ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯು ೨೦೨೩ ರ ದತ್ತಿ ಪುರಸ್ಕಾರಗಳನ್ನು ಪ್ರಕಟಿಸಿದ್ದು ವಿ ಎ ಲಕ್ಷ್ಮಣ್ , ಅನಿತಾ ಪಿ ತಾಕೊಡೆ ಸೇರಿದಂತೆ 9 ಸಾಹಿತಿಗಳಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ
ಹಿರಿಯ ಸಾಹಿತಿಗಳಾದ ತುರುವೇಕೆರೆ ಪ್ರಸಾದ್, ಕೊಟ್ರೇಶ್ ಎಸ್.ಉಪ್ಪಾರ್, ಅಕ್ಷತಾ ಕೃಷ್ಣಮೂರ್ತಿ, ಡಾ. ಸುರೇಶ್ ನೆಗಳಗುಳಿ, ಎನ್. ಶೈಲಜಾ ಹಾಸನ, ಡಾ. ಹಸೀನಾ ಎಚ್.ಕೆ, ಲತಾಮಣಿ ಎಂ.ಕೆ. ತುರುವೇಕೆರೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಗಳಿಗೆ ಅರ್ಹ ಕೃತಿಗಳನ್ನು ಆಯ್ಕೆ ಮಾಡಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್, ಸಂಸ್ಥಾಪಕ ಕೋಟರೇಶ ಎನ್ ಉಪ್ಪಾರ ತಿಳಿಸಿದ್ದಾರೆ.
ದಿ. ಲಕ್ಷ್ಮಿ ದ್ಯಾವಪ್ಪ ಸ್ಮಾರಕ ಕಾವ್ಯ ಪುರಸ್ಕಾರ
ಮಮತಾ ಶಂಕರ ಅವರ “ನದಿಯ ವೃತ್ತಾಂತ” ಪ್ರಥಮ
ಎ.ಎನ್.ರಮೇಶ್ ಗುಬ್ಬಿಯವರ “ಬುದ್ಧ ನಗುತ್ತಿದ್ದಾನೆ” ದ್ವಿತೀಯ
ಸಿದ್ಧಾರೂಢ ಗು ಕಟ್ಟಿಮನಿಯವರ “ಸಾಲುಮಂಟಪ” ತೃತೀಯ
ಎನ್. ಶೈಲಜಾ ಹಾಸನ್ ದತ್ತಿ ಪುರಸ್ಕಾರ (ಲಲಿತ ಪ್ರಬಂಧ)
ಬೆಳಗಾವಿ ಜಿಲ್ಲೆಯ ಡಾ. ಲಕ್ಷ್ಮಣ ವಿ.ಎ. ರವರ “ಮಿಲ್ಟ್ರಿ ಟ್ರಂಕು”
ಪದ್ಮಾವತಿ ವೆಂಕಟೇಶ್ ದತ್ತಿ ಪುರಸ್ಕಾರ (ಕಥೆ)
ಮುಂಬಯಿಯ ಅನಿತಾ ಪಿ. ತಾಕೊಡೆಯವರ “ನಿವಾಳಿಸಿ ಬಿಟ್ಟ ಕೋಳಿ”
ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ ಪುರಸ್ಕಾರ (ಹಾಸ್ಯ ಪ್ರಬಂಧ)
ಶಿವಮೊಗ್ಗ ಜಿಲ್ಲೆಯ ಶೃತಿ ಗದ್ದೆಗಲ್ ಅವರ “ಕಿಲ ಕಿಲ ಕೋಕಿಲ”
ಪ್ರಭಾವತಿ ಶೆಡ್ತಿ ದತ್ತಿ ಪುರಸ್ಕಾರ (ನಾಟಕ)
ಶಿವಮೊಗ್ಗ ಜಿಲ್ಲೆಯ ಇಂ|| ಹೊಸಹಳ್ಳಿ ದಾಳೇಗೌಡ ಅವರ “ಬಾರಿಸಿ ಕನ್ನಡ ಡಿಂಡಿಮವ ಹಾಗೂ ಇತರೆ ಐದು ನಾಟಕಗಳು”
ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ ಪ್ರಶಸ್ತಿ (ಕಾದಂಬರಿ)
ಜಯಂತಿ ಚಂದ್ರಶೇಖರ್ರವರ “ಮಚ್ಚೆ” ಕಾದಂಬರಿ
ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಪುರಸ್ಕಾರ (ಗಜಲ್)
ಶಮಾ ಎಮ್. ಜಮಾದಾರ ಅವರ “ನೆಂದ ನೆಲದ ಘಮಲು” .
ಪ್ರಸಕ್ತ ಸಾಲಿನ ದತ್ತಿ ಪ್ರಶಸ್ತಿಗಳನ್ನು ಸೆಪ್ಟಂಬರ್ ೨೪ ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಏಳನೇ ಕವಿಕಾವ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಮುಂಬಯಿಯ ಹಿರಿಯ ಸಾಹಿತಿ ಡಾ. ಅಮರೇಶ್ ಪಾಟೀಲ್ ಹಾಗೂ ಕವಯಿತ್ರಿ ಡಾ. ಲತಾ ರಾಜಶೇಖರ್ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.








0 ಪ್ರತಿಕ್ರಿಯೆಗಳು