ಶಾಲಾ ಮಕ್ಕಳ ಕೈಗೆ ʼಅಮ್ಮ ಹೇಳಿದ ಎಂಟು ಸುಳ್ಳುಗಳುʼ

ಪ್ರಸಾದ್‌ ರಕ್ಷಿದಿ

ಕೆಲವು ದಿನಗಳ ಹಿಂದೆ ಕಾಫಿ ವಲಯದ ಒಂದು ಶತಮಾನದ ಸಾಂಸ್ಕೃತಿಕ ಸಂಕಥನವನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೆ. ‘ಕಳೆದ ಹೋದ ದಿನಗಳು’ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಈ ಸರಣಿ ನಂತರ ನಾನು ಗೌರಿ. ಕಾಮ್ ನಲ್ಲಿಯೂ ಬಂದಿತ್ತು. ಈ ಸರಣಿಗೆ ಬಂದ ಪ್ರತಿಕ್ರಿಯೆಗಳು. ಅಭಿಪ್ರಾಯಗಳು ನೂರಾರು..

ಈ ಸರಣಿಯ ಮೂಲಕವೇ ನನಗೆ ಪರಿಚಯ‌ ಮತ್ತು ಸಂಪರ್ಕಕ್ಕೆ ಬಂದವರು. ಕನ್ನಡದ ಹೆಸರಾಂತ ಬರಹಗಾರ ಎ.ಆರ್. ಮಣಿಕಾಂತ್. ಅವರಿಗೆ ಸಕಲೇಶಪುರದ ಬಗ್ಗೆ ವಿಶೇಷ ಪ್ರೀತಿ ಮತ್ತು ಒಡನಾಟಗಳಿವೆ ಎಂದು ತಿಳಿದದ್ದು ಆ ಮೂಲಕವೇ.

ನನ್ನ ಬರಹಗಳಲ್ಲಿ ಸಾಂದರ್ಭಿಕವಾಗಿ ಸಕಲೇಶಪುರದ ಗಣಪಯ್ಯ ಸ್ಮಾರಕ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಬರೆದಿದ್ದೆ. ಆ ಶಾಲೆಯ ಮಕ್ಕಳ ಬಗ್ಗೆ ಕಾಳಜಿಯಿಂದ ಎ.ಆರ್.ಮಣಿಕಾಂತ್ ಅವರು ತಮ್ಮ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕೃತಿಯ ಒಂದು ನೂರು ಪ್ರತಿಯನ್ನು ಎಲ್ಲ ಮಕ್ಕಳಿಗೂ ತಲುಪುವಂತೆ ಕಳುಹಿಸಿಕೊಟ್ಟರು.

ಇಂದು ಪುಸ್ತಕಗಳನ್ನು ಎಲ್ಲ ವಿಶೇಷ ಚೇತನ ಮಕ್ಕಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಪಾರಸ್ ಮಲ್, ರಜನೀಕಾಂತ್, ವಾಸುದೇವ ಶರ್ಮ, ಪ್ರಾಂಶುಪಾಲ ಲೋಕೇಶ್, ಶಿಕ್ಷಕರಾದ ಈಶ್ವರಪ್ಪ ಹಕಾರಿ, ವೇದಿಕೆಯಲ್ಲಿ ಇದ್ದರು. ಸುಳ್ಯದ ವೈದ್ಯ ಡಾ.ಕೃಷ್ಣ ಮೂರ್ತಿ ಪಾರೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

‍ಲೇಖಕರು Admin

November 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sudha Adukal

    ಮಣಿಕಾಂತ ಸರ್ ಮನಸು ದೊಡ್ಡದು. ನಮ್ಮ ಕಾಲೇಜಿಗೂ ತುಂಬಾ ಪುಸ್ತಕಗಳನ್ನು ಕಳಿಸುವುದಾಗಿ ಹೇಳಿದ್ದಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: