ಭಾಗ್ಯ ಸಿ ಎಚ್ ಓದಿದ ಪ್ಯಾಲೆಸ್ಟೀನ್ ಕವಿತೆಗಳು

ಭಾಗ್ಯ ಸಿ ಎಚ್

**

ಖ್ಯಾತ ಕವಿ ವಸಂತ ಬನ್ನಾಡಿ ಅವರ ಹೊಸ ಕೃತಿ ‘ಪ್ಯಾಲೆಸ್ಟೀನ್ ಕವಿತೆಗಳು’.

ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿ ಓದಿ ಲೇಖಕಿ ಸಿ ಎಚ್ ಭಾಗ್ಯ ಅವರು ಬರೆದ ಅನಿಸಿಕೆ ಇಲ್ಲಿದೆ.

**

ನಮಸ್ತೆ, ನೀವು ವಿಶ್ವಾಸದಿಂದ ಕಳುಹಿಸಿದ ಪ್ಯಾಲೆಸ್ಟೀನ್ ಕವಿತೆಗಳು ತಲುಪಿತು. ಅರ್ಧ ಗ್ಲೋಬಿನ ತುಂಬಾ ಮತಾಂಧರು, ಹಣಬಾಕರು ತುಂಬಿ ತುಳುಕುತ್ತಿರುವಾಗ ಪ್ಯಾಲೆಸ್ಟೀನ್, ಉಕ್ರೇನ್ ನ ನರಳಾಟವನ್ನು ಕೇಳಿಸಿಕೊಳ್ಳುವ, ಅದಕ್ಕೆ ಮಾತು ಕೊಡುವ ಮನುಷ್ಯ ಹೃದಯ ಎಷ್ಟು ಜನರಿಗಿದೆ? ರಾಮ, ಹನುಮ ಒಂದು ಕಡೆ ಉನ್ಮತ್ತರನ್ನಾಗಿಸುತ್ತಿದ್ದರೆ, ಶಸ್ತ್ರಗಳ ವ್ಯಾಪಾರಿಗೆ ದೇಶ ದೇಶಗಳಿಗೆ ಯುದ್ಧದ ಅಮಲೇರಿಸಿ ಅಟ್ಟಹಾಸ ಮಾಡುವ ಅಮಾನುಷ ಚೇಷ್ಟೆ ಮತ್ತೊಂದು ಕಡೆ.ಇನ್ನು ಬಹಳಷ್ಟು ‘ಸಂವೇದನಾಶೀಲರು’ ಅಧಿಕಾರ, ಹಾರ ತುರಾಯಿಗಳ ಅಧೀನ. ಹಿಟ್ಲರನ ಅಮಾನುಷ ಹತ್ಯಾಕಾಂಡದ ಬಲಿಪಶುಗಳಾಗಿದ್ದವರ ಸಂತತಿ ಈ ಹೊತ್ತು ತಮ್ಮ ಗತವನ್ನು ಮರೆತು ತೊಡೆತಟ್ಟಿ ನಿಂತಿದ್ದಾರೆ.

ಉಕ್ರೇನ್ ಎಂಬ ದೇಶ ಇತ್ತೆ!? ಎನಿಸಿದರು ಅಚ್ಚರಿಯಿಲ್ಲ. ಇಂಥ ಚಡಪಡಿಕೆಯ ಸಂದರ್ಭದಲ್ಲಿ ನೀವು ಫೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡುತ್ತಿದ್ದ ಪ್ಯಾಲೇಸ್ಟೀನ್ ಕವಿತೆಗಳು ನನ್ನದೇ ತಲ್ಲಣಗಳಿಗೆ ಮಾತು ಸಿಕ್ಕಂತೆನಿಸುತ್ತಿದ್ದವು. ಒಂದೊಂದು ಕವನಗಳೂ ಮನುಷ್ಯನ ಅಮಾನುಷತೆಗೆ ಅಕ್ಷರ ಸಾಕ್ಷಿಗಳಾಗಿವೆ. ಶತಮಾನಗಳಿಂದ ಇಲ್ಲಿನವರನ್ನು ಭಯಗೊಳಿಸಿ ಮಂದಿರ ಕಟ್ಟಿದವರು ಇಲ್ಲಿಂದ ಅಬುದಾಬಿಗೆ ವಲಸೆ ಹೋಗಿ ಅಲ್ಲಿ ಮಂದಿರ ಕಟ್ಟಿದ್ದನ್ನು ನೋಡಿ ಒಂದು ತಿಂಗಳ ಅವಧಿಯೂ ಆಗದೆ ಕೇಕೆ ಹಾಕಿದ್ದನ್ನು ನೋಡಿದಾಗ ಇವರಿಗೆ ಅಮ್ನೀಸಿಯಾ ಕವಿದಿದೆಯಾ ಅನಿಸುತ್ತೆ. ಹೃದಯ ಹಿಂಡುವ, ಪ್ಯಾಲೆಸ್ಟೀನ್ ಕವನಗಳನ್ನು ಒಂದಿಷ್ಟು ಯುವ ಮನಸ್ಸುಗಳಿಗಾದರೂ ಓದಿಸುವ ಅನ್ನಿಸಿದೆ.

ನಮಸ್ಕಾರ. ಧನ್ಯವಾದಗಳು.

‍ಲೇಖಕರು Admin MM

March 28, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: