ಶ್ರೀಧರ್ ಡಿ ಸಿ
ಈ ವರ್ಷದ ಎಳ್ಳಿನ ಬೆಳೆ ಚೆನ್ನಾಗಿ ಆಗಿದೆ…
ಮಾರ್ಚಿ 2020ರ ನಂತರದ ಸಂಧಿಗ್ದ ಹಾಗೂ ವಿಷಮ ದಿನಗಳಲ್ಲಿ ಇದು ನಿಜಕ್ಕೂ ಮನಸ್ಸಿಗೆ ನೆಮ್ಮದಿಕೊಡುವ ವಿಷಯ!
ಇನ್ನೊಂದು ವಾರದೊಳಗೆ ಫಸಲು ಮನೆ ಸೇರುತ್ತದೆ.
ಇದಾದ ಕೆಲವು ದಿನಕ್ಕೆ ಮತ್ತೆ ಭೂಮಿಯನ್ನು ರಾಗಿ ಬೆಳೆಗೆ ಹದಗೊಳಿಸಬೇಕು. ಮಳೆಯಾಶ್ರಿತ ರೈತರಿಗೆ ಈಗ ಕೈತುಂಬಾ ಕೆಲಸದ ದಿನಗಳು.
ಬೆಳೆಯನ್ನು ಕೊಯ್ಲು ಮಾಡುವ ಮುನ್ನ ಮುನೇಶ್ವರನಿಗೆ ಪೂಜೆಯನ್ನು ಸಲ್ಲಿಸಿ, ಹೊಲದಲ್ಲೇ ಸೌದೆಯಲ್ಲಿ ಅಡುಗೆ ಮಾಡಿ, ಊಟ ಮಾಡಿದ ನಂತರ ಬೆಳೆಯನ್ನು ಮನೆಗೆ ತರುವುದು ನಮ್ಮ ಹಿರಿಯರು ರೂಢಿಸಿಕೊಂಡ ಸಂಪ್ರದಾಯ; ಅದನ್ನು ಅಪ್ಪ ತಪ್ಪದೇ ಅನುಸರಿಸುತ್ತಾರೆ.
ಸದಾ ಸ್ವಚ್ಚವಾದ ಪರಿಸರದಲ್ಲೇ ಊಟ ಮಾಡುವ ನನ್ನಂತ ಬೆಂಗಳೂರಿಗನಿಗೆ; ಆಗಾಗ ಹೀಗೆ ಅಪ್ಪ ಶ್ರಮ ಹಾಕಿದ ಹೊಲದ ಮಣ್ಣಲ್ಲೇ ಕೂತು, ಅಲ್ಲೇ ಸಿಗುವ ಮರದ ಎಲೆಗಳಲ್ಲೇ ಊಟದ ಎಲೆಯನ್ನು, ದೊನ್ನೆಯನ್ನು ತಯಾರಿಸಿಕೊಂಡು ಊಟ ಮಾಡೋದು ಇದ್ಯಲ್ಲ ಅದು ಪುಷ್ಕಳ ಭೋಜನ…!!!
ತುಂಬಾ ಚೆನ್ನಾಗಿದೆ
ಓದುವಾಗ, ‘ಎಂಥಾ ಸೊಗಸು ಇದು’! ಅಂತನಿಸುತ್ತೇ, ಭೂಮಿತಾಯಿಯ ಜೊತೆಗಿನ ನಿಮ್ಮ ಹಾಗು ನಿಮ್ಮ ಕುಟುಂಬದ ಈ ಸಂಬಂಧ ಹೀಗೆ ಸೊಗಸಾಗಿರಲಿ, ಇನ್ನೂ ಹೆಚ್ಚಿನ ಈ ನಿಮ್ಮ ನಂಟಿನ ಅನುಭವಗಳನ್ನ ಹಂಚಿಕೊಳ್ಳುತ್ತಾಇರಿ ಕಾಮ್ರೇಡ್