ವಿಶಾಲ್ ಮ್ಯಾಸರ್
**
ಚಲಿಸುತ್ತದೆ ಬಸ್ಸು
ಒಳಗಿರುವ ಎಲ್ಲಾ ಹೊಟ್ಟೆಗಳನ್ನು ಹೊತ್ತು
ತಿರುಗುತ್ತದೆ ಭೂಮಿ
ಹೊಟ್ಟೆಯಲ್ಲಿರುವ
ಎಲ್ಲಾ ಮೂಟೆಗಳನ್ನು ಹೊತ್ತು
ಅಯ್ಯೊ ಸ್ವಾಮಿ ಬಸ್ಸಿನಲ್ಲಿದ್ದವರನ್ನು ಮನುಷ್ಯರಂತೆ ಕಾಣುತ್ತೀರಿ
ಭೂಮಿಯ ಹೊಟ್ಟೆಯಲ್ಲಿರುವರನ್ನು ಮೂಟೆ ಎನ್ನುತ್ತೀರಿ ಇದು ಹೇಗೆ..?
ನಡೆದಾಡುವ ಹೆಣಗಳು ಇಲ್ಲಿ ಜೀವಂತ ತಮ್ಮ
ಒಳಗೊಳಗೆ ನೀನು ಅತ್ತರು ನಕ್ಕರು ಸತ್ತಂತೆ ತಿಳಿಯುತ್ತಾರೆ
***
ಹಸಿವು ಎಲ್ಲರನ್ನೂ ಚಲಿಸುವಂತೆ ಮಾಡುತ್ತದೆ ಅಲ್ಲವೇ
ನೀವೆನ್ನಬಹುದು ಕಷ್ಟ ಮನುಷ್ಯನಿಗೆ ಬಾರದೆ ಮರಕ್ಕೆ ಬಂದೀತೆ…?
ಕಷ್ಟ ಬಂದಾಗ ಓಡಿಹೋಗಲು
ಈ ಹುಲುಮಾನವನಿಗೆ ಕಾಲು ಕೊಟ್ಟಿದ್ದಾನೆ ದೇವರು
ಪಾಪ ಮರಗಳಿಗೆ
ಎಷ್ಟಿದ್ದರೂ ನಿಲ್ಲಬೇಕು ಅನುಭವಿಸಬೇಕು
ಅನ್ನುವುದು ಪ್ರೊಫೆಸರ್ ಒಬ್ಬರ ಅಂಬೋಣ
ಈ ಬಸ್ಸು, ಭೂಮಿ ಯಾಕೆ ಜೋಡಿಸಿದಿರಿ ಇಲ್ಲಿ..?
ಭೂಮಿಯು ಒಂದು ಬಸ್ಸು
ನೀನಿರುವ ಜಾಗವೇ ನಿನ್ನ ಭೂಮಿ
ಅಲ್ಲವೇ
ಸಾಕು ಸಾಕು ಬಾ ಕುಂಡಿ ನೋವು ಬಂತು
ಚಲಿಸುವುದು ಅನಿವಾರ್ಯ..?
0 ಪ್ರತಿಕ್ರಿಯೆಗಳು