ಸಂಚಾರಿ ವಿಜಯ್ ನೆನಪಿನ ನಾಟಕೋತ್ಸವ…

ಸಂಚಾರಿ ಥಿಯೇಟರ್ ತಂಡದ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಂದು ನಮ್ಮೊಡನೆ ಇಲ್ಲ. 2009 ರಲ್ಲಿ ಸಂಚಾರಿ ಥಿಯೇಟರ್ ಗೆ ಪಾದಾರ್ಪಣೆ ಮಾಡಿದ ವಿಜಯ್, ಸಂಚಾರಿ ಥಿಯೇಟರ್ ನ ಎಲ್ಲ ನಾಟಕಗಳ ಭಾಗವಾದರು. ರಂಗಭೂಮಿಯ ಕೆಲಸಗಳ ಬಗೆಗಿನ ತಮ್ಮ ಆಸಕ್ತಿ, ನಿಷ್ಠೆ ಮತ್ತು ಪ್ರತಿಭೆಯ ಮೂಲಕ ಎಲ್ಲ ನಾಟಕಗಳಲ್ಲೂ ತಮ್ಮ ಪಾತ್ರವನ್ನು ಕಾಯ್ದಿರಿಸಕೊಂಡರು.

ಸಂಚಾರಿಯ ಅತಿ ಮುಖ್ಯ ದ್ರವ್ಯವಾದರು. ಅಭಿನಯ ಪ್ರಶಿಕ್ಷಕರಾದರು. ನಾಟಕಗಳನ್ನು ನಿರ್ದೇಶಿಸಿದರು. ಸಂಘಟನೆಯ ಕೆಲಸಗಳಲ್ಲೂ ತೊಡಗಿಸಿಕೊಂಡರು. ಜೊತೆಗೆ ಬೇರೆ ತಂಡಗಳ ಜೊತೆಯಲ್ಲಿಯೂ ಕೆಲಸ ಮಾಡಿದರು. ಚಲನಚಿತ್ರಗಳಲ್ಲಿ ಅಭಿನಯಿಸಿದರು. 27 ವರ್ಷಗಳ ನಂತರ ಕರ್ನಾಟಕಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟರು. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಅತ್ಯುನ್ನತ ಕೆಲಸಗಳನ್ನು ಮಾಡುವುದಲ್ಲದೇ, ತಮ್ಮ ಸಾವಿನಲ್ಲೂ ಶ್ರೇಷ್ಟತೆಯನ್ನು ಮರೆದು ನಿರ್ಗಮಿಸಿದರು.

ಸಂಚಾರಿ ಥಿಯೇಟರ್, ಸಂಚಾರಿ ವಿಜಯ್ ನೆನಪಿನಲ್ಲಿ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ರಂಗಭೂಮಿ ಯಾರಿಗೂ ಕಾಯುವುದಿಲ್ಲ. ಪ್ರದರ್ಶನಗಳು ನಿಲ್ಲುವುದಿಲ್ಲ ಎಂಬ ಮಾತಿನಂತೆ ಸಂಚಾರಿ ವಿಜಯ್ ನ ನೆನಪಿನಲ್ಲಿ ಆತ ಅಭಿನಯಿಸುತ್ತಿದ್ದ ಕೆಲವು ನಾಟಕಗಳನ್ನು ಮತ್ತೆ ಹೊಸ ಹುಡುಗರೊಂದಿಗೆ, ಹಿಂದಿನ ಕಲಾವಿದರ ಸಹಕಾರದೊಂದಿಗೆ ಮತ್ತೆ ನಾಟಕ ಕಟ್ಟುತ್ತಾ ಅದರ ಪ್ರದರ್ಶನಗಳನ್ನು ಸಂಚಾರಿ ವಿಜಯ್ ಗೆ ಅರ್ಪಿಸಲು ಸಿದ್ಧಗೊಂಡಿದೆ. ಸಂಚಾರಿ ಹುಟ್ಟುಹಬ್ಬ ಜುಲೈ 17 ರಂದು ನಾಡಿನ ಹೆಸರಾಂತ ರಂಗನಿರ್ದೇಶಕರಾದ ಬಿ.ಜಯಶ್ರೀಯವರು. ಈ ನಾಟಕಗಳ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಮೂಲಕ ನಾಟಕೋತ್ಸವದ ಸಿದ್ದತೆಗೆ ಚಾಲನೆ ನೀಡಿದರು.

ಇದೇ ಆಗಸ್ಟ್ 5,6,7 ರಂದು ಬೆಂಗಳೂರಿನ ಕಲಾಗ್ರಾಮ ರಂಗಮಂದಿರದಲ್ಲಿ ಸಂಚಾರಿ ವಿಜಯ್ ಅಭಿನಯಿಸುತ್ತಿದ್ದ ಮೂರು ನಾಟಕಗಳು ಸಂಜೆ 7 ಗಂಟೆಗೆ ಪ್ರದರ್ಶನಗೊಳುತ್ತವೆ.

5 ನೇ ತಾರೀಖು ರಂಗಭೂಮಿ ನಿರ್ದೇಶಕರಾದ ಸುರೇಶ್ ಆನಗಳ್ಳಿ, ಲೇಖಕರಾದ ವಸುಧೇಂದ್ರ ಮತ್ತು ರಂಗಸಂಘಟಕರಾದ ಶ್ರೀನಿವಾಸ್.ಜಿ.ಕಪ್ಪಣ್ಣ ಅವರು ಉತ್ಸವವನ್ನು ಉದ್ಘಾಟಿಸುತ್ತಾರೆ.

‍ಲೇಖಕರು Admin

August 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: