ಜಗತ್ತಿಗೆ ಎಂದಿಗಿಂತಲೂ ಈಗ ಬುದ್ದನ ಅಗತ್ಯವಿದೆಯೇನೋ..?
ಕತ್ತಲ ದಿನಗಳಲ್ಲಿ ‘ಕೈ ಹಿಡಿದು ನಡೆಸೆನ್ನನು’ ಎಂದು ಬುದ್ದನನ್ನಲ್ಲದೆ ಇನ್ನಾರನ್ನು ಕೇಳೋಣ
ಲೋಕ ಮಲಗಿದಂದು ನೀ ನಟ್ಟ ನಡುರಾತ್ರಿ ಎಚ್ಚರಾದೆ ಅವಿಶ್ರಾಂತೆ ಆದೆ ಪುನರ್ ಯಾತ್ರಿ .. ಎನ್ನುವ ಸಾಲುಗಳು ಇನ್ನೂ ಮನದೊಳಗೆ ಕುಣಿಯುತ್ತಲೇ ಇವೆ
ಮತ್ತೆ ಬುದ್ದ ಪೂರ್ಣಿಮೆ ಬಂದಿದೆ
ಬುದ್ದ ಕರುಣೆಗೆ ಹಂಬಲಿಸುವ ಮನಕ್ಕೆ ಪ್ರತೀ ದಿನವೂ ಬುದ್ದ ದಿನವೇ
–
ಕಾರವಾರದ ಕಡಲ ತೀರದಲ್ಲಿ ಕಲಾವಿದರಾದ ಯಲ್ಲಾಪುರದ ಕುಮಾರಮಹೇಶ್ ಹಾಗೂ ಬೇಲೇಕೆರಿಯ ನಾಗರಾಜ ಬಾನವಾಳಿಕರ
ಪ್ರತಿಯೊಬ್ಬರಿಗೂ ಬುದ್ದನನ್ನು ನೀಡಿದರು
ಕಡಲ ತೀರದಲ್ಲಿ ಮರಳ ಶಿಲ್ಪ ‘ಬಾರಾ ನನ್ನೆಡೆಗೆ..’ ಎಂದು ಕರೆಯುತ್ತಿದೆ..
S.P.Vijayalakshmi……
ಅಬ್ಬಾ , ಈ ಕಲಾವಿದನಿಗೆ ನೂರೊಂದು ನಮನ
ಘಾಡವಾದ
ನಿದ್ರೆಯಲಿ
ತಲ್ಲಿಣವಾದ
ಜನರ ಜಂಜಾಟ ತೊರೆದು
ಹೋದನವ ಬುದ್ದ,
ನಿನ್ನ ಏಕಾಗ್ರತೆಯಲಿ
ಅರಿತವನಾದ
ಮನದ ಮಸನವ ತೊಳೆದು
ಜ್ಞಾನದುಂಬುವ ಆಯುಧ!
ಬುದ್ಧ! ಬುದ್ಧ! ನಾವೆಲ್ಲ ಮಲಗಿದಾಗ ಅವನೊಬ್ಬನೆದ್ದ! ಗೆದ್ದ! ದುಃಖವ! ಇತ್ತ ಸಂತೋಷದ ಮಾರ್ಗವ! ಅದೆ ಮದ್ಯಮ ಮಾರ್ಗ. ಎಲ್ಲ ಅತಿರೇಕಗಳಿಂದ ವಿಸರ್ಜಿತಗೊಂಡ ಎಲ್ಲ ದೃಷ್ಟಿವಾದಗಳಿಂದ ವಿಸರ್ಜಿತ ಮಧ್ಯಮ ಮಾರ್ಗ! ಅಯ್ಯೋ ಸತ್ಯವನ್ನು ಸಾರಿ ಸಾರಿ ಹೇಳುತ್ತಿದ್ದಾನೆ ಬುದ್ಧ! ಕೇಳುವವರು ಯಾರೂ ಇಲ್ಲವಲ್ಲೋ? ಎಲ್ಲರೂ ದೃಷ್ಟಿವಾದಗಳಲ್ಲಿಯೇ ನಾಶವಾಗುತ್ತಿರುವರಲ್ಲ? ಕಲಾವಿದನ ಕೌಶಲ್ಯ ಇಲ್ಲಿ ತುಂಬ ಚೆನ್ನಾಗಿ ಮೂಡಿಬಂದಿದೆ. ಕಲಾವಿದರಿಗೆ ಧನ್ಯವಾದಗಳು
Mannina Maga