ಬೋನಸ್ ಶೇರು ಮತ್ತು ಶೇರು ವಿಭಜನೆ

-ಜಯದೇವ ಪ್ರಸಾದ ಮೊಳೆಯಾರ -ಕಾಸು ಕುಡಿಕೆ 38 The superior man understands what is right; the inferior man understands what will sell. . . . . . . Confucius ಶ್ರೇಷ್ಠನಿಗೆ ಯಾವುದು ಸರಿ ಎಂಬುದು ಗೊತ್ತಾಗುತ್ತದೆ; ಅಧಮನಿಗೆ ಯಾವುದು ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ. . . . . ಕನ್ಫ್ಯೂಶಿಯಸ್. ಒಂದು ಉದ್ಯಮ ಆರಂಭಿಸಲು ಕಾಪಿಟಲ್ ಅಥವ ಮೂಲಧನ ಬೇಕು ತಾನೆ? ಅದನ್ನು ಶೇರು ಕಾಪಿಟಲ್ ಎಂದು ಕರೆಯುತ್ತಾರೆ. ಉದಾಹರಣೆಗೆ, ಡಿ.ಪಿ. ರಂಗ್ ಎಂಬ ಒಬ್ಬ ಮುಂಬೈ ಕಾ ಸೇಟ್ 100 ಕೋಟಿ ರೂಪಾಯಿಗಳ ಶೇರು ಕಾಪಿಟಲ್ ಅನ್ನು ಹಾಕಿ ದೋಂಡುರಂಗ್ ಪಾಂಡುರಂಗ್ ಐನ್ಡ್ ಸನ್ಸ್ ಎಂಬ ಒಂದು ಕಂಪೆನಿಯನ್ನುಹುಟ್ಟುಹಾಕುತ್ತಾನೆ.  ಅವಾಗ ಆತನ ಬ್ಯಾಲನ್ಸ್ ಶೀಟಿನಲ್ಲಿ ಶೇರು ಕಾಪಿಟಲ್ = 100 ಕೋಟಿ ಎಂದು ನಮೂದಿಸಲಾಗುತ್ತದೆ.

ಡಿ.ಪಿ.ರಂಗ್ ಎಂಬ ಈ ಹೊಲಿಗೆ ಉದ್ಯಮದ ಕಿಂಗ್ ಜನರಿಗೆ ಥರ ಥರವಾದ ಧಿರಿಸುಗಳನ್ನು ಹೊಲಿಯುತ್ತಾನೆ- ಅಂಗಿ,ಚಡ್ಡಿ ಪ್ಯಾಂಟ್, ಶಟರ್್, ಸಲ್ವಾರ್, ಚೂಡಿದಾರ್, ಟೋಪಿ ಇತ್ಯಾದಿ. ಆತನಿಗೆ ಟೋಪಿ ಉದ್ಯಮದಲ್ಲಿ ಭಾರೀ ಲಾಭ ಬಂದ ಕಾರಣ ವಷರ್ಾಂತ್ಯಕ್ಕೆ ಆತನ ಕಂಪೆನಿಯು 30 ಕೋಟಿ ಲಾಭ ಗಳಿಸುತ್ತದೆ ಎಂದಿಟ್ಟುಕೊಳ್ಳಿ. ಅದರಲ್ಲಿ 5 ಕೋಟಿ ರೂಗಳನ್ನು ಡಿವಿಡೆಂಡ್ ಆಗಿ ಹಂಚಿ ಉಳಿದ 25 ಕೋಟಿಗಳನ್ನು ಬಿಸಿನೆಸ್ ವಿಸ್ತರಿಸುವ ಉದ್ಧೇಶದಿಂದ ಹೊಸದಾದ ಒಂದು ಮಕ್ಮಲ್ ಟೋಪಿ ಹೊಲಿಯುವ ಉದ್ಯಮದಲ್ಲಿ ತೊಡಗಿಸುತ್ತಾನೆ. ಈ ರೀತಿ 25 ಕೋಟಿಯನ್ನು ಬಿಸಿನೆಸ್ನಲ್ಲಿಯೇ ಮರುಹೂಡಿದಾಗ ಆತನ ಬ್ಯಾಲನ್ಸ್ ಶೀಟ್ ಈ ರೀತಿ ಕಾಣಿಸುತ್ತದೆ: ಶೇರ್ ಕಾಪಿಟಲ್ 100 ಕೋಟಿ ರಿಸವ್ಸರ್್ 25 ಕೋಟಿ ಒಟ್ಟು ಇಕ್ವಿಟಿ 125 ಕೋಟಿ 25 ಕೋಟಿ ಲಾಭವನ್ನು ರಿಸವ್ಸರ್್ ಅಥವ ರಿಟೈನ್ಡ್ ಅನರ್ಿಂಗ್ಸ್ ಎಂಬ ಹಣೆಪಟ್ಟಿಯಡಿ ಹಾಕುತ್ತಾರೆ. ಹಾಗಾಗಿ ಆತನ ಟೋಟಲ್ ಇಕ್ವಿಟಿ 100 ರಿಂದ 125 ಕೋಟಿಗೆ ಏರುತ್ತದೆ. ಅದೇ ರೀತಿ ಮರುವರುಷ 45 ಕೋಟಿ ಲಾಭ ಪಡೆದು ಅದರಲ್ಲಿ 20 ಕೋಟಿ ಡಿವಿಡೆಂಡ್ ಹಂಚಿ ಉಳಿದ 25 ಕೋಟಿಯನ್ನು ರಿಸವ್ಸರ್್ಗೆ ಸೇರಿಸುತ್ತಾನೆ. ಈಗ ಬ್ಯಾಲನ್ಸ್ ಶೀಟಿನ ಸ್ವರೂಪ ಈ ರೀತಿ: ಶೇರ್ ಕಾಪಿಟಲ್ 100 ಕೋಟಿ ರಿಸವ್ಸರ್್ 50 ಒಟ್ಟು ಇಕ್ವಿಟಿ 150 ಈ ಟೋಪಿ ಕಂಪೆನಿಯ ಲಾಭ ಈಗ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತದೆ. ಹಾಗೆ, ಮುಂದಿನ ವರ್ಷ 75 ಕೋಟಿ ಲಾಭ ಪಡೆದು ಅದರಲ್ಲಿ 25 ಕೋಟಿ ಡಿವಿಡೆಂಡ್ ನೀಡಿ ಉಳಿದ 50 ಕೋಟಿಯನ್ನು ರಿಸವರ್್ ಅಕೌಂಟಿಗೆ ಸೇರಿಸುತ್ತಾರೆ. ಈಗ ಬ್ಯಾಲನ್ಸ್ ಶೀಟ್ ಈ ರೀತಿ: ಶೇರ್ ಕಾಪಿಟಲ್ 100 ಕೋಟಿ ಕೋಟಿ ರಿಸವ್ಸರ್್ 100 ಕೋಟಿ ಒಟ್ಟು ಇಕ್ವಿಟಿ 200 ಕೋಟಿ. ಈ ಸಂದರ್ಭದಲ್ಲಿ ಸೀನಿಗೆ ಡಿ.ಪಿ.ರಂಗ್ ಐನ್ಡ್ ಸನ್ಸ್ನ ಸನ್ ಎಂಟ್ರಿ ಹೊಡೆಯುತ್ತಾನೆ. ಗ್ರಾಜುಯೇಶನ್ ಮುಗಿಸಿ ಬಂದ ಮಗರಾಯ ಅಪ್ಪನ ಬಿಸಿನೆಸ್ ಉದ್ಧಾರಕ್ಕೆ ಕೈಹಾಕುತ್ತಾನೆ. ಆತ ಬಂದಾಕ್ಷಣ ಮೊತ್ತಮೊದಲನೆಯದಾಗಿ ಕಂಪೆನಿ ಶೇರುಗಳಿಗೆ ಒಂದಕ್ಕೊಂದು (1:1) ಬೋನಸ್ ಅನೌನ್ಸ್ ಮಾಡುತ್ತಾನೆ. ಕೇವಲ ಡಿವೆಡೆಂಡ್ ಮಾತ್ರ ಪಡೆಯುತ್ತಿದ್ದ ಶೇರುಹೋಲ್ದರುಗಳು  ಹೀಗೆ ಅಚಾನಕ್ಕಾಗಿ ಬಂದ ಬೋನಸ್ ಶೇರುಗಳಿಂದ ಆನಂದತುಂದಿಲರಾಗುತ್ತಾರೆ. ಮೊದಲು ಒಂದೊಂದು ಶೇರುಗಳಿದ್ದವರ ಕೈಯಲ್ಲಿ ಈಗ ಎರಡೆರಡು ಶೇರುಗಳು. ಆಹಾ! ಏನ್ ಲಾಭ, ಏನ್ ಕತೆ? ಶೇರುದಾರರಿಗೆ ಖುಶಿಯೋ ಖುಶಿ. ಸಂತೋಷದಿಂದ ಮಗೆ ಬಿಸರ್ೆ ಅಂತ ಮಗನನ್ನು ಹೊಗಳಿ ಕೊಂಡಾಡುತ್ತಾರೆ. ಆದರೆ ಈ ಬಿರ್ಸ ಮಗೆ ಬೋನಸ್ ಅನೌನ್ಸ್ ಮಾಡಿದ ಬಳಿಕ ಕಂಪೆನಿಯ ಬ್ಯಾಲನ್ಸ್ ಶೀಟ್ನ ಅವಸ್ಥೆ ಏನಾಗಿದೆ ಎಂದು ಒಮ್ಮೆ ಇಣುಕಿ ನೋಡೋಣ: ಶೇರ್ ಕಾಪಿಟಲ್ 200 ಕೋಟಿ ರಿಸವ್ಸರ್್ 0 ಒಟ್ಟು ಇಕ್ವಿಟಿ 200 ಕೋಟಿ. ಅಂದರೆ, ರಿಸವ್ಸರ್್ನಿಂದ ದುಡ್ಡನ್ನು ಸ್ಥಳಾಂತರಿಸಿ ಶೇರ್ ಕಾಪಿಟಲ್ ಅನ್ನು ಜಾಸ್ತಿ ಮಾಡಲಾಗಿದೆ. ಆದರೆ ಒಟ್ಟು ಇಕ್ವಿಟಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೂಡಿಕೆದಾರರ ಕೈಯಲ್ಲಿ ಒಂದಕ್ಕೆ ಡಬ್ಬಲ್ ಶೇರುಗಳನ್ನು ಇರಿಸಿದರೂ ಒಟ್ಟು ಮೊತ್ತದಲ್ಲಿ ವ್ಯತ್ಯಾಸವಿಲ್ಲದ ಕಾರಣ ಪ್ರತಿಯೊಂದು ಶೇರಿನ ಬೆಲೆಯೂ ಈಗ ಅರ್ಧಕ್ಕರ್ಧ. ಬಿರ್ಸನಾದ ಮಗ ಮಾಡಿದ್ದು ಬರೇ ಒಂದು ಅಕೌಂಟಿಂಗ್ ಅಜಸ್ಟ್ಮೆಂಟ್ ಮಾತ್ರ – ನೂರು ರುಪಾಯಿ ನೋಟಿನ ಬದಲು ಐವತ್ತರ ಎರಡು ನೋಟುಗಳನ್ನು ನಮ್ಮ ಕೈಯಲ್ಲಿ ಇರಿಸಿದ್ದು! ಈ ರೀತಿಯ ಬೋನಸ್ ನೀಡುವುದು ಶೇರು ಮಾರುಕಟ್ಟೆಯ ಒಂದು ಕಾಲದಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಬೋನಸ್ ನ್ಯೂಸಿಗೆ ಶೀಘ್ರದಲ್ಲೇ ಕರುಹಾಕಲಿರುವ ಗಬ್ಬದ ಎಮ್ಮೆಯಂತೆ ಶೇರಿನ ಬೆಲೆಯೇರುತ್ತಿತ್ತು. 1:1 ಬೋನಸ್ಸಿಗೆ ಶೇರು ಬೆಲೆ ಬಹುತೇಕ ಡಬಲ್ ಆಗುತ್ತಿತ್ತು. ಶೇರು ವಿಜ್ಞಾನದ ಲೆಕ್ಕಾಚಾರ ತಿಳಿಯದ ಜನರು ಬೋನಸ್ ಶೇರುಗಳನ್ನು ಉಚಿತವೆಂದು ತಿಳಿದು ಅದರ ಹಿಂದೆ ಮುಗಿಬೀಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸಾಂಸ್ಥಿಕ ಹೂಡಿಕೆದಾರರೇ ಮೇಲುಗೈ ಆಗಿರುವ ಈಗಿನ ಮಾರುಕಟ್ಟೆಯಲ್ಲಿ ಬೋನಸ್ ಶೇರಿನ ನಿಜವಾದ ಅರ್ಥ ಮಾರುಕಟ್ಟೆಗೆ ಆಗಿದೆ. ಬರೇ ಬೋನಸ್ ನೀಡುವುದರಿಂದ ವಾಸ್ತವದಲ್ಲಿ ಶೇರು ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಾಗಲಾರದು- ಹಾಗೆ ಆಗುತ್ತದೆ ಎಂದಿದ್ದಲ್ಲಿ ಪ್ರತೀ ಕಂಪೆನಿಯೂ ತನ್ನ ಫಾಕ್ಟರಿಗಳಲ್ಲಿ ಪ್ರೊಡಕ್ಷನ್ ನಿಲ್ಲಿಸಿ ಪ್ರತೀ ದಿನಾ ಬೆಳಗ್ಗೆ ಎದ್ದು ಬೋನಸ್ ಡಿಕ್ಲಾರ್ ಮಾಡುತ್ತಾ ಕುಳಿತರೆ ಸಾಕಲ್ಲವೇ? ಹಾಗಾಗಿ ಈಗೀಗ ಬೋನಸ್ ಘೋಷಣೆಯೊಂದಿಗೆ ಶೇರು ಬೆಲೆ ಹೆಚ್ಚಳವಾಗುವುದಿಲ್ಲ. ಯಾವುದೇ ಈ ಅಥವ ಆ ಗಳು ಶೇರು ಮೌಲ್ಯಮಾಪನದಲ್ಲಿ ಬೋನಸ್ ನೀಡಿಕೆಗೆ ಕಾಸಿನ ಮಹತ್ವ ಕೊಡುವುದಿಲ್ಲ. ಆದರೂ ಇಂತಹ ಸಮಯಗಳನ್ನು ಬೋನಸ್ ಅನೌನ್ಸ್ ಆದ ತಕ್ಷಣ ಕೆಲವು ಶೇರುಗಳ ಬೆಲೆಗಳು ಯದ್ವಾತದ್ವಾ ಏರತೊಡಗುವುದನ್ನು ಕಾಣಬಹುದು. ಇದಕ್ಕೆ ಯಾವುದೇ ಲಾಜಿಕ್ ಇಲ್ಲ ಎಂಬುದನ್ನು ಈಗಾಗಲೇ ನೀವು ನೋಡಿದ್ದೀರಿ. ಆದರೂ ಕೆಲವೊಮ್ಮೆ ಇದು ನಡೆಯುವುದಂತೂ ಸತ್ಯ. ಇಂತಹ ಸಂದರ್ಭಗಳಲ್ಲಿ ಶೇರುಗಳ ಬೆಲೆಯೇರಿಕೆಗೆ ಬೇರೆ ಏನಾದರೂ ಬೋನಸ್ಸೇತರ ಕಾರಣಗಳಿವೇ ನೋಡಿಕೊಳ್ಳಿ. ಉದಾ: ಇಡೀ ಮಾರುಕಟ್ಟೆಯಲ್ಲಿ ಏರಿಕೆ ಅಥವ ಕಂಪೆನಿಯ ಬಗ್ಗೆ ಬೇರೇನಾದರು ಸಿಹಿಸಿದ್ದಿ, ಇತ್ಯಾದಿ. ಅಂತದ್ದೇನೂ ಇಲ್ಲವಾದರೆ ಈ ಸಂದರ್ಭವನ್ನು ಆಪರೇಟರ್ಗಳು ರಿಗ್ಗಿಂಗ್ಗಾಗಿ ಉಪಯೋಗಿಸಿಕೊಂಡು ಧ್ವನ್ಯಾರ್ಥಪೀಡಿತ ಅಮಾಯಕ ಸಂಕುಲದ ಚಿಕ್ಕಪುಟ್ಟ ಕಿಸೆಗಳಿಂದ ದುಡ್ಡು ಬಾಚಲಾಗುತ್ತದೆ ಎಂದೇ ತಿಳಿಯಬೇಕಾಗುತ್ತದೆ. ಹಾಗಾದರೆ ಬೋನಸ್ ನೀಡುವುದಕ್ಕೆ ಯಾವುದೇ ಕಾರಣ ಇಲ್ಲವೇ ಎಂದು ನೀವು ಕೇಳಬಹುದು. ಬೋನಸ್ ನೀಡುವುದಕ್ಕೆ ಕಾರಣವಿಲ್ಲವೆಂದು ನಾನು ಹೇಳಲಿಲ್ಲ. ಬೋನಸ್ ನೀಡಿದಾಕ್ಷಣ ಶೇರು ಬೆಲೆ ಏರುವುದಕ್ಕೆ ಕಾರಣವಿಲ್ಲ ಎಂದು ಮಾತ್ರ ನಾನು ಹೇಳಿದ್ದು. ಬೋನಸ್ ನೀಡಲೂ ಒಂದು ಕಾರಣವಿದೆ. ಆದರೆ ಶೇರುಬೆಲೆ ಏರುವುದು ಆ ಕಾರಣವಲ್ಲ. ಬದ್ಲೇ ಮೇ, ಬೋನಸ್ ನೀಡಿದಾಗ ಬೆಲೆ ಇಳಿಯುತ್ತದೆ ಎಂಬುದೇ ಆ ಕಾರಣ. 1:1 ಬೋನಸ್ ನೀಡಿದರೆ ಬೆಲೆ ಅರ್ಧವಾಗುತ್ತದೆ; ಹಾಗಾಗಿ ಶೇರು ಬೆಲೆ ಮಿತಿಮೀರಿ ಹೂಡಿಕೆದಾರರ ಕೈಗೆಟುಕದ ಮಟ್ಟಕ್ಕೆ ಏರಿದಾಗ ಬೋನಸ್ ಮೂಲಕ ಅದನ್ನು ಕೆಳಗಿಳಿಸಲಾಗುತ್ತದೆ. ಹಾಗೆ ಬೋನಸ್ ಅನ್ನು ಕಾಲ ಕಾಲಕ್ಕೆ ನೀಡುತ್ತಾ ಶೇರು ಬೆಲೆಯನ್ನು ಒಂದು ಹಂತದಲ್ಲಿ ನಿಯಂತ್ರಿಸುತ್ತಾರೆ. ಇದರಿಂದ ಶೇರುಗಳು ಜನಸಾಮಾನ್ಯರ ಕೈಗೆಟಕುವ ಸಂಖ್ಯೆಯಲ್ಲಿ ಮತ್ತು ಪ್ರೈಸ್ಬ್ಯಾಂಡಿನಲ್ಲಿ ಇರುತ್ತದೆ. ಇದರಿಂದಾಗಿ ಶೇರಿನಲ್ಲಿ ಲವಲವಿಕೆ ಹೆಚ್ಚಾಗಿ ಸರ್ವರಿಗೂ ಜೀವನದಲ್ಲಿ ಕಲ್ಯಾಣವಾಗುತ್ತದೆ ಎಂಬುದು ಕಂಪೆನಿಯವರ ಅಂಬೋಣ. ಈಗ ಒಂದು ಕಂಪೆನಿಯ ದೃಷ್ಟಿಯಿಂದ ಈ ಬೋನಸ್ ವೃತ್ತಾಂತದ ಇನ್ನೊಂದು ಮಜಲನ್ನು ನೋಡೋಣ. ಶೇರು ಬೆಲೆಯ ಜೊತೆಜೊತೆಗೆ ಡಿವಿಡೆಂಡ್ ಶೇಖಡಾವನ್ನು ಕೂಡಾ ಈ ಬೊನಸ್ಸೀಕರಣ ಒಂದು ಮಿತಿಯೊಳಗೆ ನಿಯಂತ್ರಿಸಿಡುತ್ತದೆ. ಒಂದಕ್ಕೊಂದು ಬೋನಸ್ ಕೊಟ್ಟಾಗ ಹೂಡಿಕೆದಾರರ ಕೈಯಲ್ಲಿ ಮೊದಲು ಒಂದಿದ್ದ ಶೇರು ಈಗ ಎರಡಾಗುತ್ತದೆ. ಮೊದಲು ಒಂದು ಶೇರಿನ ಮೇಲೆ ನೀಡುವ ಡಿವಿಡೆಂಡ್ ಇನ್ನು ಮುಂದೆ ಎರಡು ಶೇರಿನ ಮೇಲೆ ನೀಡಬೇಕಾಗುತ್ತದೆ. ಆಗ ಡಿವಿಡೆಂಡ್ ಶೇಖಡಾ ಅರ್ಧವಾಗುತ್ತದೆ. ಆ ರೀತಿ ಬೋನಸ್ ನೀಡದೆ ಇದ್ದಲ್ಲಿ ಕೆಲವೊಂದು ಅತಿಲಾಭದಾಯಕ ಕಂಪೆನಿಗಳ ಡಿವಿಡೆಂಡ್ ಶೇಖಡಾ ಬೆಳೆದೂ ಬೆಳೆದೂ ಕಾಲಕ್ರಮೇಣ ಸಾವಿರಾರು ಶೇಖಡಾ ಡಿವಿಡೆಂಡ್ ನೀಡತೊಡಗಿಯಾವು. ಹಾಗೂ ತಮ್ಮ ಬ್ಯಾಲನ್ಸ್ ಶೀಟಿನಲ್ಲಿ ಹತ್ತಾರು ಪಾಲು ರಿಸವ್ಸರ್್ ತೋರಿಸಿಯಾವು. ಇದು ಆ ಕಂಪೆನಿಯನ್ನು ಒಂದು ಲಾಭಭಡುಕ ಕಂಪೆನಿ ಎಂಬ ರೀತಿಯಲ್ಲಿ ಬಿಂಬಿಸೀತು. ಅದಕ್ಕೆ ಅದರದ್ದೇ ಆದ ಹತ್ತು ಹಲವಾರು ತೊಂದರೆಗಳಿವೆ. ಅಂತಹ ಅಪಾಯದಿಂದ ತಪ್ಪಿಸಿಕೊಳ್ಳಲು ಈ ರೀತಿ ಬೋನಸ್ ಶೇರುಗಳು ಸಹಾಯವಾಗುತ್ತವೆ. ಈಗ ಅದೇ ನಾಣ್ಯದ ಇನ್ನೊಂದು ಮುಖ ನೋಡಿ- ಒಂದಕ್ಕೆರಡು ಬೋನಸ್ ಕೊಟ್ಟ ಮೇಲೆ ಒಂದು ಕಂಪೆನಿಯ ಸಾಧನೆ ಡಬಲ್ ಆಗಲೂ ಬೇಕಾಗುತ್ತದೆ. ಆಗದಿದ್ದಲ್ಲಿ ಶೇಖಡಾವಾರು ಡಿವಿಡೆಂಡ್ ಮೊದಲಿನ ಅರ್ಧವಾಗುತ್ತದೆ. ಒಂದಕ್ಕೆರಡು ಬೋನಸ್ ಶೇರುಕೊಟ್ಟಾಗ ಆನಂದತುಂದಿಲರಾಗಿ ಕುಣಿದಾಡಿದ ಅಮಾಯಕ ಜನರು ಅದೇ ಬೋನಸ್ ಕಾರಣಕ್ಕೆ ಡಿವಿಡೆಂಡ್ ಅರ್ಧವಾಶಿಯಾದರೆ ಕುಪಿತರಾಗುತ್ತಾರೆ. ಈಗ ಈ ಕಂಪೆನಿ ಬುರೂಸು, ಏನೂ ಪ್ರಯೋಜನವಿಲ್ಲ ಎಂಬ ಬ್ಯಾಡ್ ಇಮೇಜ್ ಸೃಷ್ಟಿಯಾಗುತ್ತದೆ. ಅದಕ್ಕಾಗಿ ಬೋನಸ್ಸಿಗೆ ತತ್ಸಮವಾಗಿ ಡಿವಿಡೆಂಡ್ ಜಾಸ್ತಿ ಮಾಡಲಾಗದ ಕಂಪೆನಿಗಳು ಬೋನಸ್ ನೀಡಲು ಹೆದರುತ್ತಾರೆ. ಅಂತಹ ಕಷ್ಟದ ಸಂದರ್ಭಗಳಲ್ಲಿ ಕಂಪೆನಿಗಳು ಬೋನಸ್ಸಿಗೆ ಬದಲಾಗಿ ಶೇರಿನ ಮುಖಬೆಲೆಯನ್ನು ವಿಭಜಿಸುತ್ತಾರೆ (ಖಚಿಡಿಜ ಠಿಟಣಣಟಿರ). ಹತ್ತು ರುಪಾಯಿ ಮುಖ ಬೆಲೆಯ ಒಂದು ಶೇರನ್ನು ವಿಭಜಿಸಿ ಐದು ರೂಪಾಯಿಗಳ ಎರಡು ಶೇರು ನೀಡುತ್ತಾರೆ. ಅಥವ ಎರಡು ರೂಪಾಯಿಗಳ ಐದು ಶೇರು ಅಥವ ಒಂದು ರುಪಾಯಿಯ ಹತ್ತು ಶೇರು, ಇತ್ಯಾದಿ ನೀಡುತ್ತಾರೆ. ಇದರಿಂದಾಗಿ ಬೋನಸ್ ಶೇರಿನಲ್ಲಿ ಆಗುವಂತೆಯೇ ಮಾರುಕಟ್ಟೆಯ ಬೆಲೆ ಕೈಗೆಟಕುವ ಮಟ್ಟಕ್ಕೆ ಇಳಿಯುತ್ತದೆ ಅಲ್ಲದೆ ಹೆಚ್ಚುವರಿ ಡಿವಿಡೆಂಡ್ ಹಂಚುವ ವರಿ ಇರುವುದಿಲ್ಲ ಯಾನೀ ಕೀ, ಬೆಸ್ಟ್ ಆಫ್ ಬೋತ್ ವಲ್ಡ್ಸರ್್!! ಅಟ್ಯಾಚ್ಮೆಂಟ್: ಕಳೆದವಾರ ಗುರುಗುಂಟಿರಾಯರ ಆನ್-ಲೈನ್ ಸರ್ಕಸ್ಸನ್ನು ಓದಿದ ಅನೇಕರು ಹರ್ಷಿತರಾಗಿ ಫೋನಾಯಿಸಿದ್ದಾರೆ. ಆದರೆ ಶ್ರೀನಿವಾಸ ಉಪಾಧ್ಯಾಯರು ಮಾತ್ರ ತಮ್ಮ ದೂರದ ಅಂಕಲ್ ಜಿ.ಜಿ.ರಾಯರನ್ನು ಗಾಳಿಗೆ ಹಿಡಿದಿದ್ದೇನೆ (ಇದು ಯಾವ ಸೀಮೆ ಭಾಷೆ ಮಾರಾಯ್ರೇ? ತಮಾಷೆ ಮಾಡಿದ್ದೇನೆ ಎಂಬ ಅರ್ಥ ಇರಬಹುದು ಅಲ್ಲವೇ?) ಎಂದು ಭಾರೀ ಬೇಜಾರು ಮತ್ತು ಸ್ವಲ್ಪ ಕೋಪದಿಂದಲೇ ನನ್ನ ಹತ್ತಿರ ಮಾತನಾಡಿದರು. ಬೇಕಾದರೆ ರಾಯರನ್ನು ಕಂಪ್ಯೂಟರ್ ಕ್ಲಾಸಿಗೆ ಕಳುಹಿಸಿಕೊಡಿ; ಅವರೇನೂ ಪಾಸ್ವಡರ್್ ಹಾಕಲೂ ಗೊತ್ತಿಲ್ಲದಷ್ಟು ಅಜ್ಞಾನಿಗಳೇ? ನೀವೆಂತದ್ದು? ಅಂತ ಸ್ವಲ್ಪ ರೇಗಿದರು. ರಾಡಿಯಾ ಟೇಪ್ ಥರ ಗುರುಗುಂಟಿರಾಯರ ಮನೆಯಲ್ಲಿ ನಡೆದ ವೃತ್ತಾಂತವನ್ನು ಉದಯವಾಣಿ ಪೇಪರಿನಲ್ಲಿ ಲೀಕ್ ಮಾಡಿದ್ದು ರಾಯರಿಗೆ ಮುಜುಗರವನ್ನು ತಂದಿದೆ ಎಂದು ಕಾಣುತ್ತದೆ. ಕಾಟರ್ೂನಿಸ್ಟ್ ನಾಗಾನಾಥ್ ಅವರ ಚಿತ್ರಣವನ್ನು ನೋಡಿದ ಮೇಲಂತೂ ರಾಯರು ತುಂಬಾ ಅಪ್ಸೆಟ್ ಆಗಿ ಬುಸುಬುಸುನೆ ಗೊಣಗಾಡುತ್ತಾ ಇದ್ದಾರಂತೆ. ಹಾಗಂತ ನಾಗಾನಾಥ್ಗೆ ಯಾರದೋ ಮೂಲಕ ಸುದ್ದಿ ಸಿಕ್ಕಿದೆಯಂತೆ. ಅದು ಹೌದಾ ಮೊಳೆಯಾರ್ರೇ ಅಂತ ನಾಗಾನಾಥ್ ಮೊನ್ನೆ ನನ್ನಲ್ಲಿ ಫೋನ್ನಲ್ಲಿ ವಿಚಾರಿಸ್ತಾ ಇದ್ರು. ಇಲರ್ಿ ಬಿಡಿ, ನೀವು ತಲೆಬಿಸಿ ಮಾಡ್ಬೇಡಿ, ಅವರತ್ರ ನಾನು ಮಾತಾಡ್ತೇನೆ ಅಂತ ಅವರಿಗೆ ಸಮಾಧಾನ ಹೇಳಿ ಫೋನ್ ಇಟ್ಟೆ. ಸಧ್ಯಕ್ಕೆ ಅವರಿಂದ ಸ್ವಲ್ಪ ಸುಮ್ಮನೆ ದೂರವಿರೋದೇ ವಾಸಿ. ಹಾಗಾಗಿ ಈ ಬಾರಿ ರಾಯರೂ ಬೇಡ, ಅವರನ್ನು ಬಿಸಿಲಲ್ಲೋ ಮಳೆಯಲ್ಲೋ ಅಥವ ಈ ಡಿಸೆಂಬರ್ ಚಳಿಯಲ್ಲೋ ಹಿಡಿಯುವುದೂ ಬೇಡ! ಮೊದಲು ಸ್ವಲ್ಪ ರಾಜಿ ಪಂಚಾಯ್ತಿಕೆ ಆಗ್ಬೇಕು. ಎಂತದ್ದಕ್ಕೂ ಈ ಕ್ರಿಸ್ಮಸ್-ಹೊಸ ವರ್ಷದ ಸಂಭ್ರಮ ಮುಗೀಲಿ. ಈ ರಜಾಕಾಲದಲ್ಲಿ ಮನೆಯಲ್ಲಿರುವ ಎರಡು ಮಕ್ಕಳನ್ನೇ ಸುಧಾರಿಸುವುದು ಕಷ್ಟವಾಗಿರುವಾಗ ಇನ್ನು ಈ ರಾಯರನ್ನೂ ಕಟ್ಟಿಕೊಂಡು ನಾನೇನು ಮಾಡಲಿ? ರಜೆ ಕಳಿಯಲಿ, ಆಮೇಲೆ ನೋಡೋಣ.]]>

‍ಲೇಖಕರು G

December 28, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: