ರಾಜಾರಾಂ ತಲ್ಲೂರು on Budget: ಕಂಪಣಿ ಸರಕಾರ ಮತ್ತು ರೈತಪರ ಬಜೆ(ಪೆ)ಟ್ಟು!

ರೈತನನ್ನೂ, ರೈತನ ನೆಲವನ್ನೂ, ಕಡೆಗೆ ರೈತ ಉಣ್ಣುವ ಅನ್ನವನ್ನೂ ಎಲ್ಲ ತಟ್ಟೆಯಲ್ಲಿಟ್ಟು ಸಿಂಗಾರ ಮಾಡಿ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರಗಳ ಸಹಿತ ಕಾರ್ಪೋರೇಟ್ ಕಂಪನಿಗಳ ಮಡಿಲು ತುಂಬಿಸುವ ಬಜೆಟ್ ಒಂದನ್ನು ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.

ಆ ಮಟ್ಟಿಗೆ ಕೇಂದ್ರ ಬಜೆಟ್ಟು ಈಗೀಗ ಯಾವುದೇ ಪಕ್ಷ ಬಂದರೂ ವಾರ್ಷಿಕ ಐಟಂ ಸಾಂಗ್ ಆಗಿಬಿಟ್ಟಿದೆ. ಎಂಥದ್ದೇ ಕಳಪೆ ಸಿನಿಮಾ ಇದ್ದರೂ ಅದನ್ನು ಎಬ್ಬಿಸಿ ನಿಲ್ಲಿಸಬಲ್ಲ ಐಟಂ ನಂಬರ್ ಇದ್ದರೆ ಸಾಕು, ಸಿನಿಮಾ ಸೂಪರ್ ಹಿಟ್! ಈ ನಿಟ್ಟಿನಲ್ಲಿ ಜೇಟ್ಲಿ ಅವರಂತೂ ನುರಿತ ನಿರ್ದೇಶಕರು. ಎಲ್ಲಿ ಎಷ್ಟು ಬಿಚ್ಚಿಟ್ಟರೆ, ಎಷ್ಟು ಮುಚ್ಚಿಟ್ಟರೆ ಐಟಂ ನಂಬರ್ “ಹಾಟ್” ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತು.

ಈ ಅರಿವಿನ ಜೊತೆ, ಕ್ರಷಿಗೆ ಸಂಬಂಧಿಸಿ ಅರುಣ್ ಜೇಟ್ಲಿಯವರು ಹೇಳಿದ್ದೇನು ಎಂಬುದನ್ನು ಗಮನಿಸೋಣ. ಅವರು ತಮ್ಮ ಭಾಷಣದ ಆರಂಭದಲ್ಲೇ ಈ ಬಜೆಟ್ಟು ಕ್ರಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಬಜೆಟ್ ಆಗಲಿದೆ ಎಂದು ಹೇಳುತ್ತಾರೆ.

ಈಗ ಮೊದಲ ಪ್ರಶ್ನೆ ಈ ದೇಶದ ಕ್ರಷಿಕರು ಯಾರು? ಗ್ರಾಮೀಣರು ಯಾರು?

ಈ ಪ್ರಶ್ನೆಗೆ ಉತ್ತರ ಹೇಳುವ ಮೊದಲು ಒಂದು ಉಪಕಥೆ ಹೇಳಬೇಕಾಗಿದೆ. ಇದು ನಮ್ಮನ್ನು ಪರೋಕ್ಷವಾಗಿ ಈವತ್ತು ಆಳುತ್ತಿರುವ ಕಾರ್ಪೋರೇಟ್ ಸಂಸ್ಥಾನಗಳ ಕೈಗೊಂಬೆ ಆಗಿರುವ ಐಎಂಎಫ್ ನಂತಹಾ ಸಾಲ ಕೊಡುವ ಧಣಿಗಳ ಮರ್ಜಿಯ ಕಥೆ. ಹಾಗಾಗಿ ದೇಶದಲ್ಲಿ ಯಾವುದೇ ಸರಕಾರ ಬಂದರೂ ಇದೆಲ್ಲ ಇದೇ ದಾರಿಯಲ್ಲಿ ನಡೆಯುತ್ತದೆ. ಹಾಗಾಗಿ ಸರ್ಕಾರ ಕಾಂಗ್ರೆಸ್ಸಿದ್ದೋ ಬಿಜೆಪಿಯದ್ದೋ ಎಂಬುದು ಇಲ್ಲಿ ಮಹತ್ವದ ಸಂಗತಿಯೇ ಅಲ್ಲ!

ಕ್ರಷಿ ರಂಗದಲ್ಲಿ ಸುಧಾರಣೆ – ಬಡತನ ನಿವಾರಣೆಗಳನ್ನು ಮಾಡಲು ನೇಮಕಗೊಂಡ ವೈ. ಕೆ. ಅಲಗ್ ನೇತ್ರತ್ವದ ತಜ್ನರ ಸಮಿತಿಯು ಮಾಡಿದ ಶಿಫಾರಸುಗಳಿಗೆ ಅನುಗುಣವಾಗಿ 2002-03 ರಲ್ಲಿದೇಶದ ಕಂಪನಿ ಕಾಯಿದೆ 1956 ಕ್ಕೆ ತಿದ್ದುಪಡಿ ತಂದು, ಕ್ರಷಿ ಉತ್ಪಾದಕ ಕಂಪನಿಗಳನ್ನು ರಚಿಸಲು ಮತ್ತು ಅವನ್ನು ಕಂಪನಿ ಕಾಯಿದೆಯಡಿ ನೋಂದಾಯಿಸಲು ಅವಕಾಶ ನೀಡಲಾಗಿತ್ತು. ಇದು ಒಂಥರಾ ಕಾಪರೇಟಿವ್ ಮತ್ತು ಕಂಪನಿಗಳ ನಡುವಿನ ಹೈಬ್ರಿಡ್ ತಳಿ. (ವಿವರಗಳಿಗೆ ಬಾಕ್ಸ್ ನೋಡಿ)

ಇಲ್ಲಿಗೆ ಉಪಕಥೆ ಮುಗಿಯಿತು. ಈ ಉಪಕಥೆ ತಲೆಯಲ್ಲಿಟ್ಟುಕೊಂಡು, ಜೊತೆಗೆ ದೇಶದಲ್ಲಿ ಕಾರ್ಪೋರೇಟ್ ಫಾರ್ಮಿಂಗಿಗೆ ಅಗತ್ಯವಿರುವ ವಾತಾವರಣ ನಿರ್ಮಾಣ ಮಾಡಲು ಸರಕಾರ ಶ್ರಮಿಸುತ್ತಿದೆ ಎಂಬುದನ್ನೂ, ಎಪಿಎಂಸಿ ಕಾಯಿದೆಯನ್ನು ಬುಡಸಮೇತ ಅಲ್ಲಾಡಿಸಲು ಎಲ್ಲ ಸಿದ್ಧತೆಗಳೂ ನಡೆದಿದೆ ಎಂಬುದನ್ನೂ ತಲೆಯೊಳಗೆ ಇಟ್ಟುಕೊಂಡು, ಆ ಬಳಿಕ ಜೇಟ್ಲಿಯವರು ಈ ಬಾರಿ ಬಜೆಟ್ಟಿನಲ್ಲಿ ಕ್ರಷಿಯ ಬಗ್ಗೆ ಏನು ಹೇಳಿದ್ದಾರೆ ಎಂಬುದರತ್ತ ಒಂದೊಂದಾಗಿ ಗಮನ ಹರಿಸೋಣ:

* ಉವಾಚ: 2022 ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗುವಾಗ ರೈತರ ಆದಾಯ ದುಪ್ಪಟ್ಟಾಗಬೇಕು ಎಂಬ ಉದ್ದೇಶ ಸರಕಾರದ್ದು ಎಂದು ಜೇಟ್ಲಿ ಹೇಳಿದ್ದಾರೆ. ಜೇಟ್ಲಿಯವರ ಮಾತುಗಳಲ್ಲೇ ಹೇಳಬೇಕಿದ್ದರೆ: “We consider agriculture as an enterprise and want to help farmers produce more from the same land parcel at lesser cost and simultaneously realize higher prices for their produce. Our emphasis is also on generating productive and gainful on-farm and non-farm employment for the farmers and landless families.”

ತಾತ್ಪರ್ಯ: ಅಂದರೆ, ಸರ್ಕಾರ ಕ್ರಷಿಯನ್ನು ಒಂದು ವ್ಯವಹಾರವಾಗಿ ಪರಿಗಣಿಸಬಯಸಿದ್ದು, ರೈತರಿಗೆ ಹಾಗೂ ಭೂರಹಿತರಿಗೆ ಕ್ರಷಿ ಭೂಮಿಯಲ್ಲಿ ಮತ್ತು ಹೊರಗೆ “ಉದ್ಯೋಗ” ನೀಡಬಯಸಿದೆ! ಇದನ್ನು, ರೈತ ಸ್ವಂತ ಭೂಮಿಯಲ್ಲಿ ತನ್ನ ಹೊಟ್ಟೆಗಾಗುವಷ್ಟು ಬೆಳೆದು, ಉಳಿದದ್ದನ್ನು ಮಾರುವ ಭಾರತೀಯ ಸಾಂಪ್ರದಾಯಿಕ ಕ್ರಷಿಗಿಂತ ಬೇರೆಯೇ ಹಾದಿ ಎಂದು ಪರಿಗಣಿಸಬೇಕಾಗುತ್ತದೆ.

ಕಾರ್ಪೋರೇಟ್ ಫಾರ್ಮಿಂಗ್ ಸರ್ಕಾರದ ಆದ್ಯತೆಯ ವಿಚಾರ ಆದ ಬಳಿಕ, ಕಾರ್ಪೋರೇಟ್ ಗಳ ಕ್ರಪಾಪೋಷಿತ ಮೇಲೆ ಉಪಕಥೆಯಲ್ಲಿ ಹೇಳಲಾದ “ ರೈತ ಉತ್ಪಾದಕ ಕಂಪನಿಗಳು” ( Farmer Producer Companies- FPC) ಕ್ರಷಿ ಭೂಮಿಗಳನ್ನು ರೈತರಿಂದ ಗುತ್ತಿಗೆಗೆ ಪಡೆದು, ಅಲ್ಲಿ ಕ್ರಷಿ ಮಾಡಿ, ಲಾಭದ ಅಂಶವನ್ನು ರೈತರಿಗೆ ಕೊಡುತ್ತವೆ ಮತ್ತು ರೈತ ಆ FPCಯ ಸಿಬ್ಬಂದಿ ಆಗಿ ಸಂಬಳಕ್ಕೆ ಕೆಲಸ ಮಾಡುವುದು ಅನಿವಾರ್ಯ ಆಗುತ್ತದೆ. (ಕಾರ್ಪೋರೇಟ್ ಫಾರ್ಮಿಂಗ್ ಬಗ್ಗೆ ಈ ಹಿಂದೆ ನಾನು ಬರೆದಿರುವ ಅಂಕಣಗಳನ್ನು ಗಮನಿಸಿ.)

* ಉವಾಚ: ರೈತರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿಸುವ ಮಾತನಾಡಿದ್ದಾರೆ. ಅಲ್ಲದೇ ಅದಕ್ಕಾಗಿ ನೀತಿ ಆಯೋಗಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅವರ ಮಾತುಗಳಲ್ಲಿ “ For this, it is essential that if price of the agriculture produce market is less than MSP, then in that case Government should purchase either at MSP or work in a manner to provide MSP for the farmers through some other mechanism. Niti Ayog, in consultation with Central and State Governments, will put in place a fool-proof mechanism so that farmers will get adequate price for their produce. For better price realization, farmers need to make decisions based on prices likely to be available after its harvest. Government will create an institutional mechanism, with participation of all concerned Ministries, to develop appropriate policies and practices for price and demand forecast, use of futures and options market, expansion of warehouse depository system and to take decisions about specific exports and imports related measures.”

ತಾತ್ಪರ್ಯ: ನಿಜಕ್ಕೆಂದರೆ,ಈವತ್ತಿನ ತನಕ ಸರ್ಕಾರ ಬೆಂಬಲ ಬೆಲೆಯನ್ನು ಎಲ್ಲೋ ಆಕಾಶದಲ್ಲಿ ಕೂತು ನಿಗದಿ ಮಾಡಿ, ಅದು ಪ್ರಕಟವಾಗುವ ಹೊತ್ತಿಗೆ ರೈತ ತನ್ನ ಬೆಳೆಯನ್ನು ಅಡ್ಡಾದುಡ್ಡಿಗೆ ಮಾರಿ ಆಗಿರುತ್ತಿತ್ತು ಇಲ್ಲವೇ ನಷ್ಟ ಮಾಡಿಕೊಂಡು ನೇಣುಹಾಕಿಕೊಂಡಾಗಿರುತ್ತಿತ್ತು. ಆದರೆ, ಈಗ ಕಾರ್ಪೋರೇಟ್ ಗಳಿಗೆ ಹಾಗೆ ಮಾಡುವಂತಿಲ್ಲ. ಎಲ್ಲ ವ್ಯವಸ್ಥೆಗಳನ್ನೂ ತಟ್ತೆಯಲ್ಲಿಟ್ಟು ಕೊಡಲು ಇಡಿಯ ಸರಕಾರವೇ ಕಟಿಬದ್ಧವಾಗಿ ನಿಂತಿದೆ!

* ಉವಾಚ: ಎಪಿ ಎಂಸಿಗಳ ಸುಧಾರಣೆ ಮತ್ತು ಇಲೆಕ್ಟ್ರಾನಿಕ್ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ದೊಡ್ಡಗಾತ್ರದ ಹಣವನ್ನು ಬಜೆಟ್ ನಿಗದಿ ಮಾಡಿದೆ. ಜೇಟ್ಲಿ ಹೀಗೆಂದಿದ್ದಾರೆ “More than 86% of our farmers are small and marginal. They are not always in a position to directly transact at APMCs and other wholesale markets. We will develop and upgrade existing 22,000 rural haats into Gramin Agricultural Markets (GrAMs). In these GrAMs, physical infrastructure will be strengthened using MGNREGA and other Government Schemes. These GrAMs, electronically linked to e-NAM and exempted from regulations of APMCs, will provide farmers facility to make direct sale to consumers and bulk purchasers. An Agri-Market Infrastructure Fund with a corpus of Rs2,000 crore will be set up for developing and upgrading agricultural marketing infrastructure in the 22000 Grameen Agricultural Markets (GrAMs) and 585 APMCs.

ತಾತ್ಪರ್ಯ: ಒಂದೆಡೆ ಕಾರ್ಪೋರೇಟ್ ಫಾರ್ಮಿಂಗಿಗೆ ಮಾರುಕಟ್ಟೆಯಲ್ಲಿ ಅಡ್ಡಿ ಆಗುವ ಎಪಿಎಂಸಿಗಳನ್ನೇ ತೆಗೆದುಹಾಕುವ ಮಾತನಾಡುವ, ಕಾನೂನು ಸಿದ್ಧಪಡಿಸುತ್ತಿರುವ ಸರಕಾರ ಇನ್ನೊಂದೆಡೆ ಎಪಿಎಂಸಿ ಹೆಸರಲ್ಲಿ ಗ್ರಾಮೀಣ ಮಾರುಕಟ್ಟೆಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸುತ್ತಿದೆ ಎಂದರೆ, ಅದರ ಹಿನ್ನೆಲೆಯಲ್ಲಿ ಬೇರೇನೋ ಕುದಿಯುತ್ತಿದೆ ಎಂದೇ ಅರ್ಥ.

* ಉವಾಚ: ರೈತನ ಗದ್ದೆಯಿಂದ, ಮನೆಯಿಂದ ಮಾರುಕಟ್ಟೆಗೆ ದಾರಿಗಲನ್ನು ಸುಗಮಗೊಳಿಸಲು ಸರಕಾರ ಉದ್ದೇಶಿಸಿದೆ. ಅದನ್ನು ಜೇಟ್ಲಿ ಹೀಗೆ ವಿವರಿಸಿದ್ದಾರೆ: “ It is now time to strengthen and widen its ambit further to include major link routes which connect habitations to agricultural and rural markets (GrAMs), higher secondary schools and hospitals. Prime Minister Gram Sadak Yojana Phase III will include such linkages.”

ತಾತ್ಪರ್ಯ: ಇಷ್ಟೇ. ಕಾರ್ಪೋರೇಟ್ ಗಳಿಗೆ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿಕೊಡುವುದು.

* ಉವಾಚ: ಒಂದು ಕಡೆ ಒಂದೇ ರೀತಿಯ ಬೆಳೆ ಬೆಳೆಯುವ ಮೂಲಕ ಉತ್ಪಾದನೆ ಮಾರುಕಟ್ಟೆಗೆ ಸಹಾಯ ಮಾಡಿಕೊಡಲು ಸರಕಾರ ಉದ್ದೇಶಿಸಿದೆ. ಅದನ್ನು ಜೇಟ್ಲಿ ಭಾಷಣದಲ್ಲಿ ಹೀಗೆ ವಿವರಿಸಿದ್ದಾರೆ: “ Cultivation of horticulture crops in clusters bring advantages of scales of operations and can spur establishment of entire chain from production to marketing, besides giving recognition to the districts for specific crops. The Ministry of Agriculture & Farmers’ Welfare will reorient its ongoing Schemes and promote cluster based development of agri-commodities and regions in partnership with the Ministries of Food Processing, Commerce and other allied Ministries.”

ತಾತ್ಪರ್ಯ: ಪ್ರತೀ ಗ್ರಾಮದಲ್ಲಿ ವೈವಿದ್ಯಮಯ ಬೆಳೆಗಳನ್ನು ಬೆಳೆಯುತ್ತಿರುವ ರೈತನಿಗೆ ಇನ್ನೇನೂ ಕೆಲಸ ಇಲ್ಲ. ಕಾರ್ಪೋರೇಟ್ ಹಿಡಿತಕ್ಕೆ ಬಂದ ಮೇಲೆ ಒಂದು ಜಿಲ್ಲೆಯಲ್ಲಿ ಬರೀ ಅಕ್ಕಿ, ಇನ್ನೊಂದು ಜಿಲ್ಲೆಯಲ್ಲಿ ಬರೀ ಗೋಧಿ, ಮಗದೊಂದರಲ್ಲಿ ಬರೀ ಬಾಳೆ… ಹೀಗೆ ಕಾರ್ಪೋರೇಟ್ ಗಾತ್ರಕ್ಕನುಗುಣವಾಗಿ ಬೆಳೆಯ ವೈವಿದ್ಯತೆ ಮಾಯ ಆಗಲಿದೆ.

* ಉವಾಚ: ಬೆಲೆದ ಬೆಳೆಯನ್ನು ಮಾರಲು , ಸಂಸ್ಕರಿಸಲು ಸರಕಾರ “ ರೈತರ” ಸಹಾಯಕ್ಕೆ ಮುಂದಾಗಿರುವುದನ್ನು ಜೇಟ್ಲಿ ಹೀಗೆ ಹೇಳುತ್ತಾರೆ: “ My Government proposes to launch an ‘‘Operation Greens’’ on the lines of ‘‘Operation Flood’’. ‘‘Operation Greens’’ shall promote Farmer Producers Organizations (FPOs), agri-logistics, processing facilities and professional management. I propose to allocate a sum of Rs500 crore for this purpose.”

ತಾತ್ಪರ್ಯ: ಇಲ್ಲಿ ಜೇಟ್ಲಿಯವರು ಮೊದಲ ಬಾರಿಗೆ ಅಧಿಕ್ರತವಾಗಿ FPOಹೆಸರನ್ನು ಬಳಸಿದ್ದಾರೆ. ಮೇಲಿನ FPO ಕುರಿತಾದ ಉಪಕಥೆಯನ್ನು ಓದಿಕೊಂಡು, ಆ ಬಳಿಕ ಜೇಟ್ಲಿ ಭಾಷಣದ ಭಾಗವನ್ನು ಓದಿದರೆ, ಅದು ಸೆಲ್ಫ್ ಎಕ್ಸ್ ಪ್ಲನೇಟರಿ!

* ಉವಾಚ: ದೇಶದ ಕ್ರಷಿ ರಫ್ತು 2016-17ರಲ್ಲಿ US$ 33.87 ಬಿಲಿಯನ್ ಇದ್ದದ್ದನ್ನು US$ 100 ಬಿಲಿಯನ್ ಗೆ ಏರಿಸುವ ಮಾತನಾಡಿದ್ದಾರೆ. “ India’s agri-exports potential is as high as US $ 100 billion against current exports of US $ 30 billion. To realize this potential, export of agri-commodities will be liberalized. I also propose to set up state-of-the-art testing facilities in all the forty two Mega Food Parks.”

ತಾತ್ಪರ್ಯ: ಕ್ರಷಿ ರಫ್ತು ಲಿಬರಲ್ ಆಗಲಿದೆ ಎಂಬುದನ್ನು ಕಾರ್ಪೋರೇಟ್ ಫಾರ್ಮಿಂಗ್ ನ ಹಿನ್ನೆಲೆಯಲ್ಲಿ ಓದಿಕೊಳ್ಳಿ. ನಿಮಗೆ ಹೊಸದೇ ಅರ್ಥ  ಹೊಳೆಯಲಿದೆ!

* ಉವಾಚ: ಸರ್ಕಾರ FPOಗಳಿಗೆ ಮುಂದಿನ ಐದು ವರ್ಷಗಳ ಕಾಲ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದ್ದು, ಅದನ್ನು ಜೇಟ್ಲಿ ಹೀಗೆ ವಿವರಿಸಿದ್ದಾರೆ. “ Government will extend a favourable taxation treatment to Farmer Producers Organisations (FPOs) for helping farmers aggregate their needs of inputs, farm services, processing and sale operations…. Over the last few years, a number of Farmer Producer Companies have been set up along the lines of co-operative societies which also provide similar assistance to their members. In order to encourage professionalism in post-harvest value addition in agriculture, I propose to allow hundred per cent deduction to these companies registered as Farmer Producer Companies and having annual turnover up to Rs.100 crores in respect of their profit derived from such activities for a period of five years from financial year 2018-19.”

ತಾತ್ಪರ್ಯ: ದೇಶದಲ್ಲಿ ನೂರು ಕೋಟಿ ರೂಪಾಯಿಗಳಷ್ಟು ತೂಗುವ ರೈತರು, ರೈತ ಉತ್ಪಾದಕ ಕಂಪನಿಗಳು ಯಾರ್ಯಾರು? ಇಂತಹ ಶಕ್ತಿ ಇರುವುದು ಕಾರ್ಪೋರೇಟ್ ಗಳಿಗೆ ಮಾತ್ರ. ಒಂದಿಡೀ ತಾಲೂಕಿನ ರೈತರು ಸೇರಿ ಕಂಪನಿ ಮಾಡಿಕೊಂಡರೂ ಈ ಗಾತ್ರಕ್ಕೆ ವ್ಯವಹರಿಸುವುದು ಕಷ್ಟ ಇದೆ. ಹಾಗಾಗಿ ಇದು ನೇರವಾಗಿ ಮುಸುಕಿನಡಿಯಲ್ಲಿ ಕಾರ್ಪೋರೇಟ್ ಫಾರ್ಮಿಂಗಿಗೆ ಹಾಸಲಾಗಿರುವ ರತ್ನಗಂಬಳಿ!

‍ಲೇಖಕರು avadhi

February 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. Shrinivas Karkala

  ಅಂತೂ ಇಂತೂ ರೈತರು ಇನ್ನೊಂದು ಸುತ್ತಿನ ಆತ್ಮಹತ್ಯೆಗೆ ಸಿದ್ಧರಾಗಬೇಕಾಗುತ್ತದೆ. ರಾಜಾರಾಂ ಮಾಡಿರುವ ವಿಶ್ಲೇಷಣೆ ವಾಸ್ತವಕ್ಕೆ ಕನ್ನಡಿ ಹಿಡಿದಿದೆ.

  ಪ್ರತಿಕ್ರಿಯೆ
 2. SUMA

  ಅತ್ಯುತ್ತಮ ವಿಶ್ಲೇಷಣೆಯ ಬರಹ…
  “ಕೈಕೆಸರಾದರೆ ಬಾಯಿ ಮೊಸರು” – ಕೃಷಿಸಂಸ್ಕೃತಿಯ ಒಡಲಲ್ಲಿ ಹುಟ್ಟಿದ ಗಾದೆ ಮಾತು..!!
  .ಕೆಸರಾಗುತ್ತಿರುವ ಕೈಗಳು ಯಾರವೋ..ಮೊಸರುಣ್ಣುತ್ತಿರುವ ಬಾಯಿಗಳು ಯಾರವೋ…!!
  ಜೈಜವಾನ್ …ಜೈ ಕಿಸಾನ್….!!!

  ಪ್ರತಿಕ್ರಿಯೆ
 3. Chandraprabha

  ಇಂಥ ಹಗಲು ದರೋಡೆಯನ್ನು ಹತ್ತಿಕ್ಕುವ, ದೇಸೀ ಕೃಷಿಗೆ ಬಲ ತುಂಬುವ ನಿಟ್ಟಿನಲ್ಲಿ ಒಬ್ಬ ಜನಸಾಮಾನ್ಯ ಕೂಡ ಮಾಡಬಹುದಾದ್ದು ಏನು ಅನ್ನೊ ವಿಚಾರಗಳನ್ನು ಕೂಡ ಪ್ರಾಜ್ಞರು ವ್ಯಕ್ತಪಡಿಸಲಿ.

  ಪ್ರತಿಕ್ರಿಯೆ
 4. Suma KB

  This is the age of people who talk well, who talk deceitfully and who do nothing other than talking, Others are busy working hard to make their ends meet, they DO NOT HAVE TIME TO TALK.

  ಪ್ರತಿಕ್ರಿಯೆ
 5. Nandakumar. K..N

  ಚೆನ್ನಾಗಿ ವಿಷಯ ಬಂದಿದೆ. ಸರಿಯಾದ ವಿಶ್ಲೇಷಣೆ. ರೈತಪರ ಹೆಸರಿನ ಕಾರ್ಪೋರೇಟೀಕರಣಕ್ಕಾಗಿನ ಬಜೆಟ್ ಇದು. ಜನರು ಮತ್ತೆ ಮತ್ತೆ ಮೋಸ ಹೋಗಕೂಡದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: