
ಪ್ರತಿ ವರ್ಷ ಯುಗಾದಿಯನ್ನು ರಂಗ ಶಂಕರ ವಿಶೇಷವಾಗಿ ಆಚರಿಸುತ್ತಾ ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಕನ್ನಡ ಕಾವ್ಯವನ್ನು ಸಂಭ್ರಮಿಸುತ್ತಾ ಬಂದಿದೆ.
ಈ ವರ್ಷದ ಪದ್ಯಕಾಲವನ್ನು ಕವಿ, ಕತೆಗಾರ, ಚಿಂತಕ, ಅನುವಾದಕ ಕೆ ವಿ ತಿರುಮಲೇಶ್ ಹಾಗೂ ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್ ಅವರ ನೆನಪಿಗೆ ಅರ್ಪಿಸಲಾಗಿದೆ.
ಈ ವರ್ಷದ ಮಾರ್ಚ್ 19, ಅಂದರೆ ಯುಗಾದಿಯ ಮುಂಚಿನ ಭಾನುವಾರದಂದು, ಈ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಆದಿ ಕಾವ್ಯ, ಜಾನಪದ ಕಾವ್ಯ ಮತ್ತು ಆಧುನಿಕ ಕಾವ್ಯವೆಂದು ಮೂರು ಭಾಗಗಳಲ್ಲಿ ನಡೆಸಲಾಗುತ್ತದೆ.
ಕಾರ್ಯಕ್ರಮದ ವಿವರಗಳು ಹೀಗಿವೆ:
ಬೆಳಿಗ್ಗೆ 11.00
ಆದಿ ಕಾವ್ಯ
ಆ ಮುಖಾ – ಈ ಮುಖಾ
ರನ್ನನ ಗದಾಯುದ್ಧದ ಕೆಲವು ಭಾಗಗಳು.
ವಾಚನ: ಡಾ ಪಿ ಎಸ್ ಗೀತಾ
ವ್ಯಾಖ್ಯಾನ: ಡಾ ಎಂ ಎಸ್ ಆಶಾದೇವಿ.
ಮಧ್ಯಾಹ್ನ 3.30
ಜಾನಪದ ಕಾವ್ಯ
ಲಾವಣಿ – ಲಾವಣ್ಯ
ಹರದೇಶಿ ನಾಗೇಶಿ ಗೀಗೀ ಪದ
ಹರದೇಶಿ ಮೇಳ: ಬಸವರಾಜ ಎನ್ ಹಡಗಲಿ, ಲಕ್ಕುಂಡಿ
ನಾಗೇಶಿ ಮೇಳ: ಹುಲಿಗೆವ್ವಾ ಹಂದ್ರಾಳ, ಹೊಸಳ್ಳಿ, ಕೊಪ್ಪಳ
ಸಂಜೆ 7.30
ಪದ್ಯ ಓದು
ಕನ್ನಡ ಕಾವ್ಯ ವಾಚನ
ಓದುವವರು: ನಂದಿನಿ ಹೆದ್ದುರ್ಗ, ಫಾಲ್ಗುಣ ಗೌಡ, ರಾಜೇಂದ್ರ ಪ್ರಸಾದ್, ದಾದಾಪೀರ್ ಜೈಮನ್, ಮೌಲ್ಯ ಸ್ವಾಮಿ, ಫಾತಿಮಾ ರಾಲಿಯ, ವಿದ್ಯಾರಶ್ಮಿ ಪೆಲತ್ತಡ್ಕ, ಗಿರೀಶ್ ಹಂದಲಗೆರೆ, ಭಾಗ್ಯಜ್ಯೋತಿ ಹಿರೇಮಠ್, ಶಂಕರ್ ಕೆಂಚನೂರು, ಸದಾಶಿವ ಸೊರಟೂರು.
ಉಪಸ್ಥಿತಿ: ಬಾನು ಮುಶ್ತಾಕ್
ಕಾರ್ಯಕ್ರಮ ನಿರೂಪಣೆ: ಬಿ ಸುರೇಶ
ಕಾರ್ಯಕ್ರಮ ಪರಿಕಲ್ಪನೆ: ಎಸ್ ಸುರೇಂದ್ರನಾಥ್
0 ಪ್ರತಿಕ್ರಿಯೆಗಳು