
ವಿಶಾಲ್ ಮ್ಯಾಸರ್
—–
ಪುಟ್ಟ ಪುಟ್ಟ ಪಾದಗಳು
ದೊಡ್ಡ ಚಪ್ಪಲಿಯನ್ನು
ಮೆಟ್ಟಿಕೆಂಡು ನಡೆಯುವುದನ್ನು
ಶೋಕಿ ಎನ್ನಲಾರಿರಿ
ಅದು ಹಿರಿದನ್ನು ಅಪ್ಪುವ ಹಾದಿ
ನೆಟ್ಟಗಿದ್ದ ಅಂಗಿ ಗುಂಡಿಗಳನ್ನು
ಸೊಟ್ಟ ಪಟ್ಟ ಹಾಕಿಕೊಂಡು
ದೊಡ್ಡ ಅಂಗಿಯನ್ನು ಸಣ್ಣದು ಮಾಡಿಕೊಂಡು ನಡೆದಾಡುವುದನ್ನು
ಹುಚ್ಚುತನವಲ್ಲದೆ ಮತ್ತೇನು ಅನ್ನಬಹುದು
ಅದು ಹಾದಿತೋರೆದ ಗುಂಗು
ತನಗೆ ತಾನೇ ಪರಕೀಯನೆನ್ನಿಸಿದಾಗ
ಮಣ ಮಣ ಕಾರಣ ನೀಡಬಹುದು
ಒಳಗೂ ಹೊರಗೂ
ಬಿನ್ನವೆನ್ನಿಸಿದಾಗ
ಅದೆಷ್ಟು ಸರ್ಕಸ್ಸು ಅದೆಷ್ಟು ಕಾಲಹರಣದ ಮಾತುಗಳು
ಬದುಕು ಫೋಕಸ್ ಕಳೆದುಕೊಂಡ ಕ್ಯಾಮರಾದಂತೆ
ನರಳುವ ಮುನ್ನ ಬೆರಗಿಗೆ ಒಳಪಡಬೇಕಷ್ಟೆ
ಒಂದು ಸವಾಲು ಬಯಲನ್ನು ಕ್ಲಿಕ್ಕಿಸಿ ಬಲ್ಲಿರಾ…?
ಕ್ಲಿಕ್ಕಿಸಿದರೂ ನೀವು ಅದಕ್ಕೆ ಫ್ರೇಂ ಹಾಕಿ ನೇತಾಕಲಾರಿರಿ
0 ಪ್ರತಿಕ್ರಿಯೆಗಳು