ಶಿವಕುಮಾರ ಮಾವಲಿ
**
ಶಾಖಾಹಾರಿ ಒಂದು ಸಿನಿಮಾವಾಗಿ ಗಾಢ ಅನುಭವದ ಜೊತೆ ಥ್ರಿಲ್ಲಿಂಗ್ ಕಥೆಯೊಂದರ ಅನಾವರಣ ಮಾಡುತ್ತದೆ. ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದರೂ, ಚಿತ್ರದ ಬಗ್ಗೆ ಕುತೂಹಲ ಉಳಿಸಿಕೊಳ್ಳುವಂತೆ ಸಿನಿಮಾ ಕಟ್ಟುವುದು ಕಷ್ಟ. ಅದನ್ನು ಮಾಡುವಲ್ಲಿ Sandeep Sunkad ಮತ್ತು ತಂಡ ಯಶಸ್ವಿಯಾಗಿದೆ. ಮೂಲ ಕಥೆಯ ಜಾಡಿನೊಂದಿಗೆ ಅನೇಕ ಸಣ್ಣ ಸಣ್ಣ ವಿಷಯಗಳನ್ನು ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದೆ. ಈಗಾಗಲೇ ಹಿಟ್ ಆಗಿರುವ ಸೌಗಂಧಿಕಾ ಹಾಡು ಚಿತ್ರಮಂದಿರದಲ್ಲಿಯೂ ಗುನುಗುವಂತೆ ಮಾಡುತ್ತದೆ. ಅನೇಕ ಕಡೆಗಳಲ್ಲಿ Vishwajith Rao ಕ್ಯಾಮೆರಾ ಕೈಚಳಕ ದಾಟಿಸಬೇಕಾದ್ದನ್ನು ಸಲೀಸಾಗಿ ದಾಟಿಸುತ್ತದೆ.
ಸಂಕಲನಕಾರನೂ ಆಗಿರುವ ಶಶಾಂಕ್, ಪೊಲೀಸ್ ಕಾನ್ ಸ್ಟಬಲ್ ಪಾತ್ರದಲ್ಲಿಯೂ ಮಿಂಚುತ್ತಾರೆ. ಮಹಿಳಾ ಪೊಲೀಸ್ ಪೇದೆ ಮಮತಾ ಕಿಣಿಯವರ ಪಾತ್ರವೂ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. Sreeharsha Gobhatt ಆತ್ಮೀಯ ಗೆಳೆಯನ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಇನ್ನು ಇಂಥ ಪಾತ್ರಗಳಿಗೆ ಹೇಳಿ ಮಾಡಿಸಿದಂಥ ನಟರಾದ ರಂಗಾಯಣ ರಘು ಮತ್ತು ಗೋಪಾಲ ದೇಶಪಾಂಡೆ ಇಬ್ಬರೂ ಸಿನಿಮಾವನ್ನು ಹಿಡಿದು ನಿಲ್ಲಿಸಿದ್ದಾರೆ. ಮನುಷ್ಯನೊಳಗಿನ ಕ್ರೌರ್ಯವು ಗುಂಪಿನಲ್ಲಿ ಮಾತ್ರವಲ್ಲದೆ, ಒಬ್ಬನೆ ಇದ್ದಾಗಲೂ ಹೇಯವಾಗಿರುತ್ತದೆ. ಅನಿರೀಕ್ಷಿತ ಘಟನೆಗಳಿಂದಾಗಿ ಆ ಹಾದಿಗೆ ಹೋದ ಮನುಷ್ಯನಿಗೂ ಹಿಂದಿರುಗುವ ದಾರಿ ಸಲೀಸಲ್ಲ.
ಸುಮಾರು ಹದಿನೈದು ವರ್ಷಗಳ ಹಿಂದೆ ಶಿವಮೊಗ್ಗದ ಎಸ್ ಆರ್ ಗಿರೀಶ್ ಅವರ ‘ಅನಿರೀಕ್ಷಿತಗಳು’ ನಾಟಕದಲ್ಲಿ ಇದರ ಒಂದು ಸಣ್ಣ ಎಳೆಯಿತ್ತು. ಮೂಲ ಕಥೆ ಅವರದ್ದು ಎಂದು ಕ್ರೆಡಿಟ್ ಕೊಟ್ಟಿರುವ ಚಿತ್ರತಂಡಕ್ಕೆ ಅಭಿನಂದನೆಗಳು. ಅವರ ಫೋಟೋ ನೋಡಿ ಅವರೊಂದಿಗಿನ ರಂಗಭೂಮಿಯ ಅನುಭವಗಳೆಲ್ಲ ಮತ್ತೆ ನೆನಪಾದವು. ಚಿತ್ರದಲ್ಲಿ ಆಯಾ ಪಾತ್ರಗಳ ಹಿನ್ನೆಲೆಗೆ ತಕ್ಕಂತೆ ಭಾಷೆಯನ್ನು ಬಳಸಿರುವುದು ಗಮನಾರ್ಹ ಅಂಶ. This is a MUST watch film. ಗೆಳೆಯರೆಲ್ಲರಿಗೂ ಅಭಿನಂದನೆಗಳು.
0 Comments