ಶರಪಂಜರ ಶಿವರಾಂ ಬಾರದೂರಿಗೆ ಪಯಣ…

ಗಣೇಶ್ ಶೆಣೈ

ಚಿತ್ರ ರಂಗದ ಹಿರಿಯ ನಟ ಶಿವರಾಮಣ್ಣ, ಸುಚಿತ್ರ ಫಿಲ್ಮ್ ಸೊಸೈಟಿ ಯನ್ನು ಕಟ್ಟಿ ಬೆಳೆಸಿದ ಹಿರಿಯ ರಲ್ಲಿ ಪ್ರಮುಖರು.. ಕಳೆದ ಎರಡು ವರ್ಷಗಳಿಂದ ಸುಚಿತ್ರ ಫಿಲ್ಮ್ ಸೊಸೈಟಿ ಯ ಕಾರ್ಯಕಾರಿ ಸಮಿತಿಯಲ್ಲಿ ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ಒದಗಿಬಂತು.. ಕನ್ನಡ ಚಿತ್ರರಂಗದ ಅನೇಕ ಘಟನೆಗಳಿಗೆ ಸಾಕ್ಷಿ ಯಾಗಿದ್ದ ಅವರು, ಅನೇಕ ಪ್ರಸಂಗಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು..

ಎರಡು ವರ್ಷಗಳಿಂದ ಅವರ ಮುಂದಾಳತ್ವದಲ್ಲಿ ಕನ್ನಡ ಚಿತ್ರರಂಗದ ಹಲವು ಸಾಧಕರ ಶತಮಾನೋತ್ವದ ನೆನಪಿನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು.. ಅವರ ಉತ್ಸಾಹ, ಹುರುಪು ಹಾಗೂ ವಸ್ತುನಿಷ್ಟ ಯೋಚನೆ ನಮಗೆಲ್ಲರಿಗೂ ಅನುಕರಣೀಯ ವಾಗಿತ್ತು.. ಅವರ ಮನಸ್ಸು ಯಾವಾಗಲೂ ಕಲೆ ಅದರಲ್ಲೂ ಚಿತ್ರರಂಗದ ಯಶಸ್ಸಿಗೆ ತುಡಿಯುತ್ತಿತ್ತು.. ನಮ್ಮ ಕಾರ್ಯಕಾರಿ ಸಮಿತಿ ಸಭೆ ಗಳಲ್ಲಿ, ಅವರ ಹಾಸ್ಯ, ಹುಸಿ ಕೋಪ ತಾಪ, ಹಳೆಯ ಕತೆ ಗಳು ಮತ್ತು ಸ್ನೇಹ ಪರತೆ ಇನ್ನೆಲ್ಲಿ? ನಿಮ್ಮ ಯೋಜನೆ, ಯೋಚನೆಗಳನ್ನು ಕಾರ್ಯಗತ ಗೊಳಿಸುವುದೇ ನಾವು (ಸುಚಿತ್ರ ಫಿಲ್ಮ್ ಸೊಸೈಟಿ) ನಿಮಗೆ ಕೊಡುವ ಶ್ರಧ್ಧಾಂಜಲಿ…. ನಮನಗಳು…

ಟಿ ಎನ್ ಸೀತಾರಾಮ್

‘ಎಲ್ಲರೂ ಸುಖಕ್ಕೆ ಆದರೆ, ಶಿವರಾಮಣ್ಣ ಕಷ್ಟಕ್ಕೆ ಆಗುತ್ತಾರೆ’ ಎಂದು ಅನೇಕ ಗೆಳೆಯರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಯಾರಾದರೂ ಪರಿಚಿತರಿಗೆ ಕಷ್ಟ ಬಂದರೆ ಶಿವರಾಮಣ್ಣ ಅವರ ಕಷ್ಟ, ಸುಖ ವಿಚಾರಿಸಿಕೊಂಡು ಸಾಂತ್ವನ ಹೇಳುತ್ತಿದ್ದುದು ನಾನು ಬಲ್ಲ ಸಂಗತಿ.

ಸುತ್ತ ಇದ್ದವರನ್ನು ನಗಿಸುತ್ತಾ ಸುತ್ತಣ ವಾತಾವರಣ ವನ್ನು ಸದಾ ಉಲ್ಲಾಸದಿಂದ ಇಟ್ಟುಕೊಂಡಿರುತ್ತಿದ್ದ ಅವರು ತಮ್ಮ ಹಾಸ್ಯ ಪಾತ್ರ ಗಳನ್ನು ವಹಿಸುತ್ತಿದ್ದ ರೀತಿಗೆ ಆ ಪಾತ್ರಗಳಿಗೆ ಒಂದು ವಿಶಿಷ್ಟ ಘನತೆ ಬರುತ್ತಿತ್ತು.

ಲಂಕೇಶ್ ಮೇಷ್ಟ್ರ ಮೊದಲ ನಾಟಕಗಳಲ್ಲಿ ಒಂದಾದ ‘ಟಿ.ಪ್ರಸನ್ನನ ಗೃಹಸ್ಥಾಶ್ರಮ’ 1967 ರಲ್ಲಿ ಮೊದಲ ಬಾರಿ ಪ್ರಯೋಗವಾದಾಗ ಅದನ್ನು ನಿರ್ದೇಶಿಸಿ ಮುಖ್ಯ ಪಾತ್ರ ವಹಿಸಿದ್ದವರು ಶಿವರಾಮಣ್ಣ

ನಂತರ ಶರಪಂಜರ ಶಿವರಾಜ್ ಎಂದೇ ಹೆಸರಾಗಿ ನೂರಾರು ಕನ್ನಡ ಚಲನಚಿತ್ರಗಳಲ್ಲಿ ಪಾತ್ರ ವಹಿಸಿ ಲಕ್ಷ ಲಕ್ಷ ಪ್ರೇಕ್ಷಕರಲ್ಲಿ ಆರೋಗ್ಯಕರ ನಗೆ ಉಕ್ಕಿಸಿದವರು ಶಿವರಾಮಣ್ಣ.

ಯಾರ ಯಶಸ್ಸನ್ನು ಕಂಡರೂ ಕರುಬದೆ ಮನಸಾರೆ ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ ಶಿವರಾಮಣ್ಣ ಇಂದು ನಿಧನರಾಗಿ ಚಿತ್ರ ರಂಗದ ಸಭ್ಯ ಲೋಕಕ್ಕೊಂದು ದೊಡ್ಡ ನಷ್ಟವಾಗಿದೆ

ಶಿವರಾಮಣ್ಣ ನಿಮಗೊಂದು ಪ್ರೀತಿಯ ವಿದಾಯ.

ಹೆಚ್ ವಿ ವೇಣುಗೋಪಾಲ್

ಶರಪಂಜರ ಶಿವರಾಮ್ ನಮ್ಮನ್ನು ಬಿಟ್ಟು ಬಾರದೂರಿಗೆ ಹೋಗಿದ್ದಾರೆ. ಅತೀವ ನೋವಿನ ಸಂಗತಿ. ಸಂತಾಪಗಳು. ಕನ್ನಡ ಚಿತ್ರರಂಗಕ್ಕೆ, ಹೆಚ್ಚಾಗಿ ಸುಚಿತ್ರ ಫಿಲ್ಮ್ ಸೊಸೈಟಿಗೆ ಭರಿಸಲಾಗದ ನಷ್ಟ.

ಮಾನವೀಯ ಹೃದಯದ ಧರ್ಮಧುರಂಧರ ಶಿವರಾಂ ಅವರೊಡನೆ ಕೆಲಸಮಾಡುವುದು ಯಾರಿಗಾದರೂ ಅದು ಕಲಿಕೆಯ ದಾರಿ. ನನಗೂ ಸಹ ಒಂದೆರಡು ಸುಚಿತ್ರದ ಕಾರ್ಯಕ್ರಮದಲ್ಲಿ ಅವರ ಮಾರ್ಗದರ್ಶನದಲ್ಲಿ ಕೆಲಸಮಾಡಿದ್ದೆ ಎಂಬುವುದು ಹೆಮ್ಮೆಯ ಸಂಗತಿ.

ಪ್ರೀತಿ ನಾಗರಾಜ್

ಎಲ್ಲೂ ಅತಿರೇಕ ಎನ್ನಿಸದ ಅಭಿನಯ ಅಂಗ ಚೇಷ್ಟೆ ಇಲ್ಲದ ಪಾತ್ರಗಳಲ್ಲಿ ಘನತೆಯಿಂದ ಅಭಿನಯಿಸಿ character actor ಎನ್ನುವ ಪದಗಳಿಗೆ ಒಂದು ಎತ್ತರ ಕಲ್ಪಿಸಿದ ದೊಡ್ಡವರು. ನಿಜವಾಗಿಯೂ character ಇದ್ದ actor ಇವರು. ಹೋಗಿ ಬನ್ನಿ ಸಾರ್

‍ಲೇಖಕರು Admin

December 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: