ಬೆಂಗಳೂರಿನ ‘ರಂಗಮಂಡಲ’ ಚೇತನಾ ಫೌಂಡೇಶನ್ ಹಾಗೂ ರಂಗ ಪರಿಸರ ಸಂಘಟನೆಗಳ ಜೊತೆಗೆ ಹಮ್ಮಿಕೊಂಡಿರುವ ವಿನೂತನ ಕಾವ್ಯ ಸಂಸ್ಕೃತಿ ಯಾನ ಇಂದು ಧಾರವಾಡ ತಲುಪಿತು.
ರಂಗ ನಿರ್ದೇಶಕ, ಸಾಹಿತಿ ಮಲ್ಲಿಕಾರ್ಜುನ ಮಹಾಮನೆ ಹಾಗೂ ಗೆಳೆಯರ ತಂಡ ರೂಪಿಸಿರುವ ವಿಶಿಷ್ಟ ಯಾತ್ರೆ ಇದು. ಪ್ರತೀ ತಿಂಗಳ ಮೂರನೆಯ ಭಾನುವಾರ ಒಂದು ಜಿಲ್ಲೆಯಲ್ಲಿ ಕಾವ್ಯ ಸಂಸ್ಕೃತಿ ಯಾನ ಜರುಗುತ್ತದೆ.
ಇದಕ್ಕೆ ಒಬ್ಬರು ಸರ್ವಾಧ್ಯಕ್ಷರು.
ಚಾಮರಾಜನಗಾರದ ಮೊದಲ ಯಾನದ ಅಧ್ಯಕ್ಷತೆ ಮುಡ್ನಾಕೂಡು ಚಿನ್ನಸ್ವಾಮಿ ಅವರದ್ದು. ಧಾರವಾಡದ ಯಾನಕ್ಕೆ ಸರ್ವಾಧ್ಯಕ್ಷರು ಹಿರಿಯ ಸಾಹಿತಿ ಡಾ ಬಸವರಾಜ ಸಾದರ ಅವರು.
ಧಾರವಾಡದಲ್ಲಿ ಜರುಗಿದ ಕಾರ್ಯಕ್ರಮದ ಫೋಟೊ ಅಲ್ಬಮ್ ಇಲ್ಲಿದೆ-
ಜನ ಬದುಕಲೆಂದು ಕಾವ್ಯ ಬರೆದೆ..ರಾಘವಾಂಕ…
ಪ್ರಸ್ತುತ ಸಮಯದಲ್ಲಿ ಅಳುವ ಸಮಾಜದ ಧ್ವನಿಗೆ ಕಾವ್ಯ ಧ್ವನಿಗೂಡಿಸಿದೆಯಾ? ಹಣತೆ ಹಚ್ಚುತ್ತೇನೆ ನಾನು..
ಕತ್ತಲನು ಓಡಿಸುತ್ತೇನೆಂಬ ಭ್ರಮೆಯಿಂದಲ್ಲ…ಜಿ ಎಸ್ ಎಸ್.
-ಡಾ.ಬಸವರಾಜ ಸಾದರ
ಸರ್ವಾಧ್ಯಕ್ಷರು
ದಾರವಾಡ ಕಾವ್ಯ ಯಾನ
**
ಸ್ವತಃ ಕವಿ, ಕಾವ್ಯಧರ್ಮಿಯಾಗಬೇಕು*ಆಗ ಕಾವ್ಯ ಎಲ್ಲರನ್ನೂ ಒಗ್ಗೂಡಿಸುತ್ತದೆ
ಎಲ್ಲರೂ ಅವರ ಜನರೇ….
ಆದರೆ ನಾವು(ಕವಿಗಳು) ಅವರ ಜನರಾಗಬಾರದು..
(ಬ್ರೆಕ್ಟ್ ನ ತಾಯಿ ನಾಟಕದ ಮಾತುಗಳು)
-ಸಿದ್ಧಲಿಂಗ ಪಟ್ಟಣಶೆಟ್ಟಿ
ಮುಖ್ಯ ಅತಿಥಿಗಳು
ಕಾವ್ಯಯಾನ- ಧಾರವಾಡ
**
ಕಾವ್ಯ ಒಂದು ಧರ್ಮವಾಗಬೇಕು….ಎಲ್ಲರನ್ನೂ ಒಗ್ಗೂಡಿಸುವ ಪರ್ಯಾಯ ಧರ್ಮವಾಗಬೇಕು…
-ಮುಡ್ನಾಕೂಡು ಚಿನ್ನಸ್ವಾಮಿ
ಕಾವ್ಯ ಸಂಸ್ಕೃತಿ ಯಾನದ
ನಿಕಟಪೂರ್ವ ಸರ್ವಾಧ್ಯಕ್ಷರು.
ಚಾಮರಾಜನಗರ ಪ್ರಥಮ ಗೋಷ್ಠಿ.
**
ಕಾವ್ಯ ಯಾವತ್ತೂ ಸತ್ಯವನ್ನೇ ಹೇಳಬೇಕು; ಮತ್ತು ಕಾವ್ಯ ಸತ್ಯವನ್ನೇ ಹೇಳುತ್ತದೆ.. ಕಾವ್ಯ ನಮ್ಮ ಕ್ರೂರತೆಯನ್ನು ಕಳೆದು ಮನುಷ್ಯತ್ವದೆಡೆಗೆ ಕೊಂಡೊಯ್ಯುತ್ತದೆ
-ಆರ್ ಜಿ ಹಳ್ಳಿ ನಾಗರಾಜ
ಮುಖ್ಯ ಅತಿಥಿಗಳು
ಕಾವ್ಯಯಾನ ಧಾರವಾಡ.
**
ಕಾವ್ಯದ ಕಳಕಳಿಯಿಂದ ಇಲ್ಲಿ ಜನ ಬಂದ್ದಿದ್ದೀರಿ…ನಾವು ಯಾರನ್ನೂ ಜುಲ್ಮು ಮಾಡಿಲ್ಲ..
-ಲಿಂಗರಾಜ ಅಂಗಡಿ
ಕ.ಸಾ.ಪ. ಅಧ್ಯಕ್ಷರು
ಮುಖ್ಯ ಅತಿಥಿ
ಕಾವ್ಯಯಾನ,ಧಾರವಾಡ
**
0 ಪ್ರತಿಕ್ರಿಯೆಗಳು