**
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ಈಗಾಗಲೇ ರಾಜ್ಯದ 8 ಜಿಲ್ಲೆಗಳಿಗೆ ವಿತರಿಸಿರುವಂತೆ ಈ ವರ್ಷ 2024 ನೇ ಅಕ್ಟೋಬರ್ 5 ರಂದು ಚಿತ್ರದುರ್ಗ ಜಿಲ್ಲೆಯ ಆಯ್ದ ಒಂದು ನೂರು ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಉಪಯುಕ್ತವಾದ ಒಂದು ನೂರು ಪುಸ್ತಕಗಳನ್ನು ಪ್ರತಿ ಶಾಲೆಗೆ ‘ನೂರು ಶಾಲೆಗಳಿಗೆ ನೂರು ಪುಸ್ತಕ’ ಯೋಜನೆಯಡಿಯಲ್ಲಿ ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಿ ಪುಸ್ತಕ ಪ್ರೀತಿಯನ್ನು ಮಕ್ಕಳಲ್ಲಿ ಹುಟ್ಟುಹಾಕುವ ಸಲುವಾಗಿ ಒಟ್ಟು 10,000 ಉಪಯುಕ್ತ ಮಕ್ಕಳ ಪುಸ್ತಕಗಳನ್ನು ದಾನಿಗಳಿಂದ ಸಂಗ್ರಹಿಸಬೇಕಾಗಿದೆ.
ಪ್ರಾಥಮಿಕ ಶಾಲಾ ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಕ್ಕಳ ಪುಸ್ತಕಗಳನ್ನು – ಬರಹಗಾರರು, ಪ್ರಕಾಶಕರು, ಸಂಘ ಸಂಸ್ಥೆಗಳು, ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ವಿಶ್ವವಿದ್ಯಾಲಯದ ಪ್ರಸಾರಾಂಗ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಸಕ್ತ ದಾನಿಗಳು ಉದಾರವಾಗಿ ಉಚಿತವಾಗಿ ನೀಡುವ ಮೂಲಕ ಈ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕಾಗಿ ಕೋರುತ್ತಾ, ಕೆಳಕಂಡ ವಿಳಾಸಕ್ಕೆ 1 ಶೀರ್ಷಿಕೆಯ 100 ಪ್ರತಿಗಳಂತೆ ಹೆಚ್ಚು ಹೆಚ್ಚು ಶೀರ್ಷಿಕೆಗಳ, ಮೌಲ್ಯಯುತ ಪುಸ್ತಕಗಳನ್ನು ಕಳುಹಿಸಲು ಕೋರಲಾಗಿದೆ. ದೂರವಾಣಿ ಮುಖೇನ ತಿಳಿಸಿದರೆ ಸಂಘದ ಪ್ರತಿನಿಧಿಗಳು ಆಗಮಿಸಿ ತಮ್ಮಿಂದ ಪುಸ್ತಕಗಳನ್ನು ಸ್ವೀಕರಿಸುತ್ತಾರೆ.
ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ.
ಶ್ರೀ ಆರ್ ದೊಡ್ಡೇಗೌಡ, ಕಾರ್ಯದರ್ಶಿ, ಶ್ರೀ ನಿಡಸಾಲೆ ಪಿ ವಿಜಯ್, ಸಾಹಿತ್ಯ ಸುಗ್ಗಿ, ನಂ 40, 3 ನೇ ಬ್ಲಾಕ್ , 2 ನೇ ಸ್ಟೇಜ್, ನಾಗರಭಾವಿ, ಬೆಂಗಳೂರು – 560072. ಮೊಬೈಲ್ ಸಂಖ್ಯೆ: 9448753991 / 9886249672 / 9731135044 / 9945939436 / 9886399125 ಇವರನ್ನು ಸಂಪರ್ಕಿಸಿ.
0 ಪ್ರತಿಕ್ರಿಯೆಗಳು