ಆಂಗ್ಲ ಭಾಷಾ ಉಪನ್ಯಾಸಕ ಜಿ.ಆರ್. ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ ‘ಬಾಳನೌಕೆಗೆ ಬೆಳಕಿನ ದೀಪ’ವನ್ನು ಬಿಡುಗಡೆ ಮಾಡಲಾಯಿತು. ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಶೋಧ ಪುಸ್ತಕ ಪ್ರಕಾಶನ ಮತ್ತು ದಾವಣಗೆರೆ ಜಿಲ್ಲಾ ಸಾಹಿತ್ಯ ಪರಿಷತ್ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹಿರಿಯ ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಕೃತಿ ಬಿಡುಗಡೆ ಮಾಡಿದರು.
ನಿವೃತ್ತ ಪ್ರಾಚಾರ್ಯರು ಪ್ರೊ.ಕೆ.ಎಸ್. ಈಶ್ವರಪ್ಪ, ಸಾಹಿತಿ ಡಾ.ಆನಂದ್ ಋಗ್ವೇದಿ, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಸ್.ಸಿ.ಗೌರಿಶಂಕರ್, ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್. ವಿ.ವಾಮದೇವಪ್ಪ, ಕಸಾಪದ ಕಾರ್ಯದರ್ಶಿ ದಿಳ್ಳೆಪ್ಪ, ಸುಭಾಷಿಣಿ ಮಂಜುನಾಥ್, ಸತ್ಯಭಾಮ ಎಚ್. ಕೆ, ನಾಗರಾಜ ಸಿರಿಗೆರೆ, ಪಾಪುಗುರು ಉಪಸ್ಥಿತರಿದ್ದರು.









0 ಪ್ರತಿಕ್ರಿಯೆಗಳು