ಬೆರಗಿನ ಚಲನೆ…

ಚ ಸರ್ವಮಂಗಳ

ಒಳಹೋಗುತ್ತಿದ್ದಂತೆ ಗಾಂಧಿ ಭವನ.
ಗಾಂಧಿ ಎದುರಾಗುತ್ತಾರೆ!
ಓರೆಯಾಗಿ ಬಾಗಿರುವ ಬೋಳು ತಲೆ:ಶಾಂತವಾಗಿ
ಮುಚ್ಚಿಕೊಂಡಿರುವ ಕನ್ನಡಕದ ಹಿಂದಿರುವ ಕಣ್ಣುಗಳು
ಕೂತಷ್ಟು ಜಾಗ ಬಿಟ್ಟರೆ ಉಳಿದಂತೆ ಬೆತ್ತಲೆ:
ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಒಂದಿಷ್ಟೂ ಕೊಬ್ಬಿಲ್ಲ
ಬೊಚ್ಚು ಬಾಯಿ ಮುಚ್ಚಿಕೊಂಡ ಪ್ರಶಾಂತ ಮುಖಮುದ್ರೆ.
ಅಪಾರ ಸಮಾಧಾನ ಸಂತ ಸ್ಥಿತಿ, ಏಕಾಗ್ರಚಿತ್ತ
ಒಳಹೊರಗನ್ನು ಏಕತ್ರಗೊಳಿಸಿದ ಯೋಗಿ!

ಗಾಂಧಿ ನೀನು ಸದಾ ಚಲಿಸುವ ಚಕಿತ.
ಹೋರಾಟಕ್ಕೆ ಇಳಿದೆ ಗಂಟುಮೋರೆಯಿಲ್ಲ ಇಲ್ಲ ಸಿಡಿಮಿಡಿ
ಸಿಡಿಯುವ ಮದ್ದುಗುಂಡಂತೂ ಮೊದಲೇ ಇಲ್ಲ
ಕೈಯಲ್ಲಿನ ಕೋಲು ಮೂರನೆ ಕಾಲಾಗಿ
ದಾಪುಗಾಲಿಟ್ಟ ನಡೆ! ಹಿಡಿ ಉಪ್ಪಿ ನೆಪದಲ್ಲಿ
ಚಕ್ರವರ್ತಿಯ ದರ್ಪ ಮುರಿದ ಮೋಡಿಗಾರ!
ಕೊನರನ್ನೂ ಚಿಗುರಿಸುವಂತೆ ಪುಟ ಪುಟನೆ ನಡೆದೆ!
ನೀನು ಇಟ್ಟ ಒಂದೊಂದು ನಡೆಯಲ್ಲೂ
ಸರ್ವ ಸಾಧ್ಯತೆಯ ಬೆರಗು;
ತರಿ ತರಿದರೂ ಅವಕಾಶವಿದ್ದಲ್ಲಿ ಚಿಗುರುವ ಅರಳಿಮರ
ಆಗಬೇಕು ಮನುಷ್ಯ ಹಾಗೇ ಎಂದು ಬಯಸಿದೆ ನೀನು
ಗೊತ್ತರಿಯದ ವರ್ತಮಾನ ಗುರಿಯಾದ ಭವಿಷ್ಯ
ಚಲಿಸುತ್ತಿದ್ದೇವೆ ನಾವು ಅಭಿವೃದ್ಧಿ ಮಂತ್ರ ಪಠಣ!

ಹೆತ್ತ ಒಡಲನ್ನೇ ರಂಪಸ್ಥಳ ಮಾಡಿರುವ ನಿನ್ನ ಸಂತಾನ
ಬಕಾಸುರನನ್ನು ದೊರೆ ಎಂದು ಒಪ್ಪಿಕೊಂಡ ಮೇಲೆ
ದಿನಕ್ಕೊಂದು ಅಳಿಯನ ಊಟ ಕೊಡದೆ ಬೇರೆ ಗತಿಯಿಲ್ಲ ನಮಗೆ!
ನಿನ್ನಿಂದ ಹೊರಳಿ ಸಾಗುತ್ತಿದ್ದೇವೆ ಉರುಳಿ ಬಿಟ್ಟಾಯ್ತು
ಚಕ್ರ ಇಳಕಲ್ಲು ದಾರಿಯಲ್ಲಿ ಹಿಂದಕ್ಕೆ ಹೋಗೋದು
ಈಗ ಅಸಾಧ್ಯ.
ಮಂಡಿ ಮೇಲೆ ಪಂಚೆ ತುಂಡುಟ್ಟು
ಬ್ರಿಟಿಷ್ ದೊರೆಯ ಬೆಚ್ಚಿಸಿದ ಧೀರ ಗಂಭೀರ
ಸರಳ ಸಹಜ ಸಾಚ ನಡೆ ಆ ಸಾಮ್ರಾಜ್ಯಶಾಯಿ ಮುಂದೆ
ನನ್ನ ಬದುಕೆ ನನ್ನ ಸಂದೇಶ-ಜಗತ್ತಿಗೆ ಸಾರಿದ ಸಂತ
ನೀನು!!

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: