ಯಮುನಾ ಗಾಂವ್ಕರ್
ಬದುಕು ಹೇಳಿದ ಚಿತ್ರಗಳ ಬಿಡಿಸುವೆ
ಖಾಲಿ ಗೋಡೆಗಳ ತುಂಬಾ…
ಮಣ್ಣು ತನ್ನೊಳಗನ್ನು ಹೇಳಿತು!
ನೀರು ತೇವ ನೀಡಿತು!
ಕುಂಚ ಗೀಚುತ್ತ ಸಾಗಿತು!
ಬಣ್ಣ ಜೀವ ತುಂಬಿತು!
ಚಿತ್ರಗಳೆಲ್ಲ ಮಾತಿಗೆ ಶುರುವಿಟ್ಟವು!
ತಾವು ಇಂಗಿಸಿಕೊಂಡ ನೋವ ಹಿಂಡಿ
ಶೇಡಿ ಬಡಿದ ಗೋಡೆಯ ತುಂಬಾ
ಅದುಮಿಟ್ಟ ಘಟನೆಗಳ ಬಿಡಿಸುತ್ತ
ಚೌಕಟ್ಟುಗಳ ಕಳಚಿಟ್ಟವು!
ಚೂಪಾದ, ಸಪೂರಾದ, ಸಪಾಟಾದ, ಅಷ್ಟೇ ದಪ್ಪನಾದ ಕುಂಚಗಳ ಚಳಕವಲ್ಲವಿದು
ತಾಜಾ ನೆನಪು ಮತ್ತು ನೋವಿನೊಳಗದ್ದಿ ತೆಗೆದ ಮಾಗಿದ ಫಲವಿದು!
ಇಷ್ಟು ಸಾಕು ತಕ್ಷಣ ಉಸಿರು ಆರದಿರಲು!
0 ಪ್ರತಿಕ್ರಿಯೆಗಳು