ಕಲಬುರಗಿ: ಸಾಹಿತಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಹಿಪಾಲರೆಡ್ಡಿ ಅವರನ್ನು ರವಿ ಬೆಳೆಗೆರೆ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಯಾಗಿದ್ದು, ಇದೇ ಫೆ. 3 ಹಾಗೂ 4 ರಂದು ದಾವಣಗೆರೆಯಲ್ಲಿ ನಡೆಯುವ 38 ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಸಾಹಿತ್ಯ ಲೋಕಕ್ಕೆ 52 ಕೃತಿಗಳನ್ನು ನೀಡಿರುವುದನ್ನು ಗುರುತಿಸಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿನ 32 ವರ್ಷದ ಸೇವೆ ಮತ್ತು ವಿಶೇಷವಾಗಿ ಬರವಣಿಗೆ ಪರಿಗಣಿಸಿ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು