ಬಾಳಂತಿ ಕಂಡ ‘ಬಾಳಂತಿ ಪುರಾಣ’ ರಿಲೀಸ್

ಶ್ರೀಕಲಾ ಡಿ ಎಸ್ ಕಂಡಂತೆ ಬಹುರೂಪಿ ಪ್ರಕಾಶನದ

ಬಾಳಂತಿ ಪುರಾಣ ಬಿಡುಗಡೆಯ ಪುರಾಣ

ನನ್ನ ಮೊದಲ ಪುಸ್ತಕ #ಬಾಳಂತಿಪುರಾಣ ಬಹುರೂಪಿಯ ಅಂಗಳದಲ್ಲಿ ಬಿಡುಗಡೆಗೊಂಡ ಹೊತ್ತು. ಜೊತೆಗಿದ್ದದ್ದು ನಿರ್ದೇಶಕ ಬಿ.ಸುರೇಶ, ನಟಿ-ಲೇಖಕಿ, ಜನದನಿ ಸಂಸ್ಥೆಯ ಸಂಘಟಕರಾದ ಜಯಲಕ್ಷ್ಮೀ ಪಾಟೀಲ್ ಮತ್ತು ಬಹುರೂಪಿ, ಅವಧಿಯ ರೂವಾರಿ ಜಿ.ಎನ್.ಮೋಹನ್. ಅವರಾಡಿದ ಮಾತುಗಳಿಂದ ಮತ್ತಷ್ಟು ಖುಷಿಯಾಗಿ ಎರಡು ರೌಂಡ್ ಊದಿಕೊಂಡಿದ್ದೇನೆ. ಇನ್ನು ಅದನ್ನಿಳಿಸುವ ವ್ಯಾಯಾಮವಾಗಬೇಕಿದೆ! ಈ ಪ್ರೀತಿಗೆ ನಮನ. ಎಲ್ಲರಿಗೂ ಧನ್ಯವಾದ.

********

ಬಿ.ಸುರೇಶ್ ಹೀಗಂದ್ರು- ನೀವು ಗಂಡಸರಾಗಿದ್ದರೆ, ಮದುವೆಯಾಗಿದ್ದರೆ, ಮಗುವಾಗುವ ಆಸುಪಾಸಿನಲ್ಲಿದ್ದರೆ ತಪ್ಪದೆ ಈ ಪುಸ್ತಕ ಓದಬೇಕು. ಅಕಸ್ಮಾತ್ ನೀವು ಮದುವೆ ಆಗಿಲ್ಲದೆ ಇದ್ದರೆ ಆಗಲೂ ಈ ಪುಸ್ತಕ ಓದಬೇಕು. ಮದುವೆಯಾಗಿ, ಮಕ್ಕಳಾಗಿ, ನಿವೃತ್ತಿ ಹಂತ ತಲುಪಿ ನನ್ನ ಹಾಗಿನ ವಯಸ್ಸಿನವರಾಗಿದ್ದರೆ ಆಗಲೂ ಓದಬೇಕು. ಯಾಕೆಂದರೆ ಮಗುವಾದ ನಂತರ ಹೆಣ್ಣುಮಕ್ಕಳಿಗಷ್ಟೇ ಸೀಮಿತವಾಗಿರುವ ಸಂಕಟದ, ಯಾತನೆಯ ಲೋಕವನ್ನು ಗಂಡಸರಿಗೂ ತಿಳಿಸುತ್ತದೆ. ಅದೆಲ್ಲವನ್ನೂ ಮೀರಿ ಸಂಕಟಗಳಾಚೆಗೆ ಪಡುವ ಖುಷಿಯನ್ನು ಹೇಳುತ್ತಲೇ, ಹೆಣ್ಣಿನ ದೊಡ್ಡ ಅನುಭವ ಪ್ರಪಂಚ ಗಂಡಿಗೂ ತಿಳಿಯುವಂತೆ ಮಾಡಿದ ಪುಸ್ತಕ ಇದು.

*********

ಜಯಲಕ್ಷ್ಮಿ ಪಾಟೀಲ್- ಹೆರಿಗೆ ಆಗುವ ಆ ಪ್ರಕ್ರಿಯೆಯನ್ನು ನಿಸ್ಸಂಕೋಚವಾಗಿ, ಸ್ಪಷ್ಟವಾಗಿ ಬರೆದಿದ್ದಾರೆ. ಯೋನಿ ಅನ್ನುವ ಶಬ್ದವನ್ನು ಬಳಸಿದರೆ ಅಶ್ಲೀಲ ಎಂಬ ಮನಸ್ಥಿತಿ ಇರುವಾಗ, ‘ಯೋನಿ’ ಪದಕ್ಕೇ ಗೌರವ ತಂದುಕೊಟ್ಟ ಪುಸ್ತಕ ಇದು. ಹೆರಿಗೆಯ ಕ್ಷಣವನ್ನು ಎಷ್ಟು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಎಂದರೆ, ಓದಿದ ನಾನು ಒಂದು ಕ್ಷಣ ‘ವಾವ್’ ಅಂದುಬಿಟ್ಟೆ.

**********

ಜಿ.ಎನ್.ಮೋಹನ್- ಬಾಳಂತಿ ಪುರಾಣ ಕೃತಿಯಲ್ಲಿ ನಮ್ಮ ಹುಟ್ಟಿನ ಕ್ಷಣಗಳ ಲೋಕವನ್ನು ಶ್ರೀಕಲಾ ಬಿಚ್ಚಿಟ್ಟಿದ್ದಾರೆ. ಬಾಣಂತನ, ತಾಯಿ-ಮಗುವಿನ ಆರೈಕೆ ಇತ್ಯಾದಿಗಳ ಬಗ್ಗೆ ಇದುವರೆಗೆ ಬಂದ ಪುಸ್ತಕಗಳೆಲ್ಲಾ ವೈದ್ಯರದೇ. ಆದರೆ ಬಾಳಂತಿಯೇ ತಾನು ಅನುಭವಿಸಿದ ಹೆರಿಗೆ ನೋವಿನಿಂದ ಹಿಡಿದು, ಆ ನಂತರದಲ್ಲಿ ಆದ ಅನುಭವಗಳನ್ನು ಕಟ್ಟಿಕೊಟ್ಟಿದ್ದು ಕನ್ನಡದಲ್ಲಿ ಇದೇ ಮೊದಲು.

**********

ಆನ್ ಲೈನ್ ಖರೀದಿಯ ಲಿಂಕ್-
https://www.bahuroopi.in/Baalanti-Purana-p135791872

https://www.amazon.in/…/pro…/8193853377/ref=cx_skuctr_share…

ಅಂಕಿತ, ನವಕರ್ನಾಟಕ, ಆಕೃತಿ, ಐ ಬಿ ಎಚ್, ಸ್ನೇಹ ಪ್ರಕಾಶನ ಸೇರಿದಂತೆ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯ.
#ನನ್ನಮೊದಲಪುಸ್ತಕ
#ಬಾಳಂತಿಪುರಾಣ

www.bahuroopi.in

‍ಲೇಖಕರು avadhi

April 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kotresh T A M

    ಒಂದು ಪ್ಯಾರಾ ಓದಲು ಹಾಕಬೇಕಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: