ವಿಜಯಾ ದಬ್ಬೆ ನೆನಪಿಗೆ..

ವಿದ್ಯಾರ್ಥಿ,ಯುವಜನರಿಗೆ
ಡಾ.ವಿಜಯಾ ದಬ್ಬೆ  ಸ್ಮರಣಾರ್ಥ
ರಾಜ್ಯಮಟ್ಟದ  ಕವನ, ಲಲಿತ ಪ್ರಬಂಧ  ಸ್ಪರ್ಧೆ

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುವ ಉದ್ದೇಶದಿಂದ
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ 20ರಿಂದ 35 ವಯೋಮಾನದ ವಿದ್ಯಾರ್ಥಿ ಮತ್ತು ಯುವಜನರಿಗೆ ರಾಜ್ಯಮಟ್ಟದ ಕವನ ಮತ್ತು ಲಲಿತ ಪ್ರಬಂಧ ಸ್ಪರ್ಧೆ-2024 ಯನ್ನು ಆಯೋಜಿಸಿದೆ.

ಸ್ಪರ್ಧೆಯ ನಿಯಮಗಳು: ಕವನ ಸ್ಪರ್ಧೆ ಗೆ ಎರಡು ಕವನ. ಲಲಿತ ಪ್ರಬಂಧ ಸ್ಪರ್ಧೆ ಗೆ ಒಂದು ಪ್ರಬಂಧ. ಈ ಮೊದಲು ಎಲ್ಲಿಯೂ ಪ್ರಸಾರ/ ಪ್ರಕಟ ಆಗಿರಬಾರದು. ಪ್ರಬಂಧಕ್ಕೆ ಗರಿಷ್ಠ ಪದಮಿತಿ 2000 ಪದಗಳು. ವಯಸ್ಸಿನ ಖಚಿತತೆಗೆ ಎಸ್ಎಸ್ ಎಲ್ ಸಿ ಅಂಕಪಟ್ಟಿ ಅಥವಾ ಆಧಾರ್ ಕಾರ್ಡ್ ಲಗತ್ತಿಸಬೇಕು.

ಕವನ, ಪ್ರಬಂಧಗಳನ್ನು ಹಾಳೆಯ ಒಂದು ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದು ಅಥವಾ ಟೈಪ್ ಮಾಡಿ, ಪ್ರತ್ಯೇಕ ಹಾಳೆಯಲ್ಲಿ ಹೆಸರು ,ವಿಳಾಸ, ಫೋನ್ ಸಂಖ್ಯೆ,ಇ-ಮೇಲ್ ವಿವರ  ನಮೂದಿಸಿ 29.02.2024  ರ ಒಳಗೆ ಕಳಿಸಬೇಕು.

ವಿಳಾಸ: ಶ್ರೀಮತಿ ವಿಜಯಾ ರಾವ್, ಮನೆ ನಂಬರ್ 861, 14ನೇ ಮೇನ್, ವಿಜಯನಗರ ಮೊದಲನೆ ಹಂತ, ಮೈಸೂರು. ಪಿನ್: 570017.

ಎರಡೂ ಸ್ಪರ್ಧೆಗಳಿಗೆ ಒಂದೇ ಮೊತ್ತದ (ಪ್ರಥಮ ರೂ. 5 ಸಾವಿರ , ದ್ವಿತೀಯ  ರೂ. 3 ಸಾವಿರ, ತೃತೀಯ ರೂ. 2 ಸಾವಿರ ) ಪ್ರತ್ಯೇಕ ಬಹುಮಾನಗಳಿರುತ್ತವೆ. ವಿಜೇತರು ಮತ್ತು ತೀರ್ಪುಗಾರರ  ಮೆಚ್ಚುಗೆ ಪಡೆಯುವ ತಲಾ ಹತ್ತು ಸ್ಪರ್ಧಿಗಳಿಗೆ  ಮೇ ತಿಂಗಳ ಕೊನೆಯ ವಾರದಲ್ಲಿ ಒಂದು ದಿನದ ಸಾಹಿತ್ಯ ಕಮ್ಮಟ ಆಯೋಜಿಸಲಾಗುವುದು. 

‍ಲೇಖಕರು avadhi

January 18, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: