ರಂಗಶಂಕರದಲ್ಲಿ ‘ಚದುರಂಗ ಮತ್ತು ಕತ್ತೆ’

ಪಂಚಮುಖಿ ನಟರ ಸಮೂಹ ತಂಡವು 2006ರಲ್ಲಿ ಆರಂಭಗೊಂಡು 2021 ರವರೆಗೆ ಅಂದರೆ ಸತತವಾಗಿ 15 ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿದೆ. ನಾಟಕ, ಸಂಗೀತ, ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ತಂಡವು ಯಶಸ್ವಿಯಾಗಿ ಪಾಲ್ಗೊಂಡಿದೆ. ನಮ್ಮ ತಂಡವು ಕಲಾಸಕ್ತರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಅದಲ್ಲದೆ ರಂಗ ಶಿಬಿರಗಳು ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ವರುಷದ ಹೊಸ ರಂಗ ಪ್ರಯೋಗದ 3ನೇ ಪ್ರಾಯೋಗ ರಂಗಶಂಕರದಲ್ಲಿ 20/10/2021.

‘ಚದುರಂಗ ಮತ್ತು ಕತ್ತೆ’ ಇದೊಂದು ಮನೋವಿಶ್ಲೇಷಣಾತ್ಮಕ ನಾಟಕ. ಕಾಂಟ್ರಾಡಿಕ್ಷನ್ ನಲ್ಲಿಯೇ ಬಾಳುವ ಮನುಷ್ಯ ಮುಖವಾಡ ಧರಿಸಿ  ಢೋಂಗಿತನ ಪ್ರದರ್ಶಿಸುತ್ತಿರುತ್ತಾನೆ. ತನ್ನ ಅಸ್ತಿತ್ವವನ್ನು ಪದೇಪದೆ ಒರೆಗೆ ಹಚ್ಚುವುದರ ಜೊತೆಗೆ ತನ್ನೊಳಗಿನ ಮನದ ಸುಪ್ತ ಭಾವನೆಗಳಿಗೆ ಆಗಾಗ ಎಚ್ಚರ ತಂದು, ಹೊರಹಾಕುವುದನ್ನು ಮಾಡುತ್ತಿರುತ್ತಾನೆ. ಅಲ್ಲೂ ಸಹ ಒಂದು ಅಸಂಗತತೆ ಇರುತ್ತದೆ. ಮನೋರಂಗದ  ಒಳತೋಟಿಗಳನ್ನು ಬಿಚ್ಚಿಡುವಲ್ಲಿ ಪಾತ್ರಗಳು ನಡೆಸುವ ಸಂವಾದ ಸಹಜರೂಪದಲ್ಲಿ ಹರಿಯುತ್ತದೆ. ಪ್ರಸ್ತುತ ನಾಟಕ ಬ್ಲ್ಯಾಕ್ ಕಾಮಿಡಿ ಪ್ರಕಾರದಲ್ಲಿ ರೂಪಗೊಂಡಿದೆ.

‍ಲೇಖಕರು Admin

October 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: