ಆಕರ್ಷ್ ಗೌಡ
ಮೂಡಿಗೆರೆಯ ಮೋಡಿಗಾರ
ಪೂರ್ಣ ಚಂದ್ರ ತೇಜಸ್ವಿ !
ಕಾಡು ಅಲೆದು ಮೇಡು ಸುತ್ತಿ
ಬದುಕಿದಂಥ ತಾಪಸಿ !
ಚಂದ್ರಯಾನ ಹಾರುತಟ್ಟೆ
ಬೆರಗನಿತ್ತ ಮಾಂತ್ರಿಕ !
ಗಣಕದಲ್ಲೂ ತಾಯ ನುಡಿಗೆ
ಕೀರ್ತಿ ತಂದ ತಾಂತ್ರಿಕ !
ಬೆವರು ಸುರಿಸಿ ದುಡಿಮೆಗೈದ
ಕಾಫಿ ಕೃಷಿಯ ಸಾಧಕ !
ಪಕ್ಷಿ ಕೀಟ ಚಿತ್ರ ತೆಗೆದ
ನಿತ್ಯ ಪ್ರಕೃತಿ ಶೋಧಕ !
ಕಾಡಿನಲ್ಲಿ ಇದ್ರು ಕೂಡ
ಬಳಸಿ ಗಣಕ ಕ್ಯಾಮರ !
ಏರೋಪ್ಲೇನ್ ಚಿಟ್ಟೆ ಚರಿತೆ
ನೀಡಿದಂಥ ಚಂದಿರ !
ಹಾರು ಓತಿ ಬೆನ್ನು ಹತ್ತಿ
ಜಗದ ಒಗಟು ಬಿಡಿಸಿದೆ !
ತುಂಟ ಮಗು ಯುವಕರೆದೆಗೆ ಅಮೃತ ಸುಧೆಯ ಹರಿಸಿದೆ !
Very nice