ಗಂಗಾದೇವಿ ಚಕ್ರಸಾಲಿ
**
ಆ ದೇಹದಿ ವಿಕೃತಿ ಮೆರೆದು
ಹಿಂಸಿಸಿ ಸುಖಿಸುವ ಅವರಿಗೆ
ಅವಳೆಂದರೆ ಕಾಮದ ಗೊಂಬೆಯಷ್ಟೇ..
ಅವಳ ಚೀರಾಟ, ನೋವಿನ ಒದ್ದಾಟ
ಕಿವಿಗಳು, ಮನಗಳನ್ನು ತಟ್ಟುವುದಿಲ್ಲ
ಅವಳೆಂದರೆ ಕೇವಲ ಭೋಗದ ವಸ್ತುವಷ್ಟೇ..
ಅವಳು ವೈದ್ಯಳು, ಗೃಹಿಣಿಯೇ ಇರಲಿ
ಅಂತಸ್ತು ಸ್ಥಾನಮಾನ ಲೆಕ್ಕಕ್ಕಿಲ್ಲ
ಅವಳೆಂದರೆ ಕೇವಲ ಸ್ತ್ರೀ ಅಷ್ಟೇ..
ಅವರೊಳಗಿನ ಅವಳು
ತಾಯಿ, ಸಹೋದರಿ ಆಗಲಿಲ್ಲವೇಕೆ? ಕಾರಣ
ಅವರು ಮನುಜ ರೂಪದ ರಕ್ಕಸರಷ್ಟೇ..
ಸ್ತ್ರೀ ಧರಿಸುವ ಬಟ್ಟೆ, ರಾತ್ರಿ ಒಂಟಿ ಓಡಾಟ
ಎಲ್ಲವ ಟೀಕಿಸಿ, ಅವಳನ್ನೇ ದೂಷಿಸುವವರಿದ್ದಾರೆ
ಕಾರಣ ಶತಮಾನಗಳ ಅಹಂ ಅವರನ್ನು ಬಿಡಲೊಲ್ಲದಷ್ಟೇ..
0 ಪ್ರತಿಕ್ರಿಯೆಗಳು