ನಾಡೋಜ ಕಮಲಾ ಹಂಪನಾ ಸಾಹಿತ್ಯ ವೇದಿಕೆ ವತಿಯಿಂದ ಪ್ರತಿವರ್ಷ ಕೊಡಮಾಡುವ ಡಾ. ಕಮಲಾ ಹಂಪನಾ ಪ್ರಶಸ್ತಿಗೆ ಹಿರಿಯ ಕವಿ ಮಾಹೆರ್ ಮನ್ಸೂರ್ ಮತ್ತು ಹೋರಾಟಗಾರ್ತಿ ಹಾಗೂ ಕವಯಿತ್ರಿ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಲೇಖಕಿಯರ ಸಂಘ ಮತ್ತು ಕಮಲಾ ಹಂಪನಾ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಇದೇ ನವೆಂಬರ್ 19, 2023ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಗಾಂಧಿಭವನದಲ್ಲಿ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿಯವರು ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಅವರು ತಿಳಿಸಿದ್ದಾರೆ.
ಡಾ. ಕಮಲಾ ಹಂಪನಾ ವಿಶೇಷ ದತ್ತಿ ಉಪನ್ಯಾಸವನ್ನು ಹಿರಿಯ ಸಂಶೋಧಕಿ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್ ಅವರು ನೀಡಲಿದ್ದಾರೆ.
0 ಪ್ರತಿಕ್ರಿಯೆಗಳು