ಹೆಲ್ಲೋ, ನಮಸ್ತೆ ಎಲ್ಲರಿಗೂ,
ಬುಕ್ ರೆಡಿಯಾಯ್ತು, ಇನ್ನು ಕೊಂಡು ಓದುವುದು ನಿಮ್ಮ ಕೆಲಸ. ಕಳೆದ ಮೂರ್ನಾಲ್ಕು ತಿಂಗಳು ಹಗಲು ಇರುಳೆನ್ನದೆ ಹಬ್ಬ ಹುಣ್ಣಿಮೆಯೆನ್ನದೇ ನಿರಂತರ ಶ್ರಮ, ಒತ್ತಡ, ಉದ್ವೇಗ; ಏನೆಲ್ಲ ಹೇಳಬೇಕು ಅನಿಸ್ತಿದೆ, ಸುಸ್ತಾಗಿದೆ!
ಮೊದಲಿಗೆ, ಈಗಾಗಲೇ ಮೂರ್ನಾಲ್ಕು ಮಂದಿ ಓದಿದಾರೆ, ಸಿಕ್ಕಾಪಟ್ಟೆ ಎಗ್ಸೈಟ್ ಆಗಿದಾರೆ. ಒಬ್ಬರಿಗೆ ನಕ್ಕು ನಕ್ಕು ಸುಸ್ತಾಗಿ ಇನ್ನೊಬ್ಬರಿಗೆ ಹೊಟ್ಟೆಕಿಚ್ಚಾಗಿ ಮಗದೊಬ್ಬರಿಗೆ ಇರುಳು ದುಃಸ್ವಪ್ನವಾಗಿ, ಮತ್ತೊಬ್ಬರಿಗೆ ಎರಡನೇ ಸಲ ತಿದ್ದುವಾಗಲೂ ನಗು ಉಕ್ಕಿ…ಹಾಗಂತ ಹೇಳಿದಾರೆ, ಆದ್ದರಿಂದ ಸ್ವಲ್ಪ ಧೈರ್ಯ ಇದೆ.
ಎರಡು- ಕಾದಂಬರಿ ಶುರುವಾಗುವುದೇ ಒಬ್ಬ ಹುಡುಗ ಒಂದು ಹುಡುಗಿ ಎಗ್ಸಿಬಿಶನ್ನಿನಲ್ಲಿ ಭೇಟಿಯಾಗುವ ಮೂಲಕ. ಹುಡುಗ effluent treatment ಮಾಡೆಲ್ ತಗೊಂಡೋಗಿರ್ತಾನೆ. ಇವತ್ತು ದಯಾನಂದ ಸಾಗರ ಪಿಯು ಕಾಲೇಜಿನಲ್ಲಿ ಅಂಥದೇ ಸ್ಪರ್ಧೆಗೆ ನಾನು ಜಡ್ಜ್ ಆಗಿ ಹೋಗಿದ್ದು ಮತ್ತು ಮೊದಲ ಪ್ರೈಜ್ ಅದೇ ಬಗೆಯ ನದಿನೀರನ್ನು ಶುದ್ಧೀಕರಿಸುವ ಮಾಡೆಲ್ ಮಾಡಿದ್ದ ಒಂದು ಹುಡುಗಿ ಗೆದ್ದದ್ದು, ಇವತ್ತೇ ಪುಸ್ತಕ ಹೊರಬರುತ್ತಿರುವುದು- ಏನು ಕಾಕತಾಳೀಯ ಅಂತೀರಿ!
ಮೂರು- ಎರಡು ವರ್ಷಗಳ ಹಿಂದೆ ಇದೇ ನವೆಂಬರಿನ ಇಪ್ಪತ್ತನಾಲ್ಕು ಇಪ್ಪತ್ತೈದರಂದು ‘ಫೀಫೋ’ ಬಿಡುಗಡೆಯಾಗಿದ್ದು, ಕೋಯಿನ್ಸಿಡೆನ್ಸು!
ನಾಲ್ಕು ಮತ್ತು ಬಹುಮುಖ್ಯ- ಕಳೆದ ಅಕ್ಟೋಬರ್ ಅಂತ್ಯಕ್ಕೆ ಇಪತ್ತೈದು ವರುಷಗಳ ಹಿಂದೆ ನಮ್ಮ ಸೀಮೆಯಲ್ಲಿ ಒಂದು ವಿದ್ಯಮಾನ ಜರುಗಿತು. ಅದು ಕಾದಂಬರಿಯಲ್ಲಿ ಮುಖ್ಯಪಾತ್ರವಾಗಿ ಬಂದಿದೆ. ನಾ ಯೊಚಿಸ್ತಿದೇನೆ ಹದಿನೆಂಟು ಇರಬಹುದಿತ್ತು ಇಪ್ಪತ್ಮೂರು ಇರಬಹುದಿತ್ತು. ಇಪ್ಪತ್ತೈದೇ ಯಾಕೆ? ಎಲ್ಲವೂ ಹೇಗೆ ಕೂಡಿಬಂದಿದೆಯಲ್ಲ ಅಂತ!
ಐದು- ಐದಾರು ವರುಷಗಳ ಹಿಂದೆ ಕವಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ತಮ್ಮ ಸ್ಕೂಲಿನಲ್ಲಿ ಒಂದು ಕವನಸ್ಪರ್ಧೆ ಏರ್ಪಡಿಸಿ ಅಲ್ಲಿಗೂ ಜಡ್ಜಾಗಿ ಕರೆದಿದ್ದರು. ಆಗೊಂದು ಕವನ ಕಣ್ಣಿಗೆ ಬಿದ್ದಿದ್ದು ಸೇವ್ ಮಾಡಿಕೊಂಡಿದ್ದೆ. ಒಂಭತ್ತನೇ ತರಗತಿ ಹುಡುಗಿ ಬರೆದಿತ್ತು. ಈ ಕಾದಂಬರಿ ಅಂತ್ಯವನ್ನು ತಿದ್ದಿ ತಿದ್ದಿ ತೃಪ್ತಿಯಾಗದೇ ಒದ್ದಾಡುತ್ತಿರುವಾಗ ಆ ಕವನ ಎಫ್ ಬಿ ರಿಮೈಂಡರಿನಲ್ಲಿ ಬಂತು. ಟಕ್ ಅಂತ ಬಲ್ಬು ಹತ್ತಿಕೊಳ್ತು! ಜಗತ್ತು ಕೈಹಿಡಿದು ನಡೆಸುವ ಬಗ್ಗೆ ಅಚ್ಛರಿಯಾಗುತ್ತದೆ.
ಆರು… ಏಳು… ಎಷ್ಟೊಂದಿದೆ. ನಿಲ್ಲಿಸುವೆ.
ಮುಖ್ಯವಾಗಿ ಪುಸ್ತಕ ನನಗೆ ಬೇಕಾದ ಹಾಗೆ ಬರಬೇಕೆಂಬ ಏಕೈಕ ಹಂಬಲದಿಂದ ನಾನೇ ಪ್ರಕಟಿಸುವ ನಿರ್ಧಾರ ಮಾಡಿದ್ದು. ಇವರೇ ಚಿತ್ರ ಬರಿಬೇಕು ಇವರೇ ತಿದ್ದಬೇಕು ಅಂತೆಲ್ಲ. ನಾನೇ ಮಿಡ್ ಜರ್ನಿ ಎಐ ಬಳಸಿ ಎರಡೂ ಕಡೆಯ ಕವರ್ ತಯಾರಿಸಿದ್ದು. ನನ್ನ ಜೊತೆ ಅವರೆಲ್ಲರಿಗೂ ಸಾಕಷ್ಟು ಹಿಂಸೆ ಕೊಟ್ಟು ಕೆಲಸ ಮಾಡಿಸಿಕೊಂಡಿದ್ದೇನೆ ಪಾಪ.
ಅಮೆಜಾನ್, ಫ್ಲಿಫ್ ಕಾರ್ಟ್, ವಾಟ್ಸಾಪ್ ಮೂರು ಬಾಗಿಲುಗಳನ್ನು ತೆರೆಯಲಾಗಿದೆ. ಯಾವುದರ ಮೂಲಕವಾದರೂ ಕೊಳ್ಳಬಹುದು.
ಓದಿ, ಇಷ್ಟವಾದಲ್ಲಿ ನಾಲ್ಕು ಜನರಿಗೆ ಒಳ್ಳೆ ಮಾತು ಹಂಚಿ, ಓದಿಸಿರಿ. ಅಮೆಜಾನ್, ಗೂಡ್ ರೀಡ್ಸ್ , ಸೋಶಿಯಲ್ ಮಿಡಿಯಾ ನಿಮಗೆ ಅನುಕೂಲವಾದ ಕಡೆ ರೇಟಿಂಗ್ ಮಾಡಿ.
-ಮಧು ವೈ ಎನ್
https://dl.flipkart.com/s/FALE01uuuN
0 ಪ್ರತಿಕ್ರಿಯೆಗಳು