ತೆಲುಗು ಮೂಲ : ದೇಶರಾಜು

ಕನ್ನಡಕ್ಕೆ: ರೋಹಿಣಿ ಸತ್ಯ
——
ಮೊದಲಿಗೆ ನಾವು ಮನುಷ್ಯರಾಗಿ ಬೇರ್ಪಟ್ಟಿದ್ದೇವೆ
-ಪ್ರಕೃತಿ ಮರಣ ಶಾಸನಕ್ಕೆ
ಅದು ಆರಂಭ ವಾಕ್ಯವಾಯಿತು
ನಂತರ ನಾವು ಸ್ತ್ರೀ ಪುರುಷರಾಗಿ ಬೇರ್ಪಟ್ಟಿದ್ದೇವೆ
-ಆಧಿಪತ್ಯ ಆರಂಭ ವ್ಯಾಕ್ಯಕ್ಕೆ
ಅದು ಮೊದಲ ಅಕ್ಷರವಾಯ್ತು
ನಂತರ ನಾವು ಮತಗಳಾಗಿ ಬೇರ್ಪಟ್ಟಿದ್ದೇವೆ
ಮೊದಲ ವರ್ಣಮಾಲೆ ಸುತ್ತೂ
ಅದು ಬಿಚ್ಚುಗತ್ತಿಗಳನ್ನು ನಾಟಿತು

ನಂತರ ನಾವು ಕುಲಗಳಾಗಿ ಬೇರೆಯಾಗಿದ್ದೇವೆ
-ವರ್ಣಾಶ್ರಮ ಕತ್ತಿಗಳ ವಿಹಾರದಲ್ಲಿ
ಅದು ಅಸ್ಪೃಶ್ಯತೆಯ ಗುಣಾಕಾರವಾಯಿತು
ಆನಂತರ ನಾವು ಉಪಕುಲಗಳಾಗಿ ಬೇರ್ಪಟ್ಟಿದ್ದೇವೆ
-ಅಗಣಿತ ವ್ಯಾಕರಣಕ್ಕೆ
ಅದು ಅರ್ಥವಿಲ್ಲದ ವಾಕ್ಯವಾಯಿತು
ನಂತರ ನಾವು ಪ್ರಾಂತಗಳಾಗಿ ಬೇರ್ಪಟ್ಟಿದ್ದೇವೆ
-ಕುಂಚಿತಗೊಂಡ ಅಂಧ ವಾಕ್ಯಕ್ಕೆ
ಅದು ಬಣ್ಣದ ಕಣ್ಪಟ್ಟಿ ಆಯಿತು
ಕಟ್ಟಕಡೆಗೆ ನಾವು ಒಬ್ಬೊಬ್ಬರಾಗಿ ಉಳಿದಿದ್ದೇವೆ
-ಅಂಧತ್ವದ ಕಣ್ಣ ಪಟ್ಟಿ ಸಿಕ್ಕುಗಳಿಗೆ
ಅದು ಒಗ್ಗಟ್ಟಿನ ಚರಮ ಗೀತವಾಯ್ತು
ತೆಲುಗು ಮೂಲ : ದೇಶರಾಜು
ಅನುವಾದ : ರೋಹಿಣಿಸತ್ಯ
Tnq Madam