ಮಮತಾರಾವ್ ಮಲೆಯಾಳಿ ಸಿನಿಮಾ…

ಚಿಂತನೆಗೆ ಪ್ರೇರೇಪಿಸುವ ಮಲೆಯಾಳಿಚಿತ್ರ- ೧೯(೧)(ಎ)

ಮಮತಾರಾವ್

ಫ್ರೆಂಚ್‌ ಚಿ೦ತಕ ವಾಲ್ಟೇರ್ (೧೬೯೪-೧೭೭೮) – ‘ನಿನ್ನಯಾವ ಮಾತನ್ನೂ ನಾನು ಒಪ್ಪುವುದಿಲ್ಲ. ಆದರೆ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನನ್ನ ಉಸಿರಿರುವವರೆಗೂ ಸಮರ್ಥಿಸುತ್ತೇನೆ.’ ಎನ್ನುವಮಾತುಗಳು ಕಳೆದೈದು ಶತಮಾನಗಳಿಂದಲೂ ಜಗತ್ತಿನಾದ್ಯಂತಜನರಅಭಿವ್ಯಕ್ತಿ ಸ್ವಾತ್ರಂತ್ರ್ಯವನ್ನು ಪ್ರಭಾವಿಸುತ್ತಲೇ ಬಂದಿದೆ.

ಭಾರತೀಯ ಸಂವಿಧಾನದ ೧೯ನೇ ಅನುಚ್ಛೇದದ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳಲ್ಲಿ ಪ್ರಧಾನವಾದುದು ವಾಕ್ ಮತ್ತುಅಭಿವ್ಯಕ್ತಿ ಸ್ವಾತಂತ್ರ್ಯ. ತಾವುಕಂಡದ್ದನ್ನು, ಅನುಭವಿಸಿದ್ದನ್ನು ಮುಕ್ತವಾಗಿ ವಾಕ್‌ ಅಥವಾ ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ ಸ್ವಾತಂತ್ರ್ಯದ ಕತ್ತು ನಿಧಾನಕ್ಕೆ ಹಿಸುಕಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿಓಟಿಟಿಯಲ್ಲಿ ಬಿಡುಗಡೆಗೊಂಡ ಇ೦ದು ವಿ.ಎಸ್. ನಿರ್ದೇಶನದ ಚೊಚ್ಚಲ ಮಲೆಯಾಳಿ ಚಲನಚಿತ್ರ ‘೧೯(೧)(ಎ)’ ಗಮನ ಸೆಳೆಯುತ್ತದೆ.

ಸಾಮಾನ್ಯ ಪ್ರಜೆಗಳನ್ನು ಪ್ರತಿನಿಧಿಸುವ ಹೆಸರೇ ಇಲ್ಲದ ನಾಯಕಿ ತನ್ನ ಮನೆ ಹಾಗೂ ಫೋಟೊಕಾಪಿ ಅಂಗಡಿಯ ನಡುವೆ ದೈನಂದಿನ ಯಾಂತ್ರಿಕ ಬದುಕು ಸವೆಸುತ್ತಿದ್ದಾಳೆ. ಸತತವಾಗಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗುವ ಅಂಗಡಿಯಲ್ಲಿರುವ ಅವಳ ಕಂಪ್ಯೂಟರ್‌ಕೂಡ ಒ೦ದೆರಡು ಸಾರಿಕೈಬಡಿತ ಪಡೆಯದೆ ಕೆಲಸ ಮಾಡುವುದೇಇಲ್ಲ. ಅದನ್ನುರಿಪೇರಿ ಮಾಡಿ ಮಾಡಿ ಸಾಕಾದ ಟೆಕ್ನೀಶಿಯನ್ ಹೊಸ ಕಂಪ್ಯೂಟರ್ ತೆಗೆದುಕೊಳ್ಳಲು ಸಲಹೆ ನೀಡಿದಾಗಆರ್ಥಿಕ ಬಿಕ್ಕಟ್ಟಿನ ಕಾರಣ ನೀಡುವ ನಾಯಕಿತಡರಾತ್ರಿಯ ವರೆಗೂ ಕೆಲಸ ಮಾಡುತ್ತಿದ್ದು ಒಬ್ಬಳೇ ಅಂಗಡಿಯನ್ನು ಮುಚ್ಚಿ ಕೇವಲ ಪುರುಷರಷ್ಟೇ ಓಡಾಡುವ ನಿರ್ಜನ ರಾತ್ರಿಯಲ್ಲಿಏಕಾಂಗಿಯಾಗಿ ಮನೆಗೆ ಹೋಗುವ ಧೈರ್ಯಗಾತಿ.

ಪತ್ನಿಯ ಮರಣಕ್ಕೆ ತನ್ನ ಬೇಜವಬ್ದಾರಿಯೇ ಕಾರಣವೆನ್ನುವ ಕೊರಗಿನಲ್ಲಿ ನವೆಯುತ್ತಾ ಯಾವ ಕೆಲಸವನ್ನೂ ಮಾಡದೆ ವ್ಯರ್ಥ ಕಾಲಕಳೆಯುವ ತಂದೆ; ಪಕ್ಕದ ಅಂಗಡಿಯ ಸೇಲ್ಸ್ಗರ್ಲ್ ಫಾತಿಮಾ; ಪ್ರಾದೇಶಿಕವಾಗಿ ಪರಿಸರವಾದಿ ಪ್ರತಿಭಟನೆಗಳಲ್ಲಿ ಕ್ರೀಯಾಶೀಲನಾಗಿರುವ ಸ್ನೇಹಿತ ಇಷ್ಟೇ ಅವಳ ಸಂಬ೦ಧಗಳು. ಆದರೆಅವರಿಗೂ ಅವರವರದೇ ಆದ ವೈಯಕ್ತಿಕ ಬದುಕಿದೆ; ಆಯ್ಕೆಗಳಿವೆ. ತನಗಿಚ್ಛೆಯಿಲ್ಲದಿದ್ದರೂ ಪರಿವಾರದವರ ಸಂತೋಷಕ್ಕಾಗಿ ಮದುವೆಯಾಗಲು ತಯರಾಗುವ ಗೆಳತಿ, ಶಾಲೆಯೊಂದರಲ್ಲಿ ಕೆಲಸ ದೊರೆತದ್ದೇತಡತನ್ನ ಕಾರ್ಯ ಚಟುವಟಿಕೆಗಳನ್ನೆಲ್ಲಾ ತ್ಯಜಿಸಿ ಬದುಕು ಕಟ್ಟಲು ಹೊರಟ ಸ್ನೇಹಿತರಿಂದಾಗಿ ಒ೦ಟಿತನವನ್ನುಅನುಭವಿಸುವ ನಾಯಕಿಯ ಅಂಗಡಿಗೆ ಒ೦ದು ದಿನ ಅಪರಿಚಿತನೊಬ್ಬ ಬಂದು ಕೈಬರಹದ ಹಸ್ತಪ್ರತಿಯನ್ನು ನೀಡಿ ಅದರ ಫೋಟೊಕಾಪಿ ತಯಾರಿಸಲು ವಿನಂತಿಸುತ್ತಾನೆ. ಸಂಜೆಯವರೆಗೆ ಬರುತ್ತೇನೆ ಎನ್ನುತ್ತಾ ಹೊರಟವನಿಗೆ ಅದನ್ನು ಬೈಂಡ್ ಮಾಡಲೇ ಎಂದು ಕೇಳುವಾಗ ‘ನಿನ್ನಿಷ್ಟ’ಎಂದು ನಸುನಗುತ್ತಾ ಹೋದ ವ್ಯಕ್ತಿಯನ್ನು ತಡರಾತ್ರಿವರೆಗೆ ಕಾದರೂ ಆತ ಬರುವುದಿಲ್ಲ.

ಮರುದಿನ ಟಿವಿಯಲ್ಲಿ ಬರುವ ವಾರ್ತೆಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಆ ವ್ಯಕ್ತಿ ಗೌರಿಶಂಕರ್ ಎಂಬ ಬಂಡಾಯ ಲೇಖಕ ಎನ್ನುವುದು ನಾಯಕಿಗೆ ತಿಳಿಯುತ್ತದೆ. ಮಾತ್ರವಲ್ಲಆತನ ಈವರೆಗಿನ ಪುಸ್ತಕಗಳನ್ನು ಪ್ರಕಟಿಸಿದ ಆತನ ಪ್ರಕಾಶಕ-ಗೆಳೆಯನ ಸಂದರ್ಶನದಲ್ಲಿ ಗೌರಿಶ೦ಕರ್ ಮಹತ್ವದ ಕೃತಿ ರಚನೆಯಲ್ಲಿ ತೊಡಗಿರುವ ವಿಷಯ ಕೇಳಿ ತನ್ನಲ್ಲಿರುವ ಹಸ್ತಪ್ರತಿ ಅದೇ ಎನ್ನುವುದು ದೃಢವಾಗುತ್ತದೆ. ಬಂಡಾಯ ಬರಹಗಾರನನ್ನು ತೀರಹತ್ತಿರ ದಿಂದಗು೦ಡು ಹೊಡೆದು ಹತ್ಯೆಗೈಯುವ ದೃಶ್ಯ ಭರತ್ ಧಾಬೋಳ್‌ಕರ್, ಎಂ.ಎ೦.ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ರ ಹತ್ಯಾ ಪ್ರಕರಣವನ್ನು ಜ್ಞಾಪಿಸುತ್ತದೆ. ಹತ್ಯೆಗೊಳಗಾಗುವ ಮುನ್ನ ಬೈಕಿನಲ್ಲಿ ಬಂದವರನ್ನು ಗುರುತಿಸಿ ಪರಿಚಿತ ನಗೆ ಬೀರುವ ಗೌರಿಶಂಕರನ ಮುಖ ನಮ್ಮನ್ನು ಕಾಡುತ್ತದೆ. ಸುದ್ಧಿ ಮಾಧ್ಯಮವನ್ನು ಪ್ರತಿನಿಧಿಸುವ ಮಹಿಳೆಯೂ ನಾಗರಿಕ ಪ್ರಜ್ಞೆಯೇ ಇಲ್ಲದವಳಂತೆ, ತನ್ನ ಮಾಧ್ಯಮದ ಟಿ ಆರ್‌ ಪಿಯನ್ನು ಹೆಚ್ಚಿಸುವುದೇ ತನ್ನ ಜವಬ್ದಾರಿಯೆನ್ನುವಂತೆ ವರ್ತಿಸುತ್ತಾಳೆ.

ತಮ್ಮ ಸ್ವಂತಬದುಕಿನಲ್ಲಿ ಹಾಗೂ ತಮ್ಮ ಸುತ್ತಮುತ್ತಲಲ್ಲಿ ಘಟಿಸುತ್ತಿರುವ ಸಂಗತಿಗಳಿಗೆ ಪ್ರತಿಕ್ರಿಯಿಸದೆ ಮೌನವಾಗಿ ತಲೆಬಾಗುವ ಜನರನ್ನು ಪ್ರಶ್ನಿಸುವ ಪ್ರಯತ್ನಇಲ್ಲಿದೆ. ತನ್ನ ಬದುಕಿನಲ್ಲಿ ದನಿಯೆತ್ತುವ ಹಲವು ಪ್ರಸಂಗಗಳಿದ್ದರೂ ಇತರರಂತೆ ಮೌನದ ಸೆರಗಿನೊಳಗೆ ನುಸುಳುವ ನಾಯಕಿ ಜನಸಾಮಾನ್ಯರ ಪ್ರತೀಕ. ಪ್ರತಿ ಹೆಜ್ಜೆಯಲ್ಲೂ ತನ್ನ ಭಾವನೆಗಳನ್ನು ಅದುಮಿಡುತ್ತಾ ಉಸಿರುಗಟ್ಟುವಂತೆ ಬದುಕುತ್ತಿರುವ ನಾಯಕಿಯು ಮೆಲ್ಲಮೆಲ್ಲನೆ ತನ್ನ ದನಿಯನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಅದ್ಭುತವಾಗಿ ಅಭಿನಯಿಸಿದ ಶ್ರೇಯಸ್ಸು ನಿತ್ಯಾ ಮೆನನ್‌ಅವರದ್ದು.

ಗೌರಿಶಂಕರ್ ಮರಳಿಬಾರನೆಂದು ತಿಳಿದ ಕ್ಷಣದಿಂದ ಅವನ ಹಸ್ತಪ್ರತಿಯನ್ನು ಯಾರ ಕೈಗೂ ನೀಡುವ ವಿಶ್ವಾಸ ಮೂಡದೆ ಅತ್ಯಂತ ಅಮೂಲ್ಯವಾದ ವಸ್ತುವೆನ್ನುವಂತೆ ಎದೆಗಚಿಕೊ೦ಡೇ ಓಡಾಡುತ್ತಾಳೆ. ಗೌರಿ ಶಂಕರನ ಕುರಿತು ಮಾಹಿತಿ ಸಂಗ್ರಹಿಸುತ್ತಾ ಅವನ ಪುಸ್ತಕಗಳನ್ನು ಕೊನೆಗೆ ಹಸ್ತಪ್ರತಿಯನ್ನು ಓದುತ್ತಾ ಅವನ ವೈಚಾರಿಕತೆಯನ್ನು ಅರ್ಥೈಸಿಕೊಂಡು ಪ್ರಭಾವಿತಳಾಗುತ್ತಾ ಹೊಸ ವ್ಯಕ್ತಿಯಾಗಿ ಮಾರ್ಪಾಡುವ ನಿತ್ಯಾಮೆನನ್‌ ಅವರ ಅಭಿನಯ ನಮ್ಮನ್ನು ಆವರಿಸಿಕೊಳ್ಳುತ್ತದೆ. ಗೌರಿಶಂಕರ್‌ನ ಪಾತ್ರದಲ್ಲಿ ದಕ್ಷಿಣದ ಖ್ಯಾತ ನಟ ವಿಜಯ್ ಸೇತುಪತಿ ಅಭಿನಯಿಸಿದ್ದರೂ ಅಮುಖ್ಯವೆನಿಸುವ ಕೆಲವೇ ಕೆಲವು ಸಂಭಾಷಣೆಗಳಲ್ಲಿ ನಿತ್ಯಾ ಮೆನನ್‌ ತಮ್ಮ ಪಾತ್ರದ ಬೆಳವಣಿಗೆಯನ್ನು ಅಭಿನಯದ ಮೂಲಕ ಕಟ್ಟಿಕೊಡುವ ರೀತಿ ಗಮನ ಸೆಳೆಯುತ್ತದೆ.

ಯಾವ ಮಾಧ್ಯಮದ ಪ್ರಭಾವಕ್ಕೂ ಒಳಗಾಗದೆ ನಮ್ಮ ಬದುಕಿನಲ್ಲಿ ನಮ್ಮ ಪರಿಸರದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗ್ರಹಿಸುವ, ಸ್ವತಃ ವಿಶ್ಲೇಷಿಸುವ ಮೂಲಕ ನಮ್ಮ ಬೌಧಿಕತೆ, ನಮ್ಮ ವೈಚಾರಿಕತೆ ವಿಕಸಿತಗೊಳ್ಳಲು ಸಾಧ್ಯ ಎನ್ನುವುದನ್ನು ಯಾವ ಪ್ರತಿಭಟನಾತ್ಮಕ ದೃಶ್ಯ ಅಥವಾ ಸಂಭಾಷಣೆಗಳಿಲ್ಲದೆ ಅತ್ಯಂತ ಸೌಮ್ಯವಾಗಿ ನಿರೂಪಿಸುವ ಕೌಶಲ್ಯವನ್ನು ನಿರ್ದೇಶಕರುತಮ್ಮ ಚೊಚ್ಚಲ ಚಿತ್ರದಲ್ಲಿ ಸಾಧಿಸಿದ್ದಾರೆ. ನಿಧನಿಧಾನವಾಗಿ ನಮ್ಮನ್ನುಆವರಿಸುತ್ತಾಚಿಂತಿಸಲು ಪ್ರೇರೇಪಿಸುವ ಚಿತ್ರ.

‍ಲೇಖಕರು Admin

August 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: