
ಬಶೀರ್ ಬಿ.ಎಂ.
—–
ದೀಪಾವಳಿಯ ದಿನ
ಮನೆಬಾಗಿಲಲ್ಲಿ
ಎರಡು ಹಣತೆಗಳನ್ನು ಹಚ್ಚಿಟ್ಟೆ
ಈದ್ ನ ದಿನ ಖೀರ್ ಮಾಡಿ
ನೆರೆ ಮನೆಗಳಿಗೆಲ್ಲ ಹಂಚಿ ಬಿಟ್ಟೆ
ಕ್ರಿಸ್ ಮಸ್ ದಿನ ನಕ್ಷತ್ರವೊಂದನ್ನು
ಹೆಬ್ಬಾಗಿಲಲ್ಲಿ ತೂಗು ಬಿಟ್ಟೆ
ಯಾರೋ ಕೇಳಿದರು
“ನಿಮ್ಮ ಧರ್ಮ ಯಾವುದು ?”
ದೀಪಾವಳಿಯ ಹಣತೆ
ಈದ್ ನ ಖೀರ್
ಕ್ರಿಸ್ಮಸ್ ನ ನಕ್ಷತ್ರ
ನನ್ನ ಧರ್ಮ
ಹೋ ಹೌದೇ …
ಮುಗುಳ್ನಕ್ಕರು
ಆ ನಗುವಿನಲ್ಲಿ ಹಣತೆಯ ಬೆಳಕು
ಖೀರ್ ನ ಸಿಹಿ
ನಕ್ಷತ್ರಗಳ ಹೊಳಪು !
0 ಪ್ರತಿಕ್ರಿಯೆಗಳು