂ ಅವನು ಓದುತ್ತಿಲ್ಲ. ಇದರಿಂದ ನಮಗೆಲ್ಲಾ ತುಂಬಾ ಭಯ ಶುರುವಾಗಿಬಿಟ್ಟಿದೆ. ಅವನ ಅಮ್ಮಂಗೆ ಅಂತೂ ಡಿಪ್ರೆಶನ್ ಆಗಿಬಿಟ್ಟಿದೆ. ಅವಳು ಮೆಡಿಸಿನ್ ತೊಗೊತಿದಾಳೆ”…. ಎಂದು ಮತ್ತೆ ಮುಖ ಕಿವುಚಿದ. ಅವನ ಈ ಮಾತುಗಳು ಕೇಳಿ ನನಗೆ ಒಮ್ಮೆಲೇ ದಿಗಿಲುಬಡಿದಂತಾಗಿತ್ತು! ಮಕ್ಕಳಿಂದ ನಾವು ನಿರೀಕ್ಷಿಸುತ್ತಿರುವುದಾದರೂ ಏನನ್ನು! ನಾವೆಲ್ಲಾ “ಸಿಏಟಿ….ಕ್ಯಾಟ್” ಎಂದು ಕಲಿತದ್ದೇ ಹತ್ತು ವರ್ಷದಲ್ಲಿ ಎಂಬುದನ್ನು ನೆನೆದರೆ ಮೈ ಜುಮ್ ಎಂದಿತು.
“ಆಡಿ ಬಾ ನನ ಕಂದ ಅಂಗಾಲ ತೊಳೆದೇನ….” ಎಂದ ಆ ಕಾಲದ ಅಮ್ಮನಿಗೂ, ಮಗ ದೊಡ್ಡ ದೊಡ್ಡ ಇಂಗ್ಲಿಷ್ ಪದಗಳನ್ನು ಉಚ್ಚರಿಸಲಾರ ಎಂದು ತಾನು ಡಿಪ್ರೆಶನ್ ಗೆ ಒಳಗಾಗಿ ಮಾತ್ರೆ ನುಂಗುವ ಬಹುಪಾಲು ಸಾಧಾರಣವೇ ಎನಿಸುವ ಈ ಕಾಲದ ಅಮ್ಮನಿಗೂ ಏನು ವ್ಯತ್ಯಾಸ ಎನಿಸಿದಾಗಲೇ ನೆನಪಿಗೆ ಬಂದದ್ದು ಈ ಕಾಲದಲ್ಲಿ ಸ್ಪರ್ಧೆ ಎನ್ನುವ ಭೂತ ಬರೀ ಸಾಫ್ಟ್ ವೇರ್ ಜಗತ್ತಿನಲ್ಲಲ್ಲ…. ಓದು ಬರಹವಿಲ್ಲದ ಒಬ್ಬ ಮುಗ್ಧ ಮಹಿಳೆ ಮತ್ತು ಸಣ್ಣ ಪುಟ್ಟ ಮಕ್ಕಳನ್ನೂ ಕೈ ಬಿಟ್ಟಿಲ್ಲ ಎಂದು. ಮಗುವಿನ ವಯಸ್ಸೆಷ್ಟು, ಅದರ ಆಸಕ್ತಿಗಳೇನು, ಆ ಮಗು ಯಾವ ಯಾವ ವಿಷಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದೆ. ಈ ರೀತಿಯ ಎಲ್ಲಾ ಇಂಟೆರೆಸ್ಟಿಂಗ್ ಆದ ಕ್ರಿಯಾತ್ಮಕ ಪೇರೆಂಟಿಂಗ್ ಅನ್ನು ಜನ ಸುಖಿಸುವ ಬದಲು, ಮಗುವನ್ನು ಬೆಳೆಸುತ್ತಲೇ ತಾವೂ ಬೆಳೆಯುವುದು ಸ್ಪರ್ಧೆ, ಗೆಲುವು ಎಂಬ ಆತಂಕಕಾರೀ ಬಲೆಗಳ ನಡುವೆ!
ನನಗೊಬ್ಬಳು ಗೆಳತಿ ಹೇಳುತ್ತಿದ್ದಳು. ನಾವು ಹಾಗೆಲ್ಲಾ ಯಾವಾಗಂದ್ರೆ ಆವಾಗ ಮಗು ಪ್ಲಾನ್ ಮಾಡಲ್ಲಪ್ಪಾ. ನಮ್ಮ ನುಮೆರಾಲಜಿಸ್ಟ್ ಇಂಥದ್ದು ಮಗುವಿನ ಭವಿಷ್ಯಕ್ಕೆ, ಅದರ ಗೆಲುವಿಗೆ ಒಳ್ಳೆ ಸಮಯ ಎಂದು ತಿಳಿಸಿದಾಗಲೇ ನಾವು ಪ್ಲಾನ್ ಮಾಡೋದು ಎಂದು. ಅದನ್ನು ಕೇಳಿದ ನಾನು ಒಂದಷ್ಟು ದಿನ ಟ್ರಾನ್ಸ್ ನಲ್ಲಿದ್ದೆ! ಅಂದರೆ, ಗರ್ಭಾಂಕುರವಾಗುವ ಮೊದಲೇ ಆ ಹುಟ್ಟಿ ಬರಬಹುದಾದ ಮಗುವನ್ನು ಈ ಸ್ಪರ್ಧಾತ್ಮಕ ಜಗತ್ತು ತನ್ನ ಕಬಂದ ಬಾಹುಗಳಿಂದ ಬಂಧಿಸಿ ಬಿಟ್ಟಿರುತ್ತದೆ. ತ್ರೀ ಇಡಿಯಟ್ಸ್ ಸಿನೆಮಾದಲ್ಲಿ ಮಾಧವನ್ ಹೇಳುತ್ತಾನಲ್ಲಾ ಹಾಗೆ ತೊಟ್ಟಿಲಲ್ಲೇ ಮಗುವಿಗೆ ನಾವು ಐಐಟಿಯ ಐಡೆಂಟಿಟಿ ಕಾರ್ಡ್ ಹಚ್ಚಿಬಿಟ್ಟಿರುತ್ತೇವೆ. ಒಂದು ಜವಾಬ್ದಾರೀ ಭಾರವನ್ನು ಹೊರಿಸಿ ನಂತರ ಮಗುವಿಗೆ ನಡೆಯುವುದನ್ನು ಕಲಿಸುತ್ತೇವೆ. ಈ ಭಾರದ ಹೆಜ್ಜೆಗಳನ್ನು ಮಗು ತಾಳಲಾರದೆ ತಪ್ಪಿದರೆ ಅದಕ್ಕೆ ಆ ಮಗುವೇ ಹೊಣೆ?
ಇಷ್ಟೆಲ್ಲಾ ನನ್ನ ತಲೆಯಲ್ಲಿ ಓಡುತ್ತಿರುವಾಗಲೇ, ನನ್ನ ಸಹವರ್ತಿಯ ಮಾತು ಮತ್ತೆ, “ಅವನ ಕ್ಲಾಸ್ ನವರೆಲ್ಲಾ ಓದುತ್ತಾರೆ. ಅವನೇ ಓದುವುದಿಲ್ಲ. ಹೆದರಿಕೆಯಾಗುತ್ತದೆ. ನಮ್ಮ ಮಗು ಎಲ್ಲಿ ಹಿಂದೆ ಉಳಿದುಬಿಡುತ್ತದೋ ಎಂದು. ಡಾಕ್ಟರ ಹತ್ತಿರ ಹೋಗಿದ್ದೆವು. ಅವರು ಇವನಿಗೆ ಅದೇನೋ ಏ.ಡಿ.ಹೆಚ್.ಡಿ ಅಂತಂದರು”….ಮಾರಣಾಂತಿಕ ಖಾಯಿಲೆ ಬಂದವರೂ ಇಷ್ಟು ತಲೆಕೆಟ್ಟು ಕೂರುತ್ತಾರೋ ಇಲ್ಲವೋ ಎನಿಸಿತ್ತು ಅವನ ಮುಖ ಕಂಡು. ಅಷ್ಟು ಆತಂಕ, ಹೆದರಿಕೆ. ಥ್ಯಾಂಕ್ಸ್ ಟು ಅವರ್ ಕಾಂಪಿಟೆಟಿವ್ ವರ್ಲ್ಡ್! ನಿಜಕ್ಕೂ ನಮ್ಮ ಕಾಲದಲ್ಲಿ ಇಷ್ಟು ಉಸಿರುಗಟ್ಟುವ ವಾತಾವರಣ ಇರಲಿಲ್ಲ. ಸರಿಯಾಗಿ ಓದಲಿಲ್ಲ ಅಂದರೆ ಖಂಡಿತ ಬೈಯುತ್ತಿದ್ದರು. ಆದರೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದ ಮಟ್ಟಿಗೆ ಅಂತೂ ಪರಿಸ್ಥಿತಿ ಬಿಗಡಾಯಿಸಿರಲಿಲ್ಲ. ನಮ್ಮ ಖುಷಿಗಾಗಿ, ಜ್ಞಾನಕ್ಕಾಗಿ ವಿದ್ಯೆ ಎಂಬಂತಹ ಡೆಫಿನಿಷನ್ ಈಗ ಸಾಕಷ್ಟು ಮಂದಿ ಮರೆತೇ ಹೋಗಿದ್ದಾರೆ. “ಈಸಬೇಕು, ಇದ್ದು ಜಯಿಸಬೇಕು” ಎಂಬ ವಾಕ್ಕನ್ನು “ಓದಬೇಕು, ಓದಿ ಗಳಿಸಬೇಕು” ಎಂದು ಉಲಿಯುವುದು ಇಂದು ಹೆಚ್ಚು ಸೂಕ್ತವಾಗಿಬಿಟ್ಟಿದೆ. ಇಂದು ಜಗತ್ತಿನಲ್ಲಿ ಜರುಗುತ್ತಿರುವ ಅನೇಕ ದುರಂತಗಳಲ್ಲಿ ಪ್ರಮುಖವಾದದ್ದು.
“ಏನಯ್ಯಾ ಅದು ಏ.ಡಿ.ಹೆಚ್.ಡಿ?” ಎಂದು ಕೇಳಿದರೆ, ಅದೇನೋ ಸರಿಯಾಗಿ ಗೊತ್ತಿಲ್ಲವೆಂದೂ, ವೈದ್ಯರು ಅಷ್ಟು ಹೇಳಿ ಔಷಧಿ ಕೊಟ್ಟರೆಂದೂ ಹೇಳಿದಾಗ ನಾನು ಮತ್ತಷ್ಟು ದಂಗಾದೆ. ಇದು ಇಂದಿನ ಮತ್ತೊಂದು ದುರಂತ! ಹೆಸರಿಡುವುದು, ಔಷಧಿ ಬರೆಯುವುದು, ಹಣ ಕೀಳುವುದು ಒಂದು ಹಾಬಿಯ ಲಾಭಿಯಾಗಿಬಿಟ್ಟಿದೆ. ನೆಗಡಿಯೂ ಒಂದು ‘ಖಾಯಿಲೆ’ ಎಂದು ನನಗೆ ತಿಳಿದದ್ದೇ ಇತ್ತೀಚಿಗೆ. ತೀವ್ರ ಮಟ್ಟದ ನೆಗಡಿಯಾಗ ಹೊರತು, ಒಂದಷ್ಟು ವಿಕ್ಸ್ ಹಚ್ಚಿ ಮರೆಯುತ್ತಿದ್ದ ನೆಗಡಿ ಇಂದು ಒಂದು ಡಿಸಾರ್ಡರ್ ಎಂದು ಕರೆದರೂ ಆಶ್ಚರ್ಯವಿಲ್ಲ! ನನಗೆ ಪರಿಚಯವಿರುವ ಮತ್ತೊಬ್ಬ ಡಾಕ್ಟರ್ ಗೆ ಫೋನಾಯಿಸಿ ಏ.ಡಿ.ಹೆಚ್.ಡಿ ಎಂದರೇನು ಎಂದು ವಿಚಾರಿಸಿದಾಗ ತಿಳಿದು ಬಂದದ್ದು, ಅದು “Attention deficit hyperactivity disorder” ಅಂತೆ. ಅದೇನೆಂದರೆ ಮಕ್ಕಳಿಗೆ ಹೆಚ್ಚು ಹೊತ್ತು ಒಂದು ಕಡೆ ಗಮನ ಹರಿಸಿರುವುದು ಕಷ್ಟವಂತೆ ಮತ್ತು ಅವರು ತುಂಬಾ ಹೈಪರ್ ಆಕ್ಟಿವ್ ಆಗಿರುತ್ತಾರಂತೆ! ಇದು ಒಂದು ‘ಖಾಯಿಲೆ’ ಅಂತೆ! ಒಂದು ಕಡೆ ಕೂರಲ್ಲ, ತುಂಬಾ ತುಂಟ ಎಂದು ಹೆಮ್ಮೆಯಿಂದ ತಮ್ಮ ಮಕ್ಕಳ ಕ್ರಿಯಾತ್ಮಕ ಗುಣವನ್ನು ಹೊಗಳಿಕೊಳ್ಳುವುದ ಕಂಡಿದ್ದ ನನಗೆ ಈ ವಿಚಾರವನ್ನು ಕೇಳಿ ನಗು ಬಂತು. ಇಷ್ಟಕ್ಕೂ ಮಕ್ಕಳು ಕ್ರಿಯಾತ್ಮಕವಾಗಿ ಅತ್ಯಂತ ಚುರುಕಾಗಿರುವುದೇ ತಪ್ಪೇ!
ಈ ಮಗುವಿನ ವಿಚಾರವನ್ನು ನನ್ನ ಸ್ನೇಹಿತನಾದ ಡಾಕ್ಟರ್ ಗೆ ತಿಳಿಸಿದಾಗ ಆತ ಹೇಳಿದ್ದಿಷ್ಟು “ಕೆಲವು ಮಕ್ಕಳು ಸ್ಲೋ ಲರ್ನರ್ಸ್, ಅವರನ್ನು ಅವರ ಗತಿಯಲ್ಲಿ ಓದಿಕೊಳ್ಳಲು ಬಿಟ್ಟು ಬಿಡಬೇಕು. ಇದರಿಂದ ಅವರು ಸಾಕಷ್ಟು ಉತ್ತಮವಾಗಿ, ಕಾರ್ಯೋನ್ಮುಖವಾಗಿ ಬೆಳೆಯಬಲ್ಲರು. ಆದರೆ ಅವರ ಮೇಲೆ, ಆತುರ, ಹೇರಿಕೆಗಳನ್ನು ತಂದರೆ ಓದಿನ ವಿಚಾರದಲ್ಲೇ ಅವರು ಆಸಕ್ತಿ ಕಳೆದುಕೊಂಡು ಬಿಡುತ್ತಾರೆ. ವೀ ಹ್ಯಾವ್ ಟು ಲೀವ್ ದೆಮ್ ಟು ದೇರ್ ಪೇಸ್” ಎಂದು. ತಕ್ಷಣ ಈತನ ಫೋನ್ ನಂಬರ್ ಅನ್ನು, ನನ್ನ ಕಲೀಗ್ ಗೂ ಅವನ ಖಿನ್ನತೆಗೆ ಒಳಗಾದ ಹೆಂಡತಿಗೂ ವಿಚಾರ ತಿಳಿಸಿ, ಈತನ ಫೋನ್ ನಂಬರ್ ಕೊಟ್ಟು, ಮಾತನಾಡಿ ಎಂದು ಹೇಳಿದೆ!
ಕಲ್ಲಿನಲ್ಲಿ ಅಡಗಿದ ಮೂರ್ತಿಯಂತೆ ಮಕ್ಕಳು. ಎಕ್ಸ್ಟ್ರಾ ಕಲ್ಲ ಪುಡಿಮಾಡಿ ಮಗುವಿನ ಚೆಲುವಾದ ಮೂರ್ತಿಯನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ ಎಂಬುದು, ಇಂದಿನ ಈ ಓಟದ ಲೋಕದ ಮಧ್ಯ ನಿಧಾನವಾಗಿ ಒಂದಾವರ್ತಿ ಕೂತು ಯೋಚಿಸಬೇಕಾದ ವಿಚಾರ ಅಲ್ಲವಾ!
 

‍ಲೇಖಕರು avadhi

August 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

 1. Ganesh Nempe

  ನಿಮ್ಮ ಕಲಿಗ್ಗಿಗೆ ಹೇಳಿ – Get Well Soon ಅಂತ 🙂

  ಪ್ರತಿಕ್ರಿಯೆ
 2. ಪು. ಸೂ . ಲಕ್ಷ್ಮೀನಾರಾಯಣ ರಾವ್

  ಬೀಜದಲ್ಲಿ ಮೊಳೆತು ಮರವಾಗುವ,ಬಯಲಲ್ಲಿ ತನ್ನನ್ನು ಹರಡಿಕೊಳ್ಳುವ ಹುರುಡು ಇದ್ದೇ ಇರುತ್ತದೆ. ಒಂದಷ್ಟು ನೀರು,ಗೊಬ್ಬರ(ಅಗತ್ಯವಿದ್ದರೆ )
  ಒದಗಿಸುವುದಷ್ಟೇ ನಮ್ಮ ಕೆಲಸ. ಅತಿಯಾದ ವ್ಯಾಮೋಹ ಮಗುವಿನಲ್ಲಿರುವ ಅಂತಶ್ಶಕ್ತಿಯ ದಾರಿ ತಪ್ಪಿಸಿ ವೈಫಲ್ಯಕ್ಕೆ ಎಡೆಮಾಡಿಕೊಡಬಹುದು.
  ಪೋಷಕರಲ್ಲಿನ ಈ ಅನಗತ್ಯ ತುಡಿತವನ್ನು ಲಾಭಮಾಡಿಕೊಳ್ಳಲು ಕೆಲವರು ಶಿಕ್ಷಣರಂಗವನ್ನೇ ‘ಇಂಗ್ಲಿಷ್ ಮೀಡಿಯಮ್ ‘ ಇತ್ಯಾದಿ ಹೆಸರಲ್ಲಿ ಕಲುಶಿತಗೊಳಿಸುತ್ತಿದ್ದಾರೆ.

  ಪ್ರತಿಕ್ರಿಯೆ
 3. Sarala

  Taare zammen par nodalikke heli. swalpa dhairya barabahudu. ene adaru eega makkalu odalilla andre tande taayi, adarallu taayi huchchine agabidtaleno. kelavarantu tamma makkala pratiyondu hantavannu eshtu plan maadtaare andre, hedarike agatte. akasmaat aa magu ivara neerikshe mattakke beleyilla andre, ibbaru rogigale agibiduttareno!!!

  ಪ್ರತಿಕ್ರಿಯೆ
 4. ಶಮ, ನಂದಿಬೆಟ್ಟ

  ಸಂಯುಕ್ತಾ … ಇದು ಇಂದಿನ ಸ್ಪರ್ಧಾತ್ಮಕ ಜಗತ್ತು ನಮ್ಮ ಮಕ್ಕಳಿಗೆ ಕೊಟ್ಟಿರುವ ಶಿಕ್ಷೆ. A.D.H.D ಅನ್ನೋದು ಡಿಸೀಸ್ ಅಲ್ಲ; ದಿಸಾರ್ಡರ್ ಅಷ್ಟೆ. ಡಯಾಬಿಟೀಸ್ ಇರೋರು ಅದಕ್ಕೆ ಅವಶ್ಯಕವಾದ ಜೀವನಶೈಲಿ ರುಢಿಸಿಕೊಂಡು ಖುಷಿಯಾಗಿ ಻ದರ ಜತೆಯೇ ಹೇಗೆ ಬದುಕಬಹುದೋ ಇದೂ ಅಂಥದ್ದೇ. ಮಕ್ಕಳಿಗಿಂತ ಮೊದಲು ಅಪ್ಪ ಻ಮ್ಮಂದಿರು ರಿಪೇರಿ ಆಗಬೇಕು. ಆ ಮಗುವಿನ ಭವಿಷ್ಯ ನಲುಗದಿರಲಿ. ಪೋಷಕರಿಗೆ ಬದುಕು ಇದನ್ನು ಸಹನೆಯಿಂದ ನಿಭಾಯಿಸುವ ಬುದ್ಧಿ ಕೊಡಲಿ..
  ಅತ್ಯಂತ ಸಮಯೋಚಿತ ಬರಹ

  ಪ್ರತಿಕ್ರಿಯೆ
 5. Kiran

  No doubt your concern is appreciable. ADHD is a wide-spectrum disorder with extensive idiosyncratic expressions. It should be well evaluated before starting pharmacological intervention. Lifestyle modification is also a part of management. The comment is not for that.
  “ನಾವೆಲ್ಲಾ “ಸಿಏಟಿ….ಕ್ಯಾಟ್” ಎಂದು ಕಲಿತದ್ದೇ ಹತ್ತು ವರ್ಷದಲ್ಲಿ ಎಂಬುದನ್ನು ನೆನೆದರೆ ಮೈ ಜುಮ್ ಎಂದಿತು” When the opportunities are limited and the evaluation methodologies are absurd, how do you think parents ensure some safety net for the child’s future? Despite knowing that the present teaching and evaluation methods are faulty, one has to succumb to the same. For, there is no better alternative. One among hundred who steps outside the conventional may succeed, but no one know the story of the other 99! So, statistically, hanging to the rope of convention is more fruitful!!
  What we need more importantly today is a realistic assessment and acceptance. Parents tend to get depressed with any fancy sounding diagnosis. (the names are equally frightening!) They need to understand that for every problem, there is a realistic solution. One should concentrate on solution rather than wasting time in denial or umpteen opinions.
  I would have expected more mature assessment and empathic approach from your side! Next time!!

  ಪ್ರತಿಕ್ರಿಯೆ
  • samyuktha

   Thanks for your feedback Kiran. You are being absolutely right when you say this is need of the hour. However, I do not accept the fact that “we HAVE to succumb to the situation”. The enlightenment of parent and parenting is much required today and this was my concern that made me write this.
   I am not blaming the system (because there is no choice, as u said), but I am blaming the mind-set of parents who are double apprehensive about the careers and social security of their children. Being so, they are totally forgetting that there is something called “childhood” for each and every child. Just because the world is fast growing, we need not make our kids run, each child will have their own pace of metamorphosis right? Parents must understand this and leave the space for children to actually grow!

   ಪ್ರತಿಕ್ರಿಯೆ
   • Somashekhar

    ಸಂಯುಕ್ತ , ಲೇಖನ ಚೆನ್ನಾಗಿದೆ . ಕಿರಣ್ ಅವರ comment ನ ಮೊದಲೆರಡು ಸಾಲುಗಳಿಗೆ ನನ್ನದು ಸಂಪೂರ್ಣ ಸಹಮತ . ADHD ಅಂದರೆ ಬರೀ ತುಂಟಾಟ ಅಥವಾ mischief ಅಲ್ಲ , ಇಟ್ it can be very crippling . ನಿಮಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಯಾರಾದರು ಪರಿಚಯವಿದ್ದರೆ , ಮಕ್ಕಳ ವಿಭಾಗದ OPD ಗೆ ಹೋಗಿ ಇದರಿಂದ affect ಆಗಿರುವ ಮಕ್ಕಳನ್ನು ನೋಡಿದರೆ ನಿಮ್ಮ ಅಭಿಪ್ರಾಯ ಸಂಪೂರ್ಣ ಬದಲಾಗುತ್ತದೆ

    ಪ್ರತಿಕ್ರಿಯೆ
   • Kiran

    Always nice to see the reply from author. Gives a feeling that we have reached a stage of discussion from adoration!!
    Your point is well taken.
    I completely agree with you that the parents should give some space for blooming of childhood and scope for natural growth. My comments were never to oppose this concept.
    But the point of discussion here was more with ADHD and its psychological impact on parents. The empathy factor is more important than belittling the condition.
    What parents need to know is the nature of problem their child is diagnosed with. Their initial approach of ಹೊಡೆದು, ಬೈದು, ಟ್ಯೂಶನ್ ಗೆ ಹಾಕಿ, ಏನು ಮಾಡಿದರೂ ಅವನು ಓದುತ್ತಿಲ್ಲ was also wrong. This should have been emphasized.
    Somehow, for a person who has read the sensitive approach of yours always, ‘ಮಾರಣಾಂತಿಕ ಖಾಯಿಲೆ ಬಂದವರೂ ಇಷ್ಟು ತಲೆಕೆಟ್ಟು ಕೂರುತ್ತಾರೋ ಇಲ್ಲವೋ ಎನಿಸಿತ್ತು ಅವನ ಮುಖ ಕಂಡು. ಅಷ್ಟು ಆತಂಕ, ಹೆದರಿಕೆ” sounded a bit insensitive. that is why I phrased “I would have expected more mature assessment” in my comment.

    ಪ್ರತಿಕ್ರಿಯೆ
 6. g.n.nagaraj

  ಈ ಲೇಖನದಲ್ಲಿ ಒಂದು ಗಂಭೀರವಾದ ಕನ್ ಫ್ಯೂಷನ್ ಅಡಗಿದೆ. ಅದನ್ನು ಕೆಲವರು ಪ್ರಸ್ತಾಪಿಸಿದ್ದಾರೆ.ಸಾಮಾನ್ಯ ಮಕ್ಕಳು ಅವರ ತಂದೆತಾಯಂದಿರು, ಸ್ಫರ್ಧಾತ್ಮಕ ಜಗತ್ತು ಎಂಬ ವಿಷಯವೇ ಬೇರೆ. ಎಡಿಎಎಚ್ ಡಿ ಪ್ರಶ್ನೆಯೇ ಪೂರ್ತಿ ಬೇರೆ.ಆ ಮಕ್ಕಳ ತಾಯಿ,ತಂದೆ ಆ ಮಗುವಿನ ಬಗ್ಗೆ ತಿಳಿದಾಗ ಶಾಕ್ ಆಗಿದ್ದರಲ್ಲಿ ಡಿಪ್ರೆಷನ್ ಗೆ ಒಳಗಾದ್ದರಲ್ಲಿ ಆಶ್ಚರ್ಯವೇನಿಲ್ಲ.ೀ ಸಮಸ್ಯೆ ಮೊದಲು ಗುರುತಿಸಲ್ಪಟ್ಟಾಗ ಬಹಳಷ್ಟು ತಾಯಿ,ತಂದೆಯರು ತೀವ್ರ ಶಾಕ್ ಗೆ ಒಳಗಾಗುತ್ತಾರೆ. ಅವರನ್ನು ಟೀಕೆ ,ವ್ಯಂಗ್ಯಗಳಿಗೆ ಗುರಿ ಮಾಡುವ ವಿಷಯವಲ್ಲ.಻ವರಿಗೆ ಧೈರ್ಯ ತುಂಬುವ, ಸಹಾನುಭುತಿ ವ್ಯಕ್ತಪಡಿಸಬೇಕಾದ ವಿಷಯ. ಸಹಾಯ ಮಾಡಬೇಕಾದ ವಿಷಯ.ಿಂತಹ ಸಮಸ್ಯೆ ಇರುವ ಮಕ್ಕಳು ,ಅವರ ತಂದೆ ತಾಯಂದಿರು ಪಡಬೇಕಾದ ಕಲಿಕೆಯ ಕಷ್ಟಗಳನ್ನು ನಿಭಾಯಿಸಲು ಸಿದ್ದ ಮಾಡಬೇಕಾಗಿದೆ.ಎಡಿಎಚ್ ಡಿ ಯ ನಿರ್ದಿಷ್ಟ ಸ್ವರೂಪದ ಮೇಲೆ ಻ದನ್ನು ಅರಿತುಕೊಂಡು ಮಗನನ್ನು ತರಬೇತುಗೊಳಿಸಲು ಅವರು ಮನಸ್ಸು ಗಟ್ಟಿ ಮಾಡಿಕೊಂಡು ತಯಾರಾಗಬೇಕು-ಕರ್ನಾಟಕ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಕಾರ್ಯಕರ್ತ

  ಪ್ರತಿಕ್ರಿಯೆ
 7. Roopa Satish

  Hi Samyuktha….. ಒಳ್ಳೆ ಲೇಖನ…. ಇಷ್ಟವಾಯ್ತು…. Exactly, the Taare Zameen Par type….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: