ಚಲಂ
ಕ್ಯಾಲೆಂಡರಿನಲ್ಲಿ ಈ ಹಾಳೆ
ಬಲು ಭಾರದ್ದು
ಅದೆಷ್ಟು ಜನ ಇದನ್ನು ತಿರುವಿ
ಎಪ್ರಿಲ್ ನೋಡಲು
ಹರಸಾಹಸ ಪಡುತ್ತಾರೆ
ಯಾರು ಹೇಳಿದ್ದು
ಯಿಯರ್ ಎಂಡ್ ಎಂದರೆ ಡಿಸೆಂಬರ್..?
ಲೆಕ್ಕಾಚಾರದ ಬದುಕಿನಲ್ಲಿ
ಡಾಟಾ ಎಂಟ್ರಿಯ ತೂಕಗಳೊಂದಿಗೆ
ಮಾರ್ಚಿ ವರ್ಷ ಮುಗಿಸುತ್ತದೆ
ಓದುವ ಮಕ್ಕಳ ಮುಖ
ಬೇರ್ಯಾವ ತಿಂಗಲ್ಲೂ
ಈ ಪರಿ ಕಂಗೆಟ್ಟಿರುವುದಿಲ್ಲ
ಪರೀಕ್ಷೆಯೆಂದರೆ ಕೇವಲ
ಪಾಸುಫೇಲಲ್ಲ
ಬೇಸಿಗೆಯ ದಿನಗಳಿಗಾಗಿ
ರಜಾ ಅರ್ಜಿಯನ್ನು ಬರೆಯುವುದು
ಮಾರ್ಚಿಯೆಂದರೆ
ಸಂಕ್ರಾಂತಿಯಲಿ ಒಪ್ಪ ಮಾಡಿಟ್ಟ
ನೇಗಿಲು ನೊಗಗಳು
ಹೊಲಕ್ಕಿಳಿದು ಬರಉಕ್ಕೆಯಾಗಿ
ರೈತ ಸಾಲ ಮಾಡುವ ಹೊತ್ತು
ಮಾರ್ಚಿಯೆಂದರೆ
ಯಾವ ಕಛೇರಿಯಲ್ಲೂ
ತಬರಂದಿರ ಕೆಲಸವಾಗದಿರುವುದು
ಅದಕ್ಕಾಗಿಯೇ ಲಂಕೇಶರ
ಜನ್ಮದಿನವನ್ನಾಚರಿಸುವುದು
ಶಿಶಿರನಿಗೆ ಅಲ್ ವಿದಾ ಹೇಳಿಯಾಗಿ
ವಸಂತನ ಓಲೈಕೆಗೆ ಮುಂದಾಗುವುದು
ಉತ್ತಮ ಕವಿತೆ. ಹೊಸ ಆಲೋಚನೆಗೆ ಎಡೆ ಮಾಡಿದ್ದೀರಿ. ನೈಸ್
Kavithe tumba chennagide
ವಾಸ್ತವವನ್ನು ತೆರೆದಿಟ್ಟ ಸುಂದರ ಕವಿತೆ.
Chalam sakattagide
ಕವಿತೆ ಚನ್ನಾಗಿದೆ ಚಲಂ ಅವರೆ. ಇ
ದೇ ರೀತಿ ನಿಮ್ಮ ಸಾಹಿತ್ಯ ಕೃಷಿ ಮುಂದುವರೆಯಲಿ
good one
ಮಾರ್ಚ್ ತಿಂಗಳ ಮಹತ್ವವನ್ನು ತುಂಬಾ ಚೆನ್ನಾಗಿ ಹೇಳಿದ್ದೀರ.
ಕವಿತೆ ತುಂಬ ಚೆನ್ನಾಗಿದೆ..
ಸುಳ್ಳು ವರ್ಷದ ಾರಂಭದೊಡನೆ ನಿಜ ವರ್ಷದ ಆರಂಭದ ಹೋಲಿಕೆ
ಫೈನ್, ಕಲ್ಪನೆ ಹೊಸತು, ತಕ್ಕ ಪದಜೋಡನೆ ತುಂಬ ಇಷ್ಟವಾಯಿತು.
ಕವಿತೆ ಚನ್ನಾಗಿದೆ
hosatanavide chalam..