ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಕುವೆಂಪು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುತ್ತಾರೆ.
ಅದೂ ತಮ್ಮ ಮನೆ ಹಾಗೂ ಕವಿಶೈಲದ ಸಮೇತ.
ನಿಜ..
ಆಗಸ್ಟ್ ೧೫, ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ನಡೆಸುವ ಫಲ ಪುಷ್ಪ ಪ್ರದರ್ಶನದ ಈ ಬಾರಿಯ ಥೀಮ್ -ಕುಪ್ಪಳ್ಳಿ. ರಾಜ್ಯ ತೋಟಗಾರಿಕಾ ಇಲಾಖೆಯಾ ಹೆಮ್ಮೆಯ ಕನಸು ಇದು. ಹಾಗಾಗಿ ಈಗಾಗಲೇ ಲಾಲ್ ಬಾಗ್ ನಲ್ಲಿ ಕುವೆಂಪು, ಕುಪ್ಪಳ್ಳಿಯ ಕವಿ ಮನೆ ಹಾಗೂ ಕವಿ ಶೈಲವನ್ನು ರೂಪಿಸುವ ಹಿನ್ನೆಲೆಯಲ್ಲಿ ಅನೇಕ ಸಭೆಗಳನ್ನು ನಡೆಸಲಾಗಿದೆ.
ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಸಕ್ರಿಯವಾಗಿ ಈ ಯೋಜನೆಯ ಜೊತೆಗಿದೆ.
ಮಿಸ್ ಮಾಡ್ಬೇಡಿ ಈ ಬಾರಿಯ ಫಲ ಪುಷ್ಪ ಪ್ರದರ್ಶನವನ್ನು
0 ಪ್ರತಿಕ್ರಿಯೆಗಳು