ಶಿವಕುಮಾರ ಮಾವಲಿ ಓದಿದ ‘ಮುರಕಮಿ’

ಶಿವಕುಮಾರ ಮಾವಲಿ

“ನಾನು ಒಬ್ಬನೇ ಹೋಗಿ ಥಿಯೇಟರ್ ನಲ್ಲಿ ಕೂತು ಸಿನಿಮಾ ನೋಡಬಲ್ಲೆ. ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಒಬ್ಬನೇ ಕೂತು ಒಳ್ಳೆಯ ಊಟ ಉಂಡೆದ್ದು ಬರಬಲ್ಲೆ. ಯಾವುದೋ ಸ್ಥಳಕ್ಕೆ ಒಬ್ಬನೇ ಪ್ರವಾಸ ಹೋಗಿಬಿಡಬಲ್ಲೆ. ನನಗೆ ಯಾರಿಂದಲೋ ನೋವುಂಟಾಗಿದೆ ಎಂಬುದು ನೆನಪೇ ಇಲ್ಲದಂತೆ ಬದುಕಿ ಬಿಡಬಲ್ಲೆ” ಎಂಬಂಥ ವ್ಯಕ್ತಿತ್ವ ಬಹುತೇಕ ಎಲ್ಲರಲ್ಲೂ ಇರುತ್ತದೇನೋ…‌ ಆದರೆ ಹಾಗೆ ಬದುಕುವವರು ಕಡಿಮೆಯೇ.

ಈ ಸಂಕಲನದಲ್ಲಿನ ಅನೇಕ ಪಾತ್ರಗಳಿಗೆ ಅಂಥ ಶಕ್ತಿಯಿದೆ. ಅಥವಾ ದೌರ್ಬಲ್ಯವಿದೆ. 100% ಪರ್ಫೆಕ್ಟ್ ಹುಡುಗಿ ಪಕ್ಕದಲ್ಲಿ ಹಾದು ಹೋದಳು ಎಂದು ನೆನೆಯುವ ಮರೆಯಲಾಗದ ನೆ‌ನಪುಗಳಿವೆ. ಪ್ರೇಮ -ಕಾಮಗಳು ಎಷ್ಟು ವಿಶೇಷವೋ ಅಷ್ಟೆ ಸಾಮಾನ್ಯ ಸಂಗತಿಗಳು ಎಂದು ಸಾಬೀತುಪಡಿಸುವ ಸಂಗತಿಗಳಿವೆ.

ಹೆಂಡತಿ ಮೋಸ ಮಾಡಿದಮೇಲೆ ಬಾರ್ ಗೆ ಹೋಗಿ ಕೂರಬೇಕಿದ್ದ ಕಿನೊ, ಸ್ವತಃ ಬಾರ್ ತೆಗೆಯುತ್ತಾನೆ. ಆಮೇಲೊಂದು ದಿನ ಆಕೆ ತನ್ನದು ತಪ್ಪಾಯ್ತು ಎಂದು ಹೇಳಿದಾಗ ಕಿನೊ : “ನಾವು ನಿಜವಾಗಿಯೂ ಕಲಿಯಬೇಕಿರುವುದು ಕ್ಷಮಿಸುವುದನ್ನೇ ಹೊರತು ಮರೆಯುವುದನ್ನಲ್ಲ” ಎಂದುಕೊಳ್ಳುತ್ತಾನೆ …‌ನಾನು ಮೊದಲ ಪ್ಯಾರಾದಲ್ಲಿ ಹೇಳಿದಂಥ ಸಂಗತಿಗಳನ್ನು ನೀವು ಮಾಡುವವರಾಗಿದ್ದರೆ ಈ ಪುಸ್ತಕ ನಿಮಗೊಂದು ವಿಶೇಷ ಅನುಭೂತಿ ಕೊಡುತ್ತದೆ.

ಇಲ್ಲಿನ ಕತೆಗಳು ನದಿ ದಡದ ಮೇಲೆ ನಿಂತು ಈಜಲು ತಯಾರಾಗಿ ನಿಂತವನ ಹಾಗೆ. ತನ್ನ ಜೊತೆಯಲ್ಲಿ ಎಷ್ಟೇ ಜನರಿದ್ದರೂ ಅವರಿಗೆ ಈಜು ಬರಲಿಲ್ಲ ಎಂದರೆ ಅವರು ಯಾರೂ ತನ್ನೊಡನೆ ನದಿಗೆ ಹಾರಲಾರರು. ಹಾಗೆಯೇ ಈಜು ಬಂದವರಿದ್ದರೂ ನಮ್ಮ ಈಜುವಿಕೆಯನ್ನು ನಾವೇ ನಿಭಾಯಿಸಬೇಕು .

‍ಲೇಖಕರು Admin

May 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: