ಲೋಕೇಶ್ ಮೊಸಳೆ
—–
ಸಂತೋಷ್ ಚೊಕ್ಕಾಡಿ ನಮ್ಮ ನಡುವಿನ ಕ್ರಿಯಾಶೀಲ ಸೃಜನಾತ್ಮಕ ಕವಿ.
ಇನ್ನೂ ಬಿಡುಗಡೆಯಾಗದ ( ಬಿಡುಗಡೆಯ ಹಂಗು ಕವಿತೆ ಗಳಿಗೆ ಬೇಕೆ…? ಬರೆದಂದೆ ನನ್ನೊಳಗೆ ಬಿಡುಗಡೆ ಆಗಿರುತ್ತವೆ ಎನ್ನುವ ಚೊಕ್ಕಾಡಿ ) “ಅರ್ಥವಿದೆಯೇ ವಿದಾಯಕ್ಕೆ ” ಕವಿತಾ ಸಂಕಲನ ಕುರಿತು ‘ಸಿಕಾಡ’ ನಾದದ ಒಂದು ಸಂಜೆ ಬಿಯರ್ ನೊಂದಿಗೆ ಹರಟೆ ಹೊಡೆಯುತ್ತ ಕಾವ್ಯ ಕಾಲಕ್ಷೇಪ ನಡೆಸಿದ್ದು ನಿಮ್ಮೊಂದಿಗಿಲ್ಲಿದೆ…..,
ಲಕ್ಷ್ಮೀಶ ತೋಳ್ಪಾಡಿ ಅವರು ಮುನ್ನುಡಿಯಲ್ಲಿ ಕವಿ ಎಸ್, ಮಂಜುನಾಥ್ ಅವರ ಪ್ರಭಾವ ಗಾಢವಾಗಿದೆ ಎಂದಿದ್ದಾರೆ. ಹಾಗೆಯೇ ಕೆ. ಪಿ. ಸುರೇಶ್ ಮತ್ತೆ ಮತ್ತೆ ಗಮನಿಸಬೇಕಾದ ಕವಿ ಎಂದಿದ್ದಾರೆ. ಇದರ ನಡುವೆ ನನಗೆ ಚೊಕ್ಕಾಡಿ ಈ ಕೃತಿಯಲ್ಲಿ ಒಬ್ಬ ಪ್ರವಾಸಿ ಕವಿ ಅನ್ನಿಸಿ ಕೊಳ್ಳಲು ಕಾರಣ ನಾನು ತಿರುಗಿದ ಕಡೆಯಲ್ಲೆಲ್ಲ ಸಂತೋಷ್ ತಿರುಗಾಡಿ ಕಟ್ಟಿರುವ ಕವಿತೆಗಳು ನನಗೆ ವಿಭಿನ್ನ ಅನಿಸಿ ರೋಮಾಂಚನಗೊಳಿಸುತ್ತಿವೆ…
ಯಾಕೆಂದರೆ “ಹಿಮಾಲಯ” ಅಲ್ಲಿನ ಜೀವಜಾಲ, ಬೆಡಗು, ಜನ ಜೀವನ , ಕಣಿವೆ, ಬೆಟ್ಟ, ನೆರಳು ಬೆಳಕಿನ ಹಬ್ಬವನ್ನ ಕಾವ್ಯ ವನ್ನಾಗಿಸಿದ ಪರಿ ಅನನ್ಯ ಅನುಭವ ಕೊಡುತ್ತಿದೆ. ಮತ್ತೆ ಮತ್ತೆ ಹಿಮಾಲಯದ ಚಿತ್ರಣ ಮನದುಂಬುತ್ತಿದೆ. ಹೀಗಾಗುವುದರಿಂದಲೆ ಇಲ್ಲಿನ ಕವಿತೆಗಳು …., Lovely
ಇದೊಂದು ಖಾಸಗಿ ಮಾತುಕತೆ ಅಂತಾದರೂ…, ‘ಕವಿಗೆ ಎಂಥಾ ಖಾಸಗೀತನ…?’ ಸೃಜನ ಶೀಲ ಕವಿ ಮನಸ್ಸು ಕಾವ್ಯದಲ್ಲಿ ಹೊರ ಬರುತ್ತದಾದರು…., ನಾನೇನು ಮಾಡಲಿ ಶಿವನೇ…ಶಂಭುಲಿಂಗ ?.
ಹೀಗಾಗಿ ….,ಸುಮ್ಮನೇ ಇಲ್ಲಿನ ವೀಡಿಯೋ ಕ್ಲಿಪ್ ನ ಪಟ್ಟಾಂಗದ ಕಿಕ್ ನಿಮಗೂ ಮತ್ತೇರಿಸಿದರೆ ನನಗೂ ಸಂತೋಷ… ಕವಿ ಸಂತೋಷನಿಗೂ ಕೂಡ.
ನಿಮಗೆ ನಮಸ್ಕಾರ, ಕೇಳಿದ್ದಕ್ಕೆ…
0 ಪ್ರತಿಕ್ರಿಯೆಗಳು