ಮಮತಾ ಅರಸೀಕೆರೆ ಕವಿತೆ ‘ಅಂದೂ ಕೂಡ ಹುಣ್ಣಿಮೆಯಿತ್ತು’

ಮಮತಾ ಅರಸೀಕೆರೆ

**

ಏನೋ ಇರಬೇಕೇನೋ

ಅಂಟಿನ ನಂಟು

ಬೆಳದಿಂಗಳಿಗೂ ನನಗೂ

ಬೆಸೆದ ಬಂಧದ ಗುನುಗು

ಆ ದಿನವೂ ಬಿಳಿ ಹಾಲ್ದಿಂಗಳಿತ್ತು

ಜೊತೆಗೆ ನಿರೀಕ್ಷೆಯೂ

ಭಾವಕ್ಕೆ ಜೀವ ಬಂದಿತ್ತು

ಮತ್ತಾಗ ಉನ್ಮಾದವೂ

ಬಾಂಧವ್ಯವಂತೂ ಅಲ್ಲ

ಬಯಸಿದ್ದಂತೂ ಸಿಗದಲ್ಲ

ಸಂಬಂಧದಾಚೆಗಿನ ಬೆಸೆಗೆಯೊಂದು

ಆಕಾರ ತಳೆದು ಬಂದಿತ್ತು

ಕರೆಗೆ ಒಲಿದ ಕೊಳಲ ದನಿ

ಓಗೊಟ್ಟ ಕ್ಷಣವಾಗಿದ್ದಿರಬಹುದು

ಬೇಡಿಕೆಯ ಭಿನ್ನಹಕ್ಕೆ

ಸ್ಪಂದನೆಯ ಸಂವಾದಿಯಾಗಿರಬಹುದು

ಆಹಾ!

ದಿವ್ಯ ಘಳಿಗೆಯಾಗಿತ್ತದು

ಭವ್ಯತೆಯ ಸಾಕಾರವು

ತಂಪು ತಂಗಾಳಿಯಂತದ್ದು

ಬಿರುಶಾಖದ ಜೊತೆ ಸಂಧಾನವು

ಖುಷಿಯಾಯ್ತು,

ಸಂಭ್ರಮವಿತ್ತು

ಕಾಲವನ್ನಲ್ಲೇ ಸ್ತಂಭಿಸುವ ಆವೇಗವಿತ್ತು

ಶಾಶ್ವತವಾಗಬಾರದೇ ಈ ಸಮಯ,

ಬೇಡಿಕೆಯ

ಹುಚ್ಚ್ಹುಚ್ಚು ಹೊಳೆಯಲ್ಲೆಲ್ಲಾ ಬರೀ ಕಲ್ಲಿತ್ತು

ಪುಣ್ಯಪ್ರಕಾರಗಳೆಲ್ಲ ಸಾಕಾರಗೊಂಡಿತ್ತೇನೊ

ಕ್ಷಣಕ್ಷಣವು ಮುದಗೊಂಡಿತ್ತು

ಅಯ್ಯೊ ಇದೆಂತಹ ಪೀಡನೆ,

ತೆರಳಲೇಬೇಕೆ ಮನಸ್ಸಿಗದೆಷ್ಟು ಘಾಸಿಯಾಗಿತ್ತು!

ಎದೆಗೆ ಇಳಿದಿತ್ತು ಈ ದಿನ

ಭರವಸೆಯು ಉಕ್ಕಿ, ತುಂಬಿ ಹರಿದಂತೆ

ಕರಾಳದ ಮುನ್ಸೂಚನೆಯೇ ಬಾರದಿರು

ಸಿದ್ದ ಆಸೆ ಆಮಿಷಗಳ ಬಲಿಕೊಟ್ಟಂತೆ

ಹೀಗೇ ಬಿಟ್ಟು ಹೊರಟಿರಬಹುದು ಬುದ್ದ

ತೊರೆಯಲೆಷ್ಟು ಸರಾಗವವನಿಗೆ ಅನಿಸಿತ್ತು

ಏನೇನೋ ಆಲೋಚನೆ, ಎಂತದೋ ಮಳ್ಳು

ಸಖಿಯ ಅದಾವ ಭಾವಗಳಿಗೆ ಅವನ

ಅದಾವ ಬೆಲೆಯಿತ್ತು?!

‍ಲೇಖಕರು Admin MM

May 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: