ಮಣಿ ಮೇಷ್ಟ್ರ ನೆನಪಿನಲ್ಲಿ

ಗಣಪತಿ ಅಗ್ನಿಹೋತ್ರಿ

“ಮಣಿ ಮೇಷ್ಟ್ರೇ ನೀವು ಇನ್ನಷ್ಟು ದಿನ ಇರಬೇಕಿತ್ತು. ಇನ್ನಷ್ಟು ಕಲಾಕೃತಿಗಳು ನಿಮ್ಮಿಂದ ಈ ನೆಲಕ್ಕೆ ಸಿಗಬೇಕಿತ್ತು”

ಹೀಗೆ ಖ್ಯಾತ ಕಲಾವಿದ ಜೆ.ಎಂ.ಎಸ್ ಮಣಿ ಅವರನ್ನು ನೆನಪಿಸಿಕೊಳ್ಳುವವರು ಅನೇಕರಿದ್ದಾರೆ. ಕಾರಣ ಅವರ ಆತ್ಮೀಯತೆ.

“ಮಣಿ ಸರ್ ಮತ್ತೆ ಮತ್ತೆ ನೆನಪಾಗುತ್ತಾರೆ. ಮನದೊಳಗೇ ಬಂದು ಕಾಡುತ್ತಾರೆ” ಎಂದು ಅನೇಕ ಸ್ನೇಹಿತರು ಸ್ಮರಿಸುವಾಗ ಅವರ ಕಲಾಕೃತಿಗಳು ಕಣ್ಮುಂದೆ ನಿಲ್ಲುತ್ತವೆ. ಬಾದಾಮಿ ಸರಣಿಯ ಕಲಾಕೃತಿಗಳು ಒಂದು ಬಗೆಯದ್ದಾದರೆ, ಅದರಾಚೆಗಿನ ಕಲಾಕೃತಿಗಳು ನೂರೆಂಟು. ಕಲಾವಿದನ ಪ್ರಯೋಗಶೀಲ ಮನಸ್ಸು ಹೇಗೆಲ್ಲ ಕೆಲಸ ಮಾಡಿಸುತ್ತವೆ ಎನ್ನುವುದಕ್ಕೆ ಜೆ.ಎಂ.ಎಸ್. ಮಣಿ ಅವರು ಒಂದು ಅದ್ಭುತ ನಿದರ್ಶನ. ಇದು ಗುಣಗಾನವಲ್ಲ, ವಾಸ್ತವ!

2021, June 2ರಂದು ಮಣಿ ಮೇಷ್ಟ್ರು ಇಹಲೋಕ ತ್ಯಜಿಸಿದಾಗ ಅವರು ‘ನಮ್ಮ ಮೇಷ್ಟ್ರು’ ಎಂದು ಹೇಳಿಕೊಂಡವರು ನೂರಾರು. ಹಾಗೇ, ನಾನು ಮಣಿ ಮೇಷ್ಟ್ರ ಶಿಷ್ಯ ಎಂದು ಹೇಳಿಕೊಳ್ಳುವವರು ನೂರಾರು. ಮೇಷ್ಟ್ರನ್ನು ತಮ್ಮ ಹೃದಯದಲ್ಲಿ ಇರಿಸಿಕೊಂಡವರೂ ಅನೇಕರಿದ್ದಾರೆ. ಮಣಿ ಮೇಷ್ಟ್ರ ಹೆಸರು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಇವೆಲ್ಲದರ ನಡುವೆ ನೇರ ಶಿಷ್ಯರಲ್ಲದ ನಮ್ಮಂತವರಿಗೂ ಅವರು ಗುರುವಾಗಿದ್ದಾರೆ.

ಮಣಿ ಸರ್ ಇಂದಿಗೂ ನಮ್ಮೊಂದಿಗೆ ಇಲ್ಲ ಅನಿಸುವುದೇ ಇಲ್ಲ. ಕಾರಣ ಅವರ ಒಂದೊಂದು ಕಲಾಕೃತಿಯೂ ಅಷ್ಟು ಜೀವಂತವಾಗಿ ಕಣ್ಮುಂದೆ ಬಂದು ನಿಲ್ಲುತ್ತವೆ. ನಮ್ಮನ್ನು ಬಡಿದೆಚ್ಚರಿಸುತ್ತವೆ. ಇದೀಗ ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶವನ್ನು ಕಿಂಕಿಣಿ ಗ್ಯಾಲರಿ ಒದಗಿಸಿದೆ. ಮಣಿ ಅವರ ಜೀವಮಾನ ಸಾಧನೆಯ ಹಿನ್ನೋಟವನ್ನು ಕಲಾಕೃತಿಗಳ ಮೂಲಕ ಸ್ಮರಿಸುವ “Retroactive” ಕಲಾಪ್ರದರ್ಶನವನ್ನು ‘ಕಿಂಕಿಣಿ’ ಆಯೋಜಿಸಿದೆ. ಈ ಕಲಾಪ್ರದರ್ಶನ ಜೂನ್ 30ರ ತನಕ ಇರಲಿದೆ.

ಮಣಿ ಎಂದಾಕ್ಷಣ ಬಾದಾಮಿ ಸರಣಿಯ ಕಲಾಕೃತಿಗಳಲ್ಲಿ ಕಾಣಿಸುವ ಹೆಣ್ಮಗಳು, ಬಾಳೆಗೊನೆ ನೆನಪಿಸಿಕೊಳ್ಳದವರಿಲ್ಲ. ಅಷ್ಟೊಂದು Popular series works ಅವು. ಆದರೆ, ಈ ಪ್ರದರ್ಶನ ಅದರಾಚೆಗಿನ ಜೆ.ಎಂ.ಎಸ್ ಮಣಿ ಅವರನ್ನು ತೋರಿಸುವ ಪ್ರಯತ್ನವಾಗಿದೆ.

ಕಲಾಕೃತಿಗಳ ರಚನೆಯ ಪ್ರಕ್ರಿಯೆಯಲ್ಲಿ ಅವರ ಪ್ರಯೋಗಶೀಲತೆ ಎಷ್ಟೆನ್ನುವುದಕ್ಕೆ ಈ ಪ್ರದರ್ಶನದಲ್ಲಿರುವ ವಿಭಿನ್ನ ಶೈಲಿಯ, ಭಿನ್ನ ಪ್ರಕಾರದ ಕಲಾಕೃತಿಗಳು ಸಾಕ್ಷಿ. ಅಮೂರ್ತ ಪ್ರಕಾರದ ಕಲಾಕೃತಿಗಳು, ಅದರೊಳಗಿನ ಮೈವಳಿಕೆ, ಬಳಸಿಕೊಂಡ ಮಾಧ್ಯಮ, ಚಿಂತನೆಗಳು ಹೊಸದೊಂದು ಲೋಕದಲ್ಲಿ ವಿಹರಿಸಿ ಬರುವಂತೆ ಮಾಡುತ್ತವೆ. ಆಳಕ್ಕಿಳಿದವರಿಗೆ ಗೊತ್ತು ಎನ್ನುವಂತೆ ಮಣಿ ಅವರ ಕಲಾಕೃತಿಗಳಲ್ಲಿನ ಸೌಂದರ್ಯ ಪ್ರಜ್ಞೆ ಎಂಥವರನ್ನೂ ಅರೆಕ್ಷಣ ಹಿಡಿದು ನಿಲ್ಲಿಸುತ್ತವೆ.

ಮಣಿ ಅವರು ಮುದ್ರಣಕಲೆಯಲ್ಲಿ (printmaking), ಲೋಹ ಶಿಲ್ಪ ರಚನೆಯಲ್ಲಿಯೂ ಅತ್ಯಂತ ಹಿಡಿತ ಸಾಧಿಸಿದ ಕಲಾವಿದರಾಗಿದ್ದರು. ಅವರ etching ಕಲಾಕೃತಿಗಳು, ಲೋಹ ಶಿಲ್ಪಗಳೂ ಈ ಪ್ರದರ್ಶನದಲ್ಲಿವೆ.

Friends, ಈ ಕಲಾಪ್ರದರ್ಶನ ತಿಂಗಳಾಂತ್ಯದ ತನಕ ನಡೆಯಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

‍ಲೇಖಕರು avadhi

June 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This