ಸವಿತಾ ನಾಗಭೂಷಣ
————–
ಶಾಂತಿ ಬಯಸುವವರೆಲ್ಲ
ಸಭೆ ಸೇರಿದರು
ಶವದ ಪೆಟ್ಟಿಗೆಗಳ ಮೇಲೆ
ಕುಳಿತು ಮಾತನಾಡಿದರು
ಹಾರೈಸುತ್ತಿತ್ತು
————–
ಲೋಕವೆಲ್ಲ ಹತವಾದ ಮೇಲೆ
ಗತವಾದ ಮೇಲೆ
ತೊಟ್ಟಿಲೊಂದು ತಾನೆ ತೂಗುತ್ತಿತ್ತು
ದಿನದ ಮೊದಲ ಎಳೆಯ ಸೂರ್ಯ ಕಿರಣ ಬೆಚ್ಚಗಿಟ್ಟು
ಬದುಕು ಹಾರೈಸುತಿತ್ತು
ವಿಜಯ ಸ್ತಂಭ
———
ಶವಗಳೇ ತಳಪಾಯ
ಆರ್ತನಾದವೇ ಜಯಘೋಷ!
0 ಪ್ರತಿಕ್ರಿಯೆಗಳು