ಮುಕುಂದ ಬೃಂದಾ
ನಡಿ ನಡೀ ನೀ ಆಚೆ ನಡಿ
ನಿನ್ನದಲ್ಲ ಊರು ನಿನ್ನದಲ್ಲ ಸೂರು
ನೀನಿದರ ಭಾಗ ಅಲ್ಲಯ್ಯ ನಿಂಗ್ಯಾಕ ಅರ್ಥ ಆಗಲ್ಲ
ನೀ ಬಾಡಿದಾ ಹೂವು ನಿಲ್ಲಲ್ಲೆ
ನಿನಗಿಲ್ಲಿ ಜಗವಿಲ್ಲ ಮಂಟಪದ ಒಳಗ
ನಿನಗೇಕೆ ತಿಳಿಯದೋ ಬಿಡಿಬಿಡಿಸಿ ಹೇಳಿದರೂ
ನಿಡುಸುಯ್ ಬಿಟ್ಟು ನಿನಗೆಲ್ಲಿ ಗತಿ
ನಡೆ ಅತ್ತ ತಿರುತಿರುಗಿ ಕೇಳದೆ ಮತ್ತೆ
ನಡು ಬಾಗಿಸಿ ಬೇಡದ ನಿನಗಿದೇ ನಾಟಿಮದ್ದು
ನುಡಿ ಒಂದ ಆಡೀಯ ಗೆರೆ ದಾಟಿ ನಡೆದೀಯ
ನಾಡಿ ಬಿಗಿಹಿಡಿದು ನಡೆ ನೀ ಖೋಡಿ
ನಾಡು ನಗುತಾದ ಬೀಡಿ ಸುಟ್ಟ ಹೊಗೆ ಸುರಳಿಯಾಂಗ
0 ಪ್ರತಿಕ್ರಿಯೆಗಳು